Monday, December 23, 2024

‘ದೆಹಲಿಗೆ ಹೋಗಿ ಬಂದ ಬಳಿಕ ರಾಜೀನಾಮೆ’- ಸಿ.ಎಂ.ಇಬ್ರಾಹಿಂ

ಬೆಂಗಳೂರು: ದೆಹಲಿಗೆ ಹೋಗಿ ಬಂದ ಬಳಿಕ ರಾಜೀನಾಮೆ ನೀಡುವ ಕುರಿತು ಸೂಕ್ತ ನಿರ್ಣಯ ಕೈಗೊಳ್ಳುತ್ತೇನೆ ಅಂಥ ದಾವಣಗೆರೆಯಲ್ಲಿ MLC ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಮಾತುಕತೆಗೆ ಕಾಂಗ್ರೆಸ್​​ ಹೈಕಮಾಂಡ್​ ಆಹ್ವಾನಿಸಿದೆ. ಪಕ್ಷದಲ್ಲಿನ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದ ಬಳಿಕ ಬಂದು ನಿರ್ಣಯಕ್ಕೆ ಬರುತ್ತೇನೆ ಎಂದಿದ್ದಾರೆ.

ನನ್ನನ್ನ ಕಾಂಗ್ರೆಸ್​​ ಪಕ್ಷ ಸರಿಯಾಗಿ ನೋಡಿಕೊಂಡಿಲ್ಲ. ನನ್ನ ಅವಶ್ಯಕತೆ ಇಲ್ಲದವರ ಮನೆಗೆ ನಾನು ಹೋಗಲ್ಲ. ಇವಾಗ ನಾನು ರಾಜೀನಾಮೆ ನೀಡಿದ್ರೆ, ಬಿಜೆಪಿ ಮತಾಂತರ ಬಿಲ್ ಪಾಸ್ ಮಾಡುತ್ತದೆ. ಹೀಗಾಗಿ ಬಜೆಟ್​​ ಅಧಿವೇಶನದ ಬಳಿಕ ರಾಜೀನಾಮೆ ನೀಡುತ್ತೇನೆ. ಕಾಂಗ್ರೆಸ್​​ನಿಂದ ಹೊರಬರಲು ತುಂಬಾ ಜನ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ನಿಸ್ಸಾಯಕರಾಗಿದ್ದಾರೆ. ಯಾವ ನಿರ್ಣಯವೂ ಅವರ ಕೈಲಿ ಇಲ್ಲ. ಎಲ್ಲಾ ಹೈಕಮಾಂಡ್ ತೀರ್ಮಾನ ಎಂದು ಸಿದ್ದರಾಮಯ್ಯ ವಿರುದ್ಧ ಸಿ.ಎಂ ಹಿಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES