Wednesday, January 22, 2025

ಡಾ ಜಿ ಪರಮೇಶ್ವರ್​​​​ಗೆ ಕೊರೋನಾ ಪಾಸಿಟಿವ್ ದೃಢ

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಸೋಂಕು ಹೆಚ್ಚಳವಾಗುತ್ತಾ ಹೋಗ್ತಿದೆ. ಕೋವಿಡ್ ತಡೆಗೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡ್ರೂ ಸಹ ಸೋಂಕು ಹರಡುವುದು ಮಾತ್ರ ನಿಲ್ತಿಲ್ಲ. ರಾಜಕಾರಣಿಗಳು, ಸೆಲೆಬ್ರೆಟಿ ಸೇರಿ ಜನಸಾಮಾನ್ಯರನ್ನೂ ಬೆಂಬಿಡದೆ ಕೊರೋನಾ ಕಾಡುತ್ತಿದೆ.

ಇದೀಗ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್​​ಗೆ ಕೊರೋನಾ ಸೋಂಕು ದೃಢಪಟ್ಟಿದೆ. ತುಮಕೂರು ಜಿಲ್ಲೆ ಕೊರಟಗೆರೆ ಶಾಸಕರಾಗಿರುವ ಡಾ.ಜಿ.ಪರಮೇಶ್ವರ್​​ಗೆ ನಿನ್ನೆ ಕೋವಿಡ್ ಟೆಸ್ಟ್​ ಮಾಡಿಸಿದಾಗ ಸೋಂಕು ದೃಢಪಟ್ಟಿದೆ. ಸಿದ್ದಾರ್ಥ ವೈದ್ಯಕೀಯ ಕಾಲೇಜು ವೈದ್ಯರಿಂದ ಚಿಕಿತ್ಸೆ ಮುಂದುವರೆದಿದ್ದು, 10 ದಿನಗಳ ಕಾಲ ಹೋಮ್ ಕ್ವಾರಂಟೀನ್​​ನಲ್ಲಿರಲೂ ವೈದ್ಯರು ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES