Monday, December 23, 2024

ಈಶ್ವರಪ್ಪನ ಲಾಯರ್ ಅಲ್ಲ : ಹೆಚ್​​ ಡಿ ಕುಮಾರಸ್ವಾಮಿ

ಮೈಸೂರು : ನಾನು ಕೆ ಎಸ್ ಈಶ್ವರಪ್ಪ ಲಾಯರ್ ಅಲ್ಲ. ಅವರ ಬಗ್ಗೆ ಯಾವ ಸಾಫ್ಟ್ ಕಾರ್ನರ್ ಸಹ ಇಲ್ಲ ಎಂದು ಹೆಚ್​​ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್​​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮೈಸೂರಿನಲ್ಲಿ ಮಾತನಾಡಿದ  ನಾನು ದಾಖಲೆಗಳ ಬಗ್ಗೆ ಮಾತನಾಡಿದ್ದೇನೆ ಅಷ್ಟೇ. ಸಂತೋಷ ಅವರು ವಾಟ್ಸ್‌ಅಪ್ ಮೆಸೇಜ್ ಕಳುಹಿಸಿದ್ದಾರೆ ಅದನ್ನು ಸಾಕ್ಷಿಯಾಗಿಟ್ಟುಕೊಂಡು ಸಂಪೂರ್ಣ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಈಶ್ವರಪ್ಪ ತಪ್ಪು ಮಾಡಿದ್ದರೆ ಅವರೇ ಕಾರಣಕರ್ತರಾಗಿದ್ದರೆ ಬಂಧಿಸಿ ಎಂದರು.

ಅದುವಲ್ಲದೇ ಈಶ್ವರಪ್ಪನವರು ಗುತ್ತಿಗೆದಾರ ಸಂತೋಷ್ ಪಾಟೀಲ್​​ ನನ್ನಿಂದ ಹಣ ಕೇಳಿಲ್ಲ ಅಂತಾ  ಹೇಳಿದ್ದಾರೆ.ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಅಂತಾ ಹೇಳಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್​​ನವರಿಂದ ಕಾಂಪಿಟೇಷನ್‌ನಲ್ಲಿ ಹಣದ ನೆರವು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಎರಡು ದಿನ ವಿಧಾನಸಭೆಯಲ್ಲಿ ಮಾತನಾಡುತ್ತಾರೆ. ಈಶ್ವರಪ್ಪ ಸಾವಿಗೆ ನೇರ ಕಾರಣ ಅನ್ನೋ ದಾಖಲೆ ಕೊಟ್ಟು ಒತ್ತಾಯಿಸಿ. ಕಲ್ಲಪ್ಪ ಹಂಡಿಭಾಗ್ ಮೃತಪಟ್ಟಾಗ ನಾನು ಆತನ ಪರ ಹೋರಾಟ ಮಾಡಿದೆ. ಆಗ ನಾನು ರಾಜಕೀಯ ಮಾಡಲಿಲ್ಲ. ಅದು ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಅಲ್ಲವಾ.? ಕಲ್ಲಪ್ಪ ಹಂಡಿಭಾಗ ಸಾಯಲು ಬಿಜೆಪಿ ಕಾರಣವಾಗಿತ್ತು.

ಇನ್ನು ಡಿವೈಎಸ್‌ಪಿ ಆತ್ಮಹತ್ಯೆಗೆ ಆದಾಗ ಸಿದ್ದರಾಮಯ್ಯ ಅರೆಸ್ಟ್ ಮಾಡಿ ಅಂದವಾ.? ಎಲ್ಲದರಲ್ಲೂ ರಾಜಕಾರಣ ಮಾಡಬಾರದು. ದ್ವೇಷವಿದ್ದರೆ ಅದು ಬೇರೆ. ಒಂದು ವೇಳೆ ಜೈಲಿಗೆ ಹೋಗಿ ಬಂದ ಮೇಲೆ ನಿರಾಫರಾದಿ ಅಂದರೆ ಏನು ಮಾಡುವುದು. ದಾಖಲೆ ಇದ್ದರೆ ಜೈಲಿಗೆ ಕಳುಹಿಸಲಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES