Thursday, April 25, 2024

ಜೆಎನ್​ಯುಗೆ ಪ್ರಥಮ ಮಹಿಳಾ ಉಪಕುಲಪತಿ

ನವದೆಹಲಿ: ಪ್ರಗತಿಪರ ವಿಚಾರಧಾರೆಗೆ ಜೊತೆಗೆ ವಿವಾದಗಳಿಗೆ ಹೆಸರಾದ ಜೆಎನ್​ಯು ಅಂದರೆ ಜವಾಹರಲಾಲ್ ನೆಹರು ಯುನಿವರ್ಸಿಟಿಗೆ ಮಿನಿಷ್ಟ್ರಿ ಆಫ್ ಎಜುಕೇಶನ್ ಪ್ರಪ್ರಥಮ ಬಾರಿಗೆ ಮಹಿಳಾ ಉಪಕುಲಪತಿಯನ್ನು ನೇಮಕ ಮಾಡಿದೆ.

ಸದ್ಯ ಮಹಾರಾಷ್ಟ್ರದ ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿರುವ 59 ವರ್ಷದ ಸಂತಿಶ್ರಿ ಧುಲಪುಡಿ ಪಂಡಿತ್​ರನ್ನು ಜೆಎನ್​ಯುಗೆ ಉಪಕುಲಪತಿಯಾಗಿ ನೇಮಿಸಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್​ರವರು ಸಂತಿಶ್ರೀಯವರನ್ನು 5 ವರ್ಷಗಳ ಅವಧಿಗೆ ಉಪಕುಲಪತಿಗಳನ್ನಾಗಿ ನಿಯುಕ್ತಿ ಮಾಡಿದೆ ಎಂದು MoE ಹೇಳಿದೆ.

RELATED ARTICLES

Related Articles

TRENDING ARTICLES