ಬೆಂಗಳೂರು: ಎತ್ತ ಕಣ್ಣು ಹಾಯಿಸಿದ್ರೂ ಕಲರ್ ಫುಲ್ ಕಲಾಕೃತಿಗಳು, ಮತ್ತೊಂದು ಕಡೆ ಕಣ್ಣು ಕುಕ್ಕುವಂತ ಮೆಟಲ್ ಆರ್ಟ್ , ಹೀಗೆ ಒಂದೇ ಸ್ಥಳದಲ್ಲಿ ಇಂದು ನೂರಾರು ಕಲಾಕೃತಿಗಳು ಪ್ರದರ್ಶನದ ಜೊತೆಗೆ ಮಾರಾಟಗೊಂಡವು . ಎಸ್. ಇದೇ ಮೊದಲ ಬಾರಿಗೆ ಭಾರತ ಕಲಾ ಉತ್ಸವವನ್ನ ಚಿತ್ರಕಲಾ ಪರಿಷತ್ ನಲ್ಲಿ ಏರ್ಪಡಿಸಿದ್ದು, 100 ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ರು. 3 ಸಾವಿರಕ್ಕಿಂತ ಅಧಿಕ ಕಲಾಕೃತಿಗಳು, 80ಕ್ಕೂ ಅಧಿಕ ಮಳಿಗೆಗಳಲ್ಲಿ ಕಲಾಕೃತಿಗಳು ಪ್ರದರ್ಶನಗೊಂಡಿತ್ತು. ಮೊದಲಿಗೆ 10 ಸಾವಿರದಿಂದ ಶುರುವಾಗುವ ಕಲಾಕೃತಿ 15 ಲಕ್ಷದವರೆಗೂ ಇತ್ತು. ಇನ್ನು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಭಾರತ ಕಲಾ ಉತ್ಸವಕ್ಕೆ ಚಾಲನೆ ನೀಡಿದ್ರು. 4 ದಿನಗಳ ಕಾಲ ಭಾರತ ಕಲಾ ಉತ್ಸವ ನಡೆಯಲಿದೆ. ಒಂದೊಂದು ಕಲಾಕೃತಿಯು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ.
ಇನ್ನು ಈ ಪ್ರದರ್ಶನದಲ್ಲಿ ಆಯಿಲ್ ಫೈಂಟಿಂಗ್ಸ್, ಪೆನ್ಸಿಲ್ ಸ್ಕೆಚ್, ವಾಟರ್ ಪೈಂಟಿಂಗ್, ಅಬ್ಸ್ಟ್ರಾಕ್ಟ್ ಪೈಂಟಿಂಗ್, ಮ್ಯೂರಲ್ಸ್ ಸೇರಿ ನೂರಾರು ತರಹೇವಾರಿ ಫೈಂಟಿಂಗ್ಸ್ ಪ್ರದರ್ಶನಗೊಂಡವು. ಹಳ್ಳಿಯ ಸೊಬಗು, ತಂಜಾವೂರು ಪೈಂಟಿಂಗ್ಸ್ ಹೀಗೆ ಒದಕ್ಕಿಂತ ಒಂದು ವಿಭಿನ್ನವಾಗಿದ್ದವು. ಸುಮಾರು 50 ರೂಪಾಯಿಯಿಂದ 10 ಲಕ್ಷ ದವರೆಗೆ ಬೆಲೆ ಬಾಳುವ ಪೇಂಟಿಂಗ್ಸ್ ಮಾರುತ್ತಿದ್ರು
ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಭಾರತ ಕಲಾ ಉತ್ಸವಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ದಿನ ನಡೆಯುತ್ತಿರುವ ಕಲಾ ಉತ್ಸವದಲ್ಲಿ ನೂರಾರು ಜನರು ಭಾಗಿಯಾಗಿದ್ರು. ಇನ್ನು ನಾಲ್ಕು ದಿನಗಳ ಈ ಕಲಾ ಉತ್ಸವಕ್ಕೆ ವಿಸಿಟ್ ಕೊಟ್ಟು ನಿಮಗೆ ಬೇಕಾದ ಕಲಾಕೃತಿಯನ್ನ ಕೊಂಡುಕೊಳ್ಳಬಹುದು.