Monday, December 23, 2024

ರಾಜ್ಯಕ್ಕೆ ಒಕ್ಕಲಿಗ ನಾಯಕನೇ ಸಾರಥಿ…?

ಬೆಂಗಳೂರು : ಚುನಾವಣೆ ಹತ್ತಿರವಾಗ್ತಿದೆ.. ಸಂಪುಟ ಸರ್ಕಸ್ ಬೇರೆ ನಡೆಯುತ್ತಿದೆ.. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಕುರಿತು ಭರ್ಜರಿ ತಯಾರಿ ನಡೆದಿದೆ.. ಹಾಗಾದ್ರೆ, ಯಾರಿಗೆ ಪಟ್ಟ ಸಿಗಲಿದೆ.. ಯಾವ ಸಮುದಾಯಕ್ಕೆ ಸಿಗುವ ಸಾಧ್ಯತೆ ಇದೆ..?

ಬಿಜೆಪಿ ತನ್ನ ಬೇರು ಗಟ್ಟಿ ಮಾಡಿಕೊಳ್ಳಲು ಸಮುದಾಯಗಳ ಓಲೈಕೆಗೆ ಮುಂದಾಗಿದೆ. ಇನ್ನೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವಧಿ ಮುಕ್ತಾಯವಾಗುತ್ತಿದ್ದು, ಆ ಜಾಗಕ್ಕೆ ಒಬ್ಬ ಪ್ರಬಲ ನಾಯಕನ ತೆರೆಗೆ ತರಲು ವರಿಷ್ಠರು ಪ್ರಬಲ ನಾಯಕನ ಹುಡುಕಾಟದಲ್ಲಿದ್ದಾರೆ.. ಹೀಗಾಗಿ ಆ ಪ್ರಬಲ ನಾಯಕ ಒಕ್ಕಲಿಗ ಸಮುದಾಯದವರೇ ಅಗಬೇಕು ಅಂತ ನಿರ್ಧಾರ ಮಾಡಿದ್ದಾರೆ..

ಕರ್ನಾಟಕ ಬಿಜೆಪಿಗೆ ನೂತನ ಸಾರಥಿ ಮಾಡಲು ಹೈಕಮಾಂಡ್ ನಿರ್ಧಾರ ಮಾಡಿ ಆಗಿದೆ. ಜೂನ್ ತಿಂಗಳಲ್ಲಿ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷ ನೇಮಕವಾಗಲಿದ್ದಾರೆ.. ಜೂನ್ ವೇಳೆಗೆ ನಳಿನ್ ಕುಮಾರ್‌ ಕಟೀಲ್ ಅವಧಿ ಮುಕ್ತಾಯವಾಗುತ್ತಿದ್ದು, ಪ್ರಬಲ ನಾಯಕನ ಹುಡುಕಾಟದಲ್ಲಿ ದೆಹಲಿ ದೊರೆಗಳಿದ್ದಾರೆ. ಹೀಗಾಗಿ ಒಕ್ಕಲಿಗ ಸಮುದಾಯದ ರಗಡ್ ಲುಕ್ ಇರೋ ನಾಯಕನನ್ನು ಆ ಸ್ಥಾನಕ್ಕೆ ಕೂರಿಸೋ ಪ್ಲಾನ್ ಹೈಕಮಾಂಡ್‌ಗಿದೆ. ಹೌದು, ಅದಕ್ಕೂ ಕಾರಣ ಇದೆ.. ಕಾಂಗ್ರೆಸ್‌ನಲ್ಲೂ ಸಹ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾಗಿದ್ದಾರೆ..
ಜೆಡಿಎಸ್‌ನಲ್ಲಿ ಸಹ ಒಕ್ಕಲಿಗ ಹೆಚ್.ಡಿ.ಕುಮಾರಸ್ವಾಮಿಯದ್ದೇ ಹವಾ.. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೂ ಒಕ್ಕಲಿಗ ಅಧ್ಯಕ್ಷರ ನೇಮಕದ ಬಗ್ಗೆ ಪ್ಲಾನ್ ಮಾಡಿದ್ದಾರೆ ಬಿಜೆಪಿ ವರಿಷ್ಠರು..

ಬಿಜೆಪಿಗೆ ಒಕ್ಕಲಿಗ ನಾಯಕ ಸಾರಥಿಯಾಗೋದು ಪಕ್ಕಾ ಅಗಿದೆ.. ಈಗಾಗಲೇ ಲಿಂಗಾಯತ ಸಿಎಂ ಸ್ಥಾನ ಅಲಂಕರಿಸಿದ್ದು, ಆ ಸಮುದಾಯದ ಮತಗಳು ಬಿಜೆಪಿಯ ತೆಕ್ಕೆಯಲ್ಲಿ ಸೇಫ್‌ ಆಗಿವೆ.. ಈ ನಿಟ್ಟಿನಲ್ಲಿ ಒಕ್ಕಲಿಗರ ಮತಬೇಟೆಯಾಡಲು ಸಜ್ಜಾಗಿರೋ ಬಿಜೆಪಿ ಈ ಮಾಸ್ಟರ್ ಪ್ಲಾನ್ ಮಾಡಿದ್ದು, ಈಗಾಗಲೇ ನಾಲ್ವರು ಪ್ರಬಲ ನಾಯಕರ ಪಟ್ಟಿಯನ್ನು ಪರಿಶೀಲನೆ ಮಾಡ್ತಿದ್ದಾರೆ ದೆಹಲಿ ನಾಯಕರು.

ಈ ನಾಲ್ವರ ಹೆಸರನ್ನು ಈಗಾಗಲೇ ಬಿಜೆಪಿ ನಾಯಕರು ರೆಡಿ ಮಾಡಿದ್ದು, ಯಾರನ್ನ ಮಾಡಿದ್ರೆ ಲಾಭ ನಷ್ಟ ಅನ್ನೋ ಲೆಕ್ಕಾಚಾದಲ್ಲಿ ತೊಡಗಿದ್ದಾರೆ. ಆದರೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ ಅಗಿರೋದ್ರಿಂದ ಸಚಿವ ಸ್ಥಾನ ಬಿಟ್ಟು ಪಕ್ಷಾಧ್ಯಕ್ಷೆ ಹುದ್ದೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.. ಅದೇ ರೀತಿ ಸಿ.ಟಿ.ರವಿ ಸಹ ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಹೀಗಾಗಿ ಅವರು ಸಹ ಆ ಹುದ್ದೆ ಬಿಡೋ ಮನಸ್ಸಿನಲ್ಲಿ ಇಲ್ಲ.. ಇನ್ನು ಸಾಮ್ರಾಟ್ ಖ್ಯಾತಿಯ ಆರ್. ಅಶೋಕ್ ಸಹ ಬೊಮ್ಮಯಿ ಸರ್ಕಾರದಿಂದ ಹೊರ ಬರಲು ಅಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.. ಇನ್ನು ಉಳಿದಿರೋ
ಅಶ್ವತ್ಥ್ ನಾರಾಯಣ ಮಂತ್ರಿ ಸ್ಥಾನ ತೊರೆಯಲು ರೆಡಿಯಿಲ್ಲ..ಆದರೆ ಹೈಕಮಾಂಡ್‌ಗೆ ಡಾ. ಅಶ್ವತ್ಥ್ ನಾರಾಯಣ ಮತ್ತು ಸಿಟಿ ರವಿ ಮೇಲೆ ಜಾಸ್ತಿ ಒಲವು ಇದೆ ಎನ್ನಲಾಗಿದೆ..

ರಾಮನಗರದಲ್ಲಿ ನಿಂತು ಡಿಕೆ ಬ್ರದರ್‌ಗೆ ಆವಾಜ್ ಹಾಕಿ ಸೈ ಅನ್ನಿಸಿಕೊಂಡ ಅಶ್ವತ್ಥ್ ನಾರಾಯಣ ಹೈಕಮಾಂಡ್‌ನ ಮೆಚ್ಚುಗೆ ಪಡೆದಿದ್ದಾರೆ. ಇತ್ತ ಹಿಂದೂ ಅಜೆಂಡಾವನ್ನು ರಾಜ್ಯಾದ್ಯಂತ ಬಿಂಬಿಸಲು ಹೋರಾಟ ಮಾಡ್ತಿರೋ ಸಿಟಿ ರವಿ ಮೇಲೂ ಹೈ ಮೆಚ್ಚುಗೆಗೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಡಿಕೆಶಿಗೆ ತಿರುಗೇಟು ಕೊಡಲು ಅಶ್ವತ್ಥ್ ನಾರಾಯಣ ಹಾಗೂ ಸಿಟಿ ರವಿ ಫಿಟ್ ಅನ್ನೋ ಲೆಕ್ಕಚಾರದಲ್ಲಿದ್ದು, ಇಬ್ಬರಲ್ಲಿ ಒಬ್ಬರಿಗೆ ಪಟ್ಟಾಭಿಷೇಕ ಮಾಡಲು ಸಿದ್ದತೆ ಮಾಡಿದೆ ಎನ್ನಲಾಗಿದೆ..

ಒಟ್ಟಿನಲ್ಲಿ ಬಿಜೆಪಿ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗಿದ್ದು, ಈ ಬಾರಿ ಸಮುದಾಯದ ಹಿಡಿತದ ಮೇಲೆ ಪಕ್ಷ ಬಲವರ್ಧನೆಗೆ ನಿರ್ಧಾರ ಮಾಡಿದೆ.. ಹೀಗಾಗಿ ಇನ್ನೆರಡು ತಿಂಗಳಲ್ಲಿ ರಾಜ್ಯದ ಕೇಸರಿ ಬ್ರಿಗೇಡ್‌ನಲ್ಲಿ ಹೊಸ ಕ್ರಾಂತಿ ತಪ್ಪಿದ್ದಲ್ಲ.

RELATED ARTICLES

Related Articles

TRENDING ARTICLES