Wednesday, January 22, 2025

ನಿರಾಶಾದಾಯಕ, ನಂಬಿಕೆ ಕಳೆದುಕೊಂಡ ಬಜೆಟ್- ಪ್ರಜ್ವಲ್ ರೇವಣ್ಣ

ನವದೆಹಲಿ: ಸಂಸದ ಪ್ರಜ್ವಲ್ ರೇವಣ್ಣ ಕೇಂದ್ರದ ಬಜೆಟ್​ಅನ್ನು ನಿರಾಶಾದಾಯಕ ಎಂದು ತಲೆಕೊಡವಿದ್ದಾರೆ. ಬಜೆಟ್ ಬಗ್ಗೆ ಮುಂದುವರೆದು ಹೇಳಿರುವ ರೇವಣ್ಣ ಈ ಬಜೆಟ್​ನಿಂದಾಗಿ ನಮಗೆ ಬಜೆಟ್ ಮೇಲೆ ನಂಬಿಕೆಯೇ ಹೊರಟುಹೋದಂತಾಗಿದೆ. 25 ಎಂಪಿಗಳು ರಾಜ್ಯಕ್ಕೆ ಏನು ತಂದರು? ಶೂನ್ಯ.. ಶೂನ್ಯ ಶೂನ್ಯ! ಈ ಬಜೆಟ್​ನಿಂದಾಗಿ ಕರ್ನಾಟಕಕ್ಕೆ ಸಿಕ್ಕಿದ್ದು ಬರೀ ಶೂನ್ಯ ಮಾತ್ರ ಎಂದು ರೇವಣ್ಣ ಬಜೆಟ್​ಅನ್ನು ಕಟುವಾಗಿ ಟೀಕಿಸಿದ್ದಾರೆ.

ಬಜೆಟ್ ಮೇಲೆ ಬಹಳಷ್ಟು ನಿರೀಕ್ಷೆಗಳಿದ್ದವು. ಕಾವೇರಿ-ಮೇಕೆದಾಟು ವಿಚಾರಕ್ಕೆ ಬಜೆಟ್​ನಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿತ್ತು. ಆದರೆ ಇಲ್ಲ. ನದಿ ಜೋಡಣೆ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೆ ರಾಜ್ಯಗಳ ಸಹಮತ ಇದ್ದರೆ ಮಾತ್ರ ಜೋಡಣೆ ಎಂದಿದ್ದಾರೆ. ಇದನ್ನು ಅವರೆ ಹೇಳಬೇಕಾ? ಒಟ್ಟಿನಲ್ಲಿ ಇದೊಂದು ತೀರ ಕಳಪೆ ಬಜೆಟ್, ಈ ಬಜೆಟ್​ನಲ್ಲಿ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ ಎಂದು ದೆಹಲಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಬಜೆಟ್ಟನ್ನು ಟೀಕಿಸಿದ್ದಾರೆ.

RELATED ARTICLES

Related Articles

TRENDING ARTICLES