Wednesday, January 22, 2025

ಯೂನಿಫಾರಂ ತೆಗೆದು ಜೈಲಿಗೆ ಹಾಕ್ತಿವಿ : ಆರಗ ಜ್ಞಾನೇಂದ್ರ

ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿರೋಧ ಪಕ್ಷಗಳಿಗೆ ಯಾವುದೇ ವಿಚಾರಗಳಿಲ್ಲ. ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಕಾಲದಲ್ಲೂ ಪಿಯುಸಿ ಎಕ್ಸಾಂ ಹಗರಣ ಆಗಿತ್ತು. ಇದರಿಂದ ಆರು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡ್ಕೊಂಡಿದ್ದರು. ಆಗ ನಾಲ್ಕು ಬಾರಿ ಪರೀಕ್ಷೆ ಮುಂದೂಡಲಾಗಿತ್ತು. ಪಾಪ ಅದನ್ನು ಅವರು ಮರೆತಿದ್ದಾರೆ ಅನಿಸುತ್ತದೆ ವ್ಯಂಗ್ಯವಾಡಿದರು.

ಇನ್ನು ನೇಮಕಾತಿ ವಿಭಾಗದ ಯಾವುದೇ ಅಧಿಕಾರಿಯು ಈ ಪ್ರಕರಣದಲ್ಲಿ ಭಾಗಿಯಾಗಿದ್ದರೇ ಯೂನಿಫಾರಂ ಬಿಚ್ಚಿ ಜೈಲಿಗೆ ಹಾಕುತ್ತೇವೆ. ಅಲ್ಲದೇ ರಾಜಕೀಯ ಮುಖಂಡರು, ಅಧಿಕಾರಿಗಳು, ಪ್ರಭಾವಿಗಳು ಯಾರೇ ಆದರೂ ಬಿಡುವ ಮಾತೇ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಹಗರಣ ಬೆಳಕಿಗೆ ಬಂದ ಕೂಡಲೇ ಸಿಐಡಿ ತನಿಖೆಗೆ ಆದೇಶ ಮಾಡಿದ್ದೀವಿ.ಯಾರನ್ನೂ ರಕ್ಷಿಸೋ ಕೆಲಸ ಅಗಲ್ಲ. ಹೀಗಾಗಲೇ ಕಲಬುರಗಿ ಇಬ್ಬರು ಕಾಂಗ್ರೆಸ್ ಮುಖಂಡರನ್ನ ಬಂಧಿಸಿದ್ದೀವಿ. ಸಚಿವರ ಮೇಲಿನ ಆರೋಪಕ್ಕೆ ವಿರೋಧ ಪಕ್ಷಗಳು ಸೂಕ್ತ ಸಾಕ್ಷ್ಯಗಳನ್ನ ತನಿಖಾಧಿಕಾರಿಗೆ ನೀಡಲಿ. ಅದು ಬಿಟ್ಟು ಸುಮ್ಮನೆ ಮಾತಾಡಬಾರದು. ನಮ್ಮ ಅವಧಿಯಲ್ಲಿ ವಿರೋಧ ಪಕ್ಷಕ್ಕೆ ಮಾತಾಡೋಕೆ ಏನು ವಿಚಾರ ಇಲ್ಲ. ಅದಕ್ಕೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES