ಬೆಂಗಳೂರು: ಪುನೀತ್ ರಾಜಕುಮಾರ್ ಅಭಿಯದ ಕೊನೆ ಚಿತ್ರ ಜೇಮ್ಸ್ ಚಿತ್ರಮಂದಿರದಿಂದ ತೆಗೆಯುವ ಹುನ್ನಾರಕ್ಕೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ತ್ರಿವೇಣಿ ಚಿತ್ರಮಂದಿರ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಕನ್ನಡ ಪರ ಹೋರಾಟಗಾರರ ವಾಟಾಳ್ ನಾಗರಾಜ್ ನೇತೃತ್ವದ ಪ್ರತಿಭಟನೆ ನೇತೃತ್ವವಹಿಸಿದ್ದು, ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಜೇಮ್ಸ್ ಸಿನಿಮಾ ತೆಗಿಬಾರದು, ತೆಗಿಬೇಕು ಅನ್ನೋದೇ ಅಕ್ಷಮ್ಯ ಅಪರಾಧ. ಚಿತ್ರ ತೆಗೆದರೆ ಕರ್ನಾಟಕದಲ್ಲಿ ಕಂಡರಿಯದ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಪರಭಾಷಾ ಚಿತ್ರಗಳು ಕನ್ನಡನಾಡಲ್ಲಿ ಬೇಡ. ಆರ್ಆರ್ಆರ್ ತೆಲುಗು ಚಿಕ್ಕಬಳ್ಳಾಪುರದಲ್ಲಿ ಏನು ವೈಭವದಿಂದ ಮಾಡಿದ್ರೂ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮಾತ್ರ ಆದ್ಯತೆ ಕೊಡಿ. ಮೊದಲು ಹಿಮಾಲಯ ಟಾಕೀಸ್ ಇತ್ತು. ಆಗ ರಾಜ್ಕುಮಾರ್ ರಣಧೀರ ಕಂಠೀರವ ಚಿತ್ರಕ್ಕೆ ಥಿಯೇಟರ್ ಇರಲಿಲ್ಲ, ನಾನು ಹೋರಾಟ ಮಾಡಿ ಥಿಯೇಟರ್ ಕೊಟ್ಟೆ ಎಂದು ಹಳೆ ಘಟನೆ ನೆನೆದರು.
ಅದುವಲ್ಲದೇ, ಈ ಹಿಂದೆ ಬಂಗಾರದ ಮನುಷ್ಯ ಸಿನಿಮಾ ತೆಗೆಯಲು ಹುನಾರ ಮಾಡಿದ್ರು. ಆಗಲೂ ನಾನು ಹೋರಾಟ ಮಾಡಿದ್ದೇನೆ. ಇವತ್ತು ಜೇಮ್ಸ್ ಸಿನಿಮಾ ತೆಗೆಯೋ ಹಿಂದೆ ಭಾರೀ ಪಿತೂರಿ ಇದೆ. ಈಗ ಕೂಡ ಹೋರಾಟ ಮಾಡುತ್ತೇವೆ ಎಂದು ಜೇಮ್ಸ್ ಸಿನಿಮಾ ತೆಗೆಯುವವರಿಗೆ ಎಚ್ಚರಿಕೆ ನೀಡಿದ್ದಾರೆ.