Friday, March 29, 2024

ಬರ್ತ್​ಡೆ ಸಂಭ್ರಮದಲ್ಲಿರೊ ಡೈರೆಕ್ಟರ್ ಆರ್.ಚಂದ್ರುಗೆ ಶಿವಣ್ಣ ವಾರ್ನಿಂಗ್..!

ರಾಜಮೌಳಿ, ಪ್ರಶಾಂತ್​ ನೀಲ್​ರಂತಹ ಸೆನ್ಸೇಷನಲ್ ಡೈರೆಕ್ಟರ್​ಗಳ ಸಿನಿಮಾ ಅಪ್ಡೇಟ್ಸ್ ಫಟಾಫಟ್ ಅಂತ ಸಿಕ್ತಿರೋವಾಗ, ಕಜ್ಜ ಡೈರೆಕ್ಟರ್ ಚಂದ್ರು ಮಾತ್ರ ಸಿನಿಮಾ ಕಂಪ್ಲೀಟ್ ಮಾಡ್ತಿಲ್ಲ. ಅದಕ್ಕೆ ಕರುನಾಡ ಚಕ್ರವರ್ತಿ ಶಿವಣ್ಣ ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ, ಡೈರೆಕ್ಟರ್ ಚಂದ್ರುಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಆದ್ರೆ ಅಸಲಿ ಮ್ಯಾಟರ್ ಏನು ಅನ್ನೋದನ್ನ ನಾವು ನಿಮಗೆ ವಿವರಿಸ್ತೀವಿ ನೋಡಿ.

ಕಬ್ಜಾಗೆ ಶಿವಣ್ಣ ವೆಯ್ಟಿಂಗ್.. ಆರ್ ಚಂದ್ರುಗೆ ವಾರ್ನಿಂಗ್; ಇನ್ನೂ ಎಷ್ಟು ವರ್ಷ ಸಿನಿಮಾ ಮಾಡ್ತೀರಾ ಎಂದ ಶಿವಣ್ಣ

ನಮ್ಮ ಸೌತ್ ಸಿನಿಮಾಗಳಿಂದ ಬಾಲಿವುಡ್ ಮಂದಿ ಮುಟ್ಟಿ ನೋಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗ ಅಂದ್ರೆ ಬಾಲಿವುಡ್ ಅಂತಿದ್ರು. ಆದ್ರೀಗ ಇಂಡಿಯನ್ ಸಿನಿಮಾಸ್ ಅಂದ್ರೆ ಸೌತ್ ಸಿನಿಮಾಗಳು ಅಂತಾರೆ. ರಾಜಮೌಳಿ, ಪ್ರಶಾಂತ್ ನೀಲ್, ಶಂಕರ್ ಅಂತಾರೆ. ಅಷ್ಟೊಂದು ಫಾಸ್ಟ್ ಅಂಡ್ ಫ್ಯೂರಿಯಸ್​ ಆಗಿ ಬೆಳೆಯುತ್ತಿದೆ ನಮ್ಮ ಸೌತ್ ಚಿತ್ರರಂಗ.

ಸದ್ಯ ಮೌಳಿ, ನೀಲ್, ಶಂಕರ್​ರಂತಹ ಬಿಗ್ ಬಜೆಟ್, ಹ್ಯೂಜ್ ಸ್ಟಾರ್​ಕಾಸ್ಟ್ ಹಾಗೂ ಭಾರೀ ಬಜೆಟ್ ಚಿತ್ರಕ್ಕೆ ನಮ್ಮ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಆರ್ ಚಂದ್ರು ಕೂಡ ಕೈಹಾಕಿದ್ದಾರೆ. ಅದೇ ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಕಾಂಬೋನಲ್ಲಿ ತಯಾರಾಗ್ತಿರೋ ಈ ಸಿನಿಮಾ ಕೊರೋನಾದಿಂದ ಕೊಂಚ ತಡವಾಗ್ತಿದೆ. ಅದಕ್ಕೆ ಶಿವಣ್ಣ ಗರಂ ಆಗಿದ್ದಾರೆ.

ಹೌದು.. ಸಲಗ ಸಕ್ಸಸ್ ಇವೆಂಟ್​ನ ಬೃಹತ್ ವೇದಿಕೆಯಲ್ಲಿ ಶಿವಣ್ಣ, ಡೈರೆಕ್ಟರ್ ಆರ್ ಚಂದ್ರುಗೆ ವಾರ್ನ್​ ಮಾಡಿದ್ದಾರೆ. ಇನ್ನೂ ಎಷ್ಟು ವರ್ಷ ಮಾಡ್ತೀರಾ..? ಕಬ್ಜಾಗೆ ನಾನು ವೆಯ್ಟಿಂಗ್. ನಿಮ್ಮಂತಹ ಡೈರೆಕ್ಟರ್ಸ್​ ಸಿನಿಮಾಗಳನ್ನ ಫಟಾಫಟ್ ಅಂತ ಮುಗಿಸಬೇಕು ಎಂದಿದ್ದಾರೆ. ಅಷ್ಟೇ ಅಲ್ಲ, ಹೀರೋಯಿನ್ ವಿಚಾರ ಕನ್ನಡಿಗರೇ ಇರೋವಾಗ ಎಲ್ಲಿಲ್ಲಿಂದಲೋ ಯಾಕೆ ತರ್ತೀರಾ ಅಂತ ಖಾರವಾಗಿ ಮಾತಾಡಿ, ಕೊನೆಗೆ ನೋಡಿ ಸ್ವಾಮಿ ನಾವಿರೋದೇ ಹೀಗೆ ಅಂತ ತಮ್ಮ ನೇರನುಡಿಯನ್ನ ಹೊರಹಾಕಿದ್ದಾರೆ.

75% ಕಂಪ್ಲೀಟ್.. ಹೀರೋಯಿನ್​ದಷ್ಟೇ ಬ್ಯಾಲೆನ್ಸ್; ಹೈದ್ರಾಬಾದ್​ನಲ್ಲಿ ಉಪ್ಪಿ- ಕಿಚ್ಚನ ಕ್ಲೈಮ್ಯಾಕ್ಸ್ ವಾರ್

ಯೆಸ್.. ಶಿವಣ್ಣ ಹೀಗೆ ಖಾರವಾಗಿ ಮಾತಾಡೋದ್ರಲ್ಲಿ ಅರ್ಥವಿದೆ. ಸಿನಿಮಾ ಪ್ಯಾಷನ್ ಇರೋ ಅಂತಹ ದೊಡ್ಡ ಡೈರೆಕ್ಟರ್ಸ್​ ಈ ರೀತಿ ತಮ್ಮ ಸಿನಿಮಾಗಳನ್ನ ವರ್ಷಾನುಗಟ್ಟಲೆ ಮಾಡೋದ್ರಿಂದ ಇಂಡಸ್ಟ್ರಿಗೆ ಲಾಸ್ ಆಗಲಿದೆ. ಆದ್ರೆ ಚಂದ್ರು ಪಾಯಿಂಟ್ ಆಫ್ ವೀವ್​ನಿಂದ ನೋಡಿದ್ರೆ ಅವ್ರು ಮಾಡ್ತಿರೋದೂ ಸರಿ ಅನಿಸುತ್ತೆ. ಯಾಕಂದ್ರೆ ಚಂದ್ರು ಮಾಡ್ತಿರೋದು ಏಳು ಸಿನಿಮಾ. ಅರ್ಥಾತ್ ಏಳು ಭಾಷೆಯ ರೆಟ್ರೋ ಸಿನಿಮಾ.

ತ್ರಿಬಲ್ ಆರ್ ಹಾಗೂ ಕೆಜಿಎಫ್ ಸಿನಿಮಾಗಳು ಕೂಡ ಬೇರೆಯದ್ದೇ ಕಾಲಘಟ್ಟದ ಚಿತ್ರಗಳು. ಅವುಗಳಂತೆ ಕಬ್ಜ ಕೂಡ ರೆಟ್ರೋ ಸಿನಿಮಾ ಆಗಿರೋದ್ರಿಂದ ಸಾಕಷ್ಟು ಹೋಮ್ ವರ್ಕ್​ ಬೇಕಾಗಲಿದೆ. ಬೃಹತ್ ಸೆಟ್​ಗಳು, ಬಹುಭಾಷಾ ಕಲಾವಿದರ ಡೇಟ್ಸ್ ಹೊಂದಾಣಿಕೆ, ಡಿಟೈಲ್ ವರ್ಕ್​ ಹೀಗೆ ಹತ್ತಾರು ತಲೆನೋವು ಕಾರ್ಯಗಳನ್ನ ನಿಭಾಯಿಸಬೇಕಾಗುತ್ತೆ.

ಸದ್ಯ ಶೇಕಡಾ 75ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ. ಇನ್ನೂ ಹೀರೋಯಿನ್ ಪೋರ್ಷನ್ಸ್ ಮಾತ್ರ ಬಾಕಿಯಿದೆ. ಆದ್ರೆ ಮೋಸ್ಟ್ ಎಕ್ಸ್​ಪೆಕ್ಟೆಡ್ ಕಬ್ಜಾಗೆ ಕಥಾನಾಯಕಿ ಯಾರಾಗ್ತಾರೆ ಅನ್ನೋದೇ ಸಸ್ಪೆನ್ಸ್. ಇದರ ಜೊತೆಗೆ ಕಿಚ್ಚ- ಉಪ್ಪಿಯ ಫೈನಲ್ ಕ್ಲೈಮ್ಯಾಕ್ಸ್ ಫೈಟ್​ನ ಹೈದ್ರಾಬಾದ್​ನಲ್ಲಿ ಚಿತ್ರಿಸ್ತಾರಂತೆ ಚಂದ್ರು. ಅಲ್ಲಿಗೆ ಭಾರ್ಗವ್ ಭಕ್ಷಿ- ರಿಯಲ್ ಸ್ಟಾರ್ ಉಪ್ಪಿಯ ಡೆಡ್ಲಿ, ಡೇರಿಂಗ್ ಹೈ ವೋಲ್ಟೇಜ್ ಕ್ಲೈಮ್ಯಾಕ್ಸ್ ನೋಡುಗರಿಗೆ ಭಾರೀ ಥ್ರಿಲ್ ಕೊಡಲಿದೆ.

ನೂರು ಕೋಟಿ ಬಜೆಟ್​ನಲ್ಲಿ ಸಿನಿಮಾ ಮಾಡೋಕೆ ಯೋಜನೆ ರೂಪಿಸಿಕೊಂಡಿದ್ದ ಚಂದ್ರುಗೆ ಇದೀಗ ನಿರೀಕ್ಷಿತ ಬಜೆಟ್​ನ ಮೀರಿದ ಸಿನಿಮ ಆಗ್ತಿದೆ. ಮೇಕಿಂಗ್ ಹಂತದಲ್ಲೇ ಸ್ಟಾರ್​ಕಾಸ್ಟ್ ಹಾಗೂ ಮೇಕಿಂಗ್ ಕ್ವಾಲಿಟಿಯಿಂದ ಮುಂಬೈನಲ್ಲಿ ಕ್ರೇಜ್ ಹುಟ್ಟಿಸಿದೆ ಕಬ್ಜ. ಇನ್ನೂ ಶಿವಣ್ಣ ಮಾತಿನಂತೆ ಆದಷ್ಟು ಬೇಗ ಸಿನಿಮಾನ ಪ್ರೇಕ್ಷಕರ ಮುಂದೆ ಇಡೋಕೆ ಚಂದ್ರು ಪಣ ತೊಟ್ಟಿದ್ದು, ಇದೇ ಫೆಬ್ರವರಿ 14ರಿಂದ ಹೀರೋಯಿನ್ ಪೋರ್ಷನ್ಸ್​ನ ಚಿತ್ರಿಸಲಿದ್ದಾರಂತೆ.

ಬರ್ತ್ ಡೇ ಸಂಭ್ರಮದಲ್ಲಿರೋ ಆರ್ ಚಂದ್ರು, ಇನ್ಮೇಲೆ ತಮ್ಮ ಸಿನಿಮಾ ಪ್ಯಾಷನ್​ನ ಗಮ್ಮತ್ತು ಎಂಥದ್ದು ಅನ್ನೋದನ್ನ ಇಂತಹದ್ದೇ ವಿಭಿನ್ನ ಶೈಲಿಯ ಸಿನಿಮಾಗಳಿಂದ ಸಾಬೀತು ಮಾಡಲು ನಿರ್ಧರಿಸಿದ್ದಾರೆ. ಆದಷ್ಟು ಬೇಗ ಕಬ್ಜ ಟೀಸರ್ ಹೊರಬರಲಿ, ಹೀರೋಯಿನ್ ನೇಮ್ ಅನೌನ್ಸ್ ಆಗಲಿ, ರಿಲೀಸ್ ಡೇಟ್ ಫೈನಲ್ ಆಗಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES