Monday, December 23, 2024

ಹುಟ್ಟುಹಬ್ಬದ ನಡುವೆ ಅಪ್ಪು ಇಲ್ಲದ ಸಂಕಟ

ಬೆಂಗಳೂರು: ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ನಗುಮೋಗದ ಯುವರಾಜ ಪವರ್ ಸ್ಟಾರ್ ಪುನೀತ್ ಅಗಲಿದ ಬಳಿಕ ಇದು ಮೊದಲ ಹುಟ್ಟು ಹಬ್ಬ. ಹೀಗಾಗಿ, ರಾಘವೇಂದ್ರ ರಾಜ್‌ಕುಮಾರ್ ಪುನೀತ್ ಸಮಾಧಿ ಬಳಿ ಕೇಕ್ ಕಟ್ ಮಾಡುದರ ಮೂಲಕ ಆಚರಿಸಿದ್ರು. ಪುನೀತ್ ಪತ್ನಿ ಅಶ್ವಿನಿ ಅಪ್ಪು ಸಮಾಧಿಗೆ ಪುಷ್ಪನಮನ ಸಲ್ಲಿಸಿ ತಮ್ಮ ಮನೆ ದೇವ್ರಿಗೆ ಶುಭ ಹಾರೈಸಿದ್ರು. ಶ್ರಿ ಮುರುಳಿ ಸಮಾಧಿಗೆ ಭೇಟಿ ನೀಡಿ ತನ್ನ ಪ್ರೀತಿಯ ಮಾವನಿಗೆ ವಂದನೆ ಅರ್ಪಿಸಿದ್ರು. ಅಭಿಮಾನಿಗಳು ತೋರುತ್ತಿರೋ ಪ್ರೀತಿ ನೋಡಿ ಈ ಸಂದರ್ಭ ಮಾವ ಇರಬೇಕಿತ್ತು ಅಂತ ಹೇಳಿ ಭಾವುಕರಾದ್ರು.

ನಮ್ಮ ಕುಟುಂಬದ ಅಣ್ಣನೋ ತಮ್ಮನೋ ಎಂಬಂತೆ ಸಾವಿರಾರು ಜನ ಅಪ್ಪು ಸಮಾಧಿ ದರ್ಶನ ಪಡೆದು ಹುಟ್ಟು ಹಬ್ಬದ ಶುಭ ಹಾರೈಸಿದ್ರು. ಮತ್ತೆ ಬರ್ತಿನಿ ಅಮ್ಮ ಅಂತ ಹೇಳಿ ಹೋದ ಮಗ ಮರಳಿ ಬಾರದಂತೆ, ಕೆಲಸಕ್ಕೆ ಹೋದ ಅಣ್ಣ ಮತ್ತೆ ಬರದೆ ಹೋದಾಗ ಆಗುವಂತ ನೋವು ಅಭಿಮಾನಿಗಳಲ್ಲಿತ್ತು.

ಬೆಳಿಗ್ಗೆ 5 ಗಂಟೆಯಿಂದಲೇ ಅಭಿಮಾನಿಗಳು ಅಪ್ಪು ಸಮಾಧಿ ದರ್ಶನ ಪಡೆಯಲು ಕ್ಯೂ ನಿಂತಿದ್ದರು. ಸಾವಿರಾರು ಜನ ಅಪ್ಪು ಸಮಾಧಿ ಬಳಿ ಗುಲಾಬಿ ಹೂವಿಟ್ಟು ಅಭಿಮಾನ ಮೇರೆದ್ರು. ಕೋಲಾರದಿಂದ ಬಂದ ಅಪ್ಪು ಅಭಿಮಾನಿ ಗಣೇಶ್ ಬೈಕ್‌ಗೆ ಅಪ್ಪು ಭಾವಚಿತ್ರ ಇಟ್ಟು ಅಲಂಕಾರ ಮಾಡಿ ಸಮಾಧಿ ಬಳಿ ಬಂದಿದ್ರು. ಇನ್ನು, ಸಮಾಧಿ ಬಳಿ ಅಭಿಮಾನಿಗಳು ಅಪ್ಪು ನೆನೆದು ಭಜನೆ ಮಾಡಿದ್ರು.

ವಿಶೇಷ ಅಂದ್ರೆ ಆಗಸದಲ್ಲೂ ಅಪ್ಪು ಹೆಸರು ರಾರಾಜಿಸಿತು. ಕಂಠೀರವ ಸ್ಟುಡಿಯೋ ಬಳಿ ಆಕಾಶದಲ್ಲಿ ಜೆಟ್ ವಿಮಾನದ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯ್ತು.ಹ್ಯಾಪಿ ಬರ್ತಡೆ ಪವರ್ ಸ್ಟಾರ್ ಎಂಬ ಪೋಸ್ಟರ್ ಮೂಲಕ ಶುಭ ಕೋರಿದ್ದಕ್ಕೆ ಅಭಿಮಾನಿಗಳು ಖುಷಿಪಟ್ಟರು.

ಅಪ್ಪು ಹುಟ್ಟಿ ಬರಲಿ ಅಂತ ಅಭಿಮಾನಿ ಭೀಮರಾವ್ ಪೀಣ್ಯದಿಂದ ದೀರ್ಘ ದಂಡ ನಮಸ್ಕಾರ ಹಾಕಿಕೊಂಡು ಸಮಾಧಿ ಬಳಿ ಬಂದರು. ಅಪ್ಪುವನ್ನು ದೇವರಂತೆ ಪೂಜಿಸುವರಿದ್ದಾರೆ. ಸಾಮಾನ್ಯವಾಗಿ ಪೂಜಾ ಕುಣಿತದಲ್ಲಿ ದೇವರನ್ನ ತಲೆ ಮೇಲೆ ಹೊತ್ತು ಕುಣಿಯುತ್ತಾರೆ. ದೇವರ ಸ್ಥಾನವನ್ನ ಅಪ್ಪು ಅಲಂಕರಿಸಿ,ಆರಾಧಿಸಲ್ಪಟ್ಟರು.
ಬಂದ ಅಭಿಮಾನಿಗಳಿಗೆಲ್ಲ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೊರಭಾಗದಲ್ಲಿ ಹೂವಿನಿಂದ ಅಪ್ಪು ಚಿತ್ರವನ್ನು ನಿರ್ಮಿಸಲಾಗಿತ್ತು. ಈ ದೃಶ್ಯಗಳು ಇದು ಅಪ್ಪು ಹುಟ್ಟು ಹಬ್ಬ ಮಾತ್ರ ಅಲ್ಲ. ಇದು ಅಪ್ಪು ಅಭಿಮಾನದ ಜಾತ್ರೆ ಎಂಬುದನ್ನು ಸಾರಿ ಹೇಳಿದಂತಿತ್ತು.

 

RELATED ARTICLES

Related Articles

TRENDING ARTICLES