ಬೆಂಗಳೂರು: ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಓರ್ವ ಮತಾಂಧ, ಅವನ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.
ಎಂ.ಪಿ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ತಂತ್ರಜ್ಞಾನ ಬೆಳೆದಂತೆ ಹೊಸ ಆವಿಷ್ಕಾರ ಬರುತ್ತವೆ ಎಂದರು.
ಇನ್ನು ಕುರಾನ್ ಬರೆದಾಗ ಮೈಕ್ ವ್ಯವಸ್ಥೆ ಇರಲಿಲ್ಲ ಎಂಬುದು ತಪ್ಪು. ದೇಗುಲಗಳಲ್ಲೂ ಧ್ಚನಿ ವರ್ಧಕ ಬಳಸುತ್ತಾರೆ. ಮಸೀದಿಯಲ್ಲೂ ಧ್ವನಿ ವರ್ಧಕ ಬಳಸುತ್ತಾರೆ. ಧ್ವನಿ ವರ್ಧಕ ಬಳಕೆಯಿಂದ ತೊಂದರೆ ಏನಾಗಿದೆ(?) ಹಿಂದೆ ಧ್ವನಿ ವರ್ಧಕ ಇಲ್ಲದೆ ಇರಬಹುದು, ಆಗ ವಿದ್ಯುಚ್ಛಕ್ತಿ ಇರಲಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಸದ್ಯ ಅಲಾರಾಮ್ ಮೊನ್ನೆ ಇಟ್ಟುಕೊಂಡಿದ್ದರೇನು(?) ಬಿಜೆಪಿ ಕುಮ್ಮಕ್ಕಿನಿಂದಲೇ ಹಿಜಾಬ್, ಆಜಾನ್ ವಿವಾದ ಸೃಷ್ಠಿಯಾಗಿದೆ. ಬಿಜೆಪಿಗೆ ಸಮಾಜದ ಸಾಮರಸ್ಯಗಿಂತ ಚುನಾವಣೆ ಮುಖ್ಯ. ಕಾನೂನು ಸುವ್ಯವಸ್ಥೆ ಇಲ್ಲದಿದ್ದರೇ ಬಂಡವಾಳ ಹೂಡಿಕೆ ಆಗಲ್ಲ, ಉದ್ಯೋಗ ಸೃಷ್ಠಿ ಆಗಲ್ಲ. ಕಳೆದ 2 ವರ್ಷದಿಂದ ಬಂಡವಾಳ ಹೂಡಿಕೆದಾರರು ಬಂದಿಲ್ಲ, ಇರುವ ಕಂಪನಿಗಳೆಲ್ಲಾ ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಕಾಂಗ್ರೆಸ್ ನಾಯಕರು ಜಾತ್ಯಾತೀತ ತತ್ವಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮಾತಿಗೂ ಪ್ರತಿಕ್ರಿಯೆ ನೀಡಿದ ಅವರು, ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಸಂಪೂರ್ಣ ವಿಫಲವಾಗಿದ್ದಾರೆ. ಮಸೀದಿಗಳಲ್ಲಿ ನಿನ್ನೆ ಮೊನ್ನೆಯಿಂದ ಅಜಾನ್ ಮಾಡುತ್ತಿಲ್ಲ. ಅನೇಕ ವರ್ಷಗಳಿಂದ ಮಸೀದಿಗಳಲ್ಲಿ ಅಜಾನ್ ಮಾಡುತ್ತಿದ್ದೇವೆ. ಚುನಾವಣೆಗಾಗಿ ಬಿಜೆಪಿಯವರು ಅಜಾನ್ ವಿವಾದ ಸೃಷ್ಠಿಸುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಅದುವಲ್ಲದೇ, ಬಿಜೆಪಿಗೆ ಜನಪರವಾದ ವಿಷಯಗಳಿಲ್ಲ, ಅಭಿವೃದ್ಧಿ ಮಾಡಿಲ್ಲ. ಬೆಲೆ ಏರಿಕೆ ಗಗನಕ್ಕೇರಿದೆ, ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿದೆ. ವಿದ್ಯುತ್, ಜನೌಷಧಿ ದರ ಎಲ್ಲಾ ಏರಿಕೆ ಆಗಿದೆ. ಹೀಗಾಗಿ, ಹಿಜಾಬ್, ಜಾತ್ರೆ ವ್ಯಾಪಾರ, ಹಲಾಲ್, ಭಗವದ್ಗೀತೆ, ಅಜಾನ್ ವಿವಾದ ಸೃಷ್ಠಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತಾಡಿದರು.