Thursday, December 26, 2024

ಬಿಜೆಪಿ ನಾಯಕರಿಗೆ ಹುಚ್ಚು ಹಿಡಿದಿದೆ : ಬಿ.ವಿ. ಶ್ರೀನಿವಾಸ್​​

ಗದಗ : ಬಿಜೆಪಿ ನಾಯಕರಿಗೆ ನಿಜವಾಗಿಯೂ ಹುಚ್ಚು ಹಿಡಿದಿದೆ ಎಂದು ಗದಗನಲ್ಲಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ಈಶ್ವರಪ್ಪ, ಸಿ.ಟಿ.ರವಿ, ಅರಗ ಜ್ಞಾನೆಂದ್ರ ಇವರಿಗೆಲ್ಲ ತಲೆ ಸರಿ ಇಲ್ಲ ಅನಿಸುತ್ತೆ. ಹೋಮ್ ಮಿನಿಸ್ಟರ್ ಆಗೋಕೆ ಲಾಯಕ್ಕಿಲ್ಲ, ಬೆಳಿಗ್ಗೆ ಒಂದು ಸುಳ್ಳು, ಮಧ್ಯಾಹ್ನ ಸುಳ್ಳು, ಸಂಜೆ ಒಂದು ಸುಳ್ಳು ಹೇಳ್ತಾರೆ. ಇವರ ರಕ್ತದಲ್ಲೇ ಸುಳ್ಳು‌ ಹೇಳುವುದು, ಕ್ಷಮೆ ಹೇಳುವುದು ಬಂದಿದೆ. ಆದರೆ ಮಂತ್ರಿಯಾದ ಮೇಲೆ ಇವನ್ನೆಲ್ಲಾ ಬಿಡಿ ಎಂದು ಕಿಡಿಕಾರಿದರು.

ಇನ್ನು 25 ದಂಡಪಿಂಡಗಳನ್ನ ಲೋಕಸಭಾ ಸದಸ್ಯರಾಗಿ ಇಲ್ಲಿಂದ ಗೆಲ್ಲಿಸಿ‌ ಕಳಿಸಿದ್ದಾರೆ. ಕರ್ನಾಟಕದ ಪರ ಧ್ವನಿ ಎತ್ತಲಿ ಮತ್ತು ಪಾಲಿಸಿ ಮೇಕಿಂಗ್ ಮಾಡಲಿ‌ ಅಂತ ಅಲ್ಲಿಗೆ ಕಳಿಸಲಾಗಿದೆ. ಆದರೆ ಅವರು ಇಲ್ಲಿ ಕೋಮುಗಲಭೆ ಗಲಾಟೆಗಳಿಗೆ ಕುಮ್ಮುಕ್ಕು ಕೊಡುತ್ತಿದ್ದಾರೆ.

ಬಿಜೆಪಿ ಅಂದ್ರೆನೇ ಬೆಲೆ ಏರಿಕೆ, ಪ್ರಧಾನಿ ನರೇಂದ್ರ ಮೋದಿ‌ ಅಂದ್ರೆ ಬೆಲೆ ಏರಿಕೆ ಅನ್ನುವ ಪರಿಸ್ಥಿತಿಗೆ ಬಂದಿದೆ. 2014ರಲ್ಲಿ ಬಿಜೆಪಿ ಎಲ್ಲಾ ಕಡೆ ಕೂಗಿ ಕೂಗಿ ಹೇಳುತ್ತಿತ್ತು ಮೆಹೆಂಗಾ ಹಿ ಡಯಾನ ಬಂದ್ ಕಿಯಾ‌ ಹೈ ಅಂತ, ಅದೇ ಡಯಾನನ್ನ ಬಿಜೆಪಿ ಡಾರ್ಲಿಂಗ್ ಮಾಡಿಕೊಂಡು ಬೆಡ್ ರೂಮ್​​ನಲ್ಲಿ ಮಲಗಿಸಿದಾರೆ.

ಅದುವಲ್ಲದೇ ಸಾಮಾನ್ಯ ಜನರ ಹೋಟೆಲ್​​ನಲ್ಲಿ ಊಟ ಮಾಡಲು ಆಗುತ್ತಿಲ್ಲ. ಊಟ ನಾವು ತಿಂದ್ರೆ ನಮ್ಮ ಜೊತೆ ಅಮಿತ್​ ಶಾ, ನರೆಂದ್ರ ಮೋದಿನೂ ತಿಂತಾರೆ. ಇವರಿಬ್ಬರ ಬಿಲ್ ನಾವೇ ಕಟ್ಟಬೇಕು. ಹಿಜಾಬ್ ಹಲಾಲ್​​ಗಳಂಥ ಹೋರಾಟ ನಡೆಸುವವರಿಗೆ ನೇರವಾಗಿ ಬಿಜೆಪಿ ಸಪೋರ್ಟ ಮಾಡುತ್ತಿದೆ. ಕೇವಲ ಜೈಕಾರ ಹಾಕುವುದರಿಂದ ಹೊಟ್ಟೆ ತುಂಬುತ್ತಾ ? ಅಥವಾ ಕೆಲಸ ಸಿಗುತ್ತಾ ?  ಬೆಲೆ ಏರಿಕೆ ಇಳಿಯುತ್ತಾ ? ಬೇರೆ ರಾಜ್ಯಗಳಲ್ಲಿ‌ ನಾವು ಹೋದಾಗ ಕರ್ನಾಟಕ ಕೈಸಾ ಹೈ ಅಂತಾರೆ. ಅವರಿಗೆಲ್ಲಾ ಕರ್ನಾಟಕ ಅಂದ್ರೆ ನಾಟಕ ಮಾಡೋರು ಅನ್ನೋ ತರ ಟೈಟಲ್ ಕೊಟ್ಟಿದ್ರೆ ಅದು ಬಿಜೆಪಿ ಮಾತ್ರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಬಿ.ವಿ. ಶ್ರೀನಿವಾಸ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES