ಪ್ರಜ್ವಲ್ ಗೆ 18 ವರ್ಷ ಆದ ಮೇಲೆ 4 ಎಕರೆ ಜಮೀನು ಕೊಟ್ಟಿದ್ದೇನೆ, ಇಂತಹ ವರದಿ ಮಾಡುವಾಗ ದಾಖಲೆ ಇಟ್ಟು ವರದಿ ಮಾಡಿ ಎಂದು ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ.
ಮಾಜಿ ಪ್ರಧಾನಿ ಮೊಮ್ಮಗ, ಲೋಕಸಭಾ ಸದಸ್ಯರ ಬಗ್ಗೆ ಬರೆಯುವಾಗ ದಾಖಲೆ ಇಟ್ಟು ಬರೆಯಿರಿ ಪ್ರತಿವರ್ಷ IT ಗೆ ಉತ್ತರ ನೀಡ್ತಿದ್ದೇವೆ. ಅಕ್ರಮ ಗೋಮಾಳ ಕಬಳಿಕೆ ಇದ್ರೆ, ಕಂದಾಯ ಸಚಿವರು ಮುಟ್ಟುಗೋಲು ಹಾಕಿಕೊಳ್ಳಲಿ.ರಾಜಕೀಯ ಷಡ್ಯಂತ್ರ ಇದೆ ಯಾರ್ಯಾರು ಇದಾರೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಹೇಳ್ತೀನಿ. ಸೂರಜ್ ರೇವಣ್ಣ ಮೇಲೂ ಕೇಸ್ ಹಾಕಿ ವಜಾ ಆಯ್ತು ದೇವೇಗೌಡರ ಕುಟುಂಬದ ಮೇಲೆ ಆಗಿನಿಂದಲೂ ಷಡ್ಯಂತ್ರ ನಡೆಯುತ್ತಿದೆ 15ನೇ ವರ್ಷದಲ್ಲಿ 26 ಕೋಟಿ ಹಣ ಮಾಡಲು ಹೇಗೆ ಸಾಧ್ಯ? ಎಂದು ಸಚಿವ ರೇವಣ್ಣ ಕಿಡಿಕಾಡಿದ್ದಾರೆ.