ವಿಧಾನಸಭೆಯಲ್ಲಿ ಹಲವು ಮಹತ್ವದ ವಿಷಯಗಳು ಇವತ್ತು ಚರ್ಚೆಯಾದ್ವು. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ವಿಳಂಬಕ್ಕೆ ಯತ್ನಾಳ್ ಗರಂ ಆದ್ರು. ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ವಿನಿಶಾ ನೀರೋ ಆಕ್ರೋಶ ಹೊರಹಾಕಿದ್ರು. ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಹ್ಯಾರೀಸ್ ಧ್ವನಿ ಎತ್ತಿದ್ರೆ, ಕೆಜಿಎಫ್ ಕ್ಷೇತ್ರದ ಶಾಲೆಯ ಸಮಸ್ಯೆಗಳ ಬಗ್ಗೆ ರೂಪಾ ಶಶಿಧರ್ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ರು.
ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಸಚಿವರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ರು. ಕೃಷ್ಣಾನದಿ ಯೋಜನೆ ವಿಜಯಪುರದಿಂದ ತುಮಕೂರುನಿವರೆಗೆ ನೀರಾವರಿ ಮಾಡುವಷ್ಟು ದೊಡ್ಡದಾದ ಯೋಜನೆ. ಆದ್ರೆ, ಯೋಜನೆ ಪೂರ್ಣಗೊಳಿಸೋಕೆ ಯಾವ ಸರ್ಕಾರದ ಕೈಯಲ್ಲೂ ಆಗ್ತಿಲ್ಲ. ಇದೊಂದು ರೀತಿ ಸಚಿವರು ಹಾಗೂ ಅಧಿಕಾರಿಗಳಿಗೆ ಬಂಗಾರದ ಕಣಜವಿದ್ದಂತೆ. ದುಡ್ಡು ಹೊಡೆಯೋದು ಬಿಟ್ರೆ ಬೇರೇನಿಲ್ಲ ಅಂತ ಹೇಳುವ ಮೂಲಕ ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಅಸಮಾಧಾನ ಹೊರಹಾಕಿದ್ರು.
ಇನ್ನೂ ಸದನದಲ್ಲಿ ಕೇಂದ್ರ ಸರ್ಕಾರದ ಮಾತೃಪೂರ್ಣ ಯೋಜನೆಯ ಬಗ್ಗೆ ಚರ್ಚೆಯಾಯ್ತು. ಯೋಜನೆಯಲ್ಲಿ ಗರ್ಭಿಣಿ ಮಹಿಳೆಯರು ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅಂಗನವಾಡಿ ಕೆಂದ್ರಗಳಿಗೆ ಬಂದುಹೋಗ್ಬೇಕಿದೆ. ಆ ನಿಮ್ಮ ನಿಯಮಗಳನ್ನು ಮೊದಲು ಸರಿಪಡಿಸಿ ಅಂತ ಸ್ಪೀಕರ್ ಕಾಗೇರಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ್ರು.
ಇನ್ನು ಆಂಗ್ಲೋ ಇಂಡಿಯನ್ ಶಾಸಕಿ ವಿನಿಶಾ ನೀರೋ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಆಕ್ರೋಶ ಹೊರಹಾಕಿದ್ರು. ಇನ್ನು ಸರ್ಕಾರಿ ಶಾಲೆಗಳ ಸುಧಾರಣೆ ಬಗ್ಗೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ರು. ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಡಿಕೆಶಿ ಸದನದಲ್ಲಿ ಪ್ರತ್ಯಕ್ಷರಾದ್ರು.. ಮಾತನಾಡಲು ಸಮಯ ಕೊಡಿ ಅಂತ ಸ್ಪೀಕರ್ ಬಳಿ ಕೇಳಿಕೊಂಡ್ರು.. ಆದ್ರೆ, ಡಿಕೆಶಿ ಮನವಿಗೆ ಸೊಪ್ಪು ಹಾಕದ ಸ್ಪೀಕರ್ ಕಾಗೇರಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ರು.
ಬಸವರಾಜ್ ಚರಂತಿಮಠ್ ಪೊಲಿಟಿಕಲ್ ಬ್ಯೂರೊ ಪವರ್ ಟಿವಿ ಬೆಂಗಳೂರು.