ಶಿವಮೊಗ್ಗ : 2023 ಕ್ಕೆ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಬಂದೇ ಬರುತ್ತದೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಕಾಂಗ್ರೆಸ್ನವರು ಅಬ್ಬರ ಮಾಡುತ್ತಾರೆ. ಅದು ಪತ್ರಿಕೆಯಲ್ಲಿ ಬರುತ್ತದೆ. ಜೆಡಿಎಸ್ ಜಲಧಾರೆ ಪತ್ರಿಕೆಯಲ್ಲಿ ಬರುತ್ತದೆ. ಆದರೆ, ಇವುಗಳಿಗೆ ಮತಗಳು ಬರಲ್ಲ. ಗ್ರಾ. ಪಂ. ಚುನಾವಣೆಯಾದಾಗ ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ.ಯಾವುದಾವುದೋ ಪಕ್ಷದಿಂದ ನಮ್ಮ ಪಕ್ಷಕ್ಕೆ ಬರ್ತಾರೆ. ಅವರು ಬರಲಿ, ಆದ್ರೆ ಪೂರ್ಣ ಪ್ರಮಾಣದ ಸರ್ಕಾರ ಮಾಡೊದು ಯಾವಾಗ..? ಎಂದರು ಪ್ರಶ್ನೆ ಮಾಡಿದರು.
ಇನ್ನು ಪ್ರೀತಿ ಸ್ನೇಹದಿಂದ ಕಾಂಗ್ರೆಸ್ನವರು, ಜೆಡಿಎಸ್ನವರು ನಮ್ಮ ಬಳಿ ಬರ್ತಾರೆ. ಅವರಿಗೆ ಇಲ್ಲಿ ಸ್ಥಾನ ಸಿಗುತ್ತೆ ಎಂದು ಗೊತ್ತು. ಹೀಗಾಗಿ ಬಿಜೆಪಿಗೆ ಬರ್ತೇನೆ ಎಂದು ಹೇಳ್ತಾರೆ. ಮೊದಲು ಈ ರೀತಿ ಇರಲಿಲ್ಲ, ಈಗ ಬಿಜೆಪಿಗೆ ಅಷ್ಟು ಶಕ್ತಿ ಬಂದಿದೆ. ಕುತ್ತಿಗೆ ಕೊಯ್ದರು, ನಾವು ಬಿಜೆಪಿ ಬಿಟ್ಟು ಹೋಗಲ್ಲ ಎನ್ನುವರು ಇದ್ದಾರೆ ಎಂದರು.
ಹಾಗು ನಾಳೆ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಬರಬೇಕಿತ್ತು. ಆದ್ರೆ ಅನಿವಾರ್ಯ ಕಾರಣದಿಂದ ಬರುವುದಕ್ಕೆ ಆಗಲಿಲ್ಲ. 2023 ಕ್ಕೆ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಬಂದೇ ಬರುತ್ತದೆ. ಬಿಜೆಪಿಗೆ ದಕ್ಷಿಣದಲ್ಲಿ ಕರ್ನಾಟಕ ಹೆಬ್ಬಾಗಿಲು ಅದನ್ನ ನಾವು ಉಳಿಸಿಕೊಳ್ಳಬೇಕು.
ಕಾಂಗ್ರೆಸ್ ನವರ ಮತ್ತು ಜೆಡಿಎಸ್ ನ ಆಟ ಏನು..? ಮುಸಲ್ಮಾನ ವೋಟಿನಿಂದನೇ ಕರ್ನಾಟಕ ಗೆಲ್ಲೊದಕ್ಕೆ ಆಗಲ್ಲ. ಹಿಜಾಬ್ ಎಲ್ಲಾ ವಿದ್ಯಾರ್ಥಿಗಳಿಗೆ ಇಷ್ಟ ಇರಲಿಲ್ಲ. 90% ವಿದ್ಯಾರ್ಥಿಗಳಿಗೆ ಅದು ಇಷ್ಟ ಇಲ್ಲ. ಕೋರ್ಟ್ ನ ಆದೇಶ ಬಗ್ಗೆ ಕಾಂಗ್ರೆಸ್ಗೆ ನಂಬಿಕೆ ಇಲ್ಲ. ಅವರ ತಂತ್ರಕ್ಕೆ ಪ್ರತಿತಂತ್ರ ನಾವು ಮಾಡಬೇಕು. ಒಬ್ಬ ವ್ಯಕ್ತಿ ಮಾಡಿರೋ ಕೆಲಸದಿಂದ ಇಡೀ ಮುಸ್ಲಿಮರ ಬಗ್ಗೆ ಅನುಮಾನ ಮೂಡುವಂತಾಗಿದೆ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.