Thursday, April 25, 2024

ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸಿದ ಕೇಂದ್ರ ಸರಕಾರ

ಬೆಂಗಳೂರು : ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆ ರಾಜ್ಯದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಲಾಗಿದೆ.

ಇನ್ಮುಂದೆ ಶಿಕ್ಷಕರು ಮಕ್ಕಳಿಗೆ ಹೋಮ್ ವರ್ಕ್ ಕೊಡುವಂತಿಲ್ಲ. ಹೀಗಾಗಿ ಸದ್ಯದಲ್ಲಿಯೇ ರಾಜ್ಯದ ಮಕ್ಕಳ ಹೋಮ್‌ ವರ್ಕ್​ಗೆ ಬೀಳಲಿದೆ. ಸರ್ಕಾರಿ ಶಾಲೆ ರೀತಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದೆ. 1, 2ನೇ ತರಗತಿಯವರಿಗೆ ನಲಿ-ಕಲಿ ರೀತಿ ಮಾತ್ರ ಪುಟ್ಟ ಮಕ್ಕಳಿಗೆ ಶಿಕ್ಷಣ ಕೊಡಬೇಕು ಅವರಿಗೆ ಹೋಂ ವರ್ಕ್ ಕೊಡೋ ಆಗಿಲ್ಲ ಎಂಬ ನಿಯಮವು ಸರ್ಕಾರಿ ಶಾಲೆಗಳಿಗೆ ಈ ವರ್ಷದಿಂದ್ಲೇ ಜಾರಿಯಾಗುವ ಸಾಧ್ಯತೆ ಇದೆ.

ಎನ್ ಇ ಪಿ ಶಿಕ್ಷಣ ಕ್ರಮದ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್‌ ವರ್ಕ್ ನೀಡುವಂತಿಲ್ಲ. ಆದರೆ ಖಾಸಗಿ ಶಾಲೆಯಲ್ಲಿ ಅತಿ ಹೆಚ್ಚು ಹೋಂ ವರ್ಕ್ ನೀಡುತ್ತಾರೆ. ಇದರಿಂದ ಮಕ್ಕಳಿಗೆ ಮನೆಯಲ್ಲಿಯೂ ಒತ್ತಡ ಹೇರಲಾಗುತ್ತಿದೆ. ಇದರಿಂದ ಬಾಲ್ಯಾವಸ್ಥೆಯಲ್ಲಿಯೇ ಅವರಿಗೆ ವಿದ್ಯಾಭ್ಯಾಸದ ಒತ್ತಡ ಬೇಡ ಎಂದಿದ್ದಾರೆ.

“ಶಾಲಾ ಮಕ್ಕಳ ಹೋಮ್‌ವರ್ಕ್‌ ಕುರಿತು, ವಿವಿಧ ಹಂತದ ವಿದ್ಯಾರ್ಥಿಗಳಿಗೆ ಒಂದೊಂದು ನಿಯಮವನ್ನು ತಿಳಿಸಿದೆ. 1 ರಿಂದ 2 ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಹೋಮ್‌ವರ್ಕ್‌ ನೀಡುವಂತಿಲ್ಲ. ಅದರ ಬದಲಾಗಿ ಈ ಮಕ್ಕಳಿಗೆ ತಮ್ಮ ಸಮಯವನ್ನು ಹಿಂದಿನ ದಿನದ ಸಂಜೆ ಹೇಗೆ ಕಳೆದಿರಿ, ಏನು ತಿಂದಿರಿ, ಯಾವ ಆಟ ಆಡಿದಿರಿ ಎಂದು ಹೇಳಲು ಪ್ರೋತ್ಸಾಹಿಸಬೇಕು. 3, 4, 5 ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಗರಿಷ್ಠ 2 ಗಂಟೆಗಳ ಹೋಮ್‌ ವರ್ಕ್‌ ನೀಡುವುದು, ಅದರ ಜತೆಗೆ ಮಕ್ಕಳಿಗೆ ಸಂಜೆ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರು ಕೇಳಬಹುದು. 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ಗರಿಷ್ಠ 1 ಗಂಟೆ ಅವಧಿಯ ಹೋಮ್‌ ವರ್ಕ್ ನೀಡಬಹುದು” ಎಂದು ಪಾಲಿಸಿ ಹೇಳಿದೆ.

ಕನಿಷ್ಟ 2ನೇ ತರಗತಿವರೆಗೆ ಹೋಂ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಒಲವು ತೋರಿದೆ. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ನಲಿಕಲಿ ಪದ್ಧತಿ ಜಾರಿಯಲ್ಲಿದೆ. ಇನ್ ಇ ಪಿ‌ ಜಾರಿ ಮುನ್ನವೇ ಖಾಸಗಿ ಶಾಲೆಯಲ್ಲಿ ಹೋಂ ವರ್ಕ್ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆದಿದೆ.

RELATED ARTICLES

Related Articles

TRENDING ARTICLES