Monday, December 23, 2024

ನಾನ್ ಹಿಜಾಬ್ ಬಗ್ಗೆ ಮಾತಾಡೋನೆ : ಜಮೀರ್

ಹುಬ್ಬಳ್ಳಿ : ಹಿಜಾಬ್ ಬಗ್ಗೆ ನಾನ್ ಮಾತನಾಡ್ತೇನೆಂದು ಡಿಕೆಶಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಮೀರ್ ಕೌಂಟರ್​​ ನೀಡಿದ್ದಾರೆ.

ನಾನ್ ಹಿಜಾಬ್ ಬಗ್ಗೆ ಮಾತನಾಡುವವನೇ‌‌‌ ನಾನ್ ಯಾಕೆ ಕ್ಷಮೆ ಕೇಳಬೇಕು ? ಕ್ಷಮೆ ಕೇಳುವಂತ ಹೇಳಿಕೆ ಏನ್ ನೀಡಿದ್ದಿನಿ..? ನಾನು ಯಾರ ಹತ್ತಿರಾನು ಕ್ಷಮೆ ಕೇಳುವುದಿಲ್ಲ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಹಾಗೂ ತಮ್ಮ ಹೇಳಿಕೆ ಹಿಂದೆ ಪಡೆದು ಡಿಕೆಸಿ ಅವರೇ ಕ್ಷಮೆ ಕೋರಬೇಕು ಎಂದು ಹೇಳಿದರು.

ಅಲ್ಲದೇ  ನಾನ್ ಹಿಜಾಬ್ ಹಾಕಬೇಕು ಆಂತ ಹೇಳಿದ್ದೆ. ಮಾಧ್ಯಮವರು ಅದನ್ನ ತಿರುಚಿದ್ದಾರೆ. ಹೆಲ್ಮೇಟ್ ರೀತಿ ಹಿಜಾಬ್ ಹಾಕೋಬೇಕು, ಹೆಲ್ಮೇಟ್ ಹೇಗೆ ಸೇಫ್ಟಿ ಕೊಡುತ್ತೊ ಹಾಗೇ ಹಿಜಾಬ್ ಕೂಡಾ ನೀಡುತ್ತದೆ. ಬಹಳ ಜನ ನಮ್ಮ‌ಸಮುದಾಯದಲ್ಲೂ ಹಿಜಾಬ್ ಹಾಕಲ್ಲ. ಹಾಗೇ ಹೆಲ್ಮೇಟ್ ಕೂಡಾ ಕಡ್ಡಾಯವಿದ್ದರೂ ಹಾಕೋಲ್ಲ ಎಂದು ಡಿಕೆ ಶಿವಕುಮಾರ್​​ಗೆ ಹೇಳಿಕೆಗೆ ಡಿಚ್ವಿ ಕೊಟ್ಟಿದ್ದಾರೆ ಮಾಜಿ ಸಚಿವ ಜಮೀರ್.

RELATED ARTICLES

Related Articles

TRENDING ARTICLES