Friday, November 22, 2024

ಹೆಚ್ಚಾಯಿತು ಕಿಮ್ ಜಾಂಗ್ ಉನ್ ಹುಚ್ಚಾಟ

ಉತ್ತರ ಕೊರಿಯಾ ಈ ದುರಾದೃಷ್ಟ ದೇಶದ ಹೆಸರು ಕೇಳಿದ್ರೆ ಎಲ್ಲರಿಗೆ ಮೊದಲು ನೆನಪಿಗೆ ಬರೋದು ಅಲ್ಲಿನ ಹುಚ್ಚು ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​. ತಾನು ಮಾಡಿದ್ದೇ ಕಾನೂನು ತಾನು ನಡೆದಿದ್ದೇ ದಾರಿ ಎನ್ನೂವ ಕಿಮ್​, ತನ್ನ ದೇಶದಲ್ಲಿ ಯಾರೂ ಕೂಡ ತಾನು ವಿಧಿಸಿದ ನಿಯಮಗಳನ್ನ ಮೀರಿ ನಡೆಯಬಾರದು ಎಂದು ಬಯಸುತ್ತಾನೆ. ತನಗೆ ಬೇಕಾದ ಚಿತ್ರ ವಿಚಿತ್ರ ಕಾನೂನುಗಳನ್ನ ಜಾರಿಗೆ ತರುವ ಕಿಮ್​ ತಾನು ತರುವ ಕಾನೂನನ್ನ ಯಾರಾದರು ಉಲ್ಲಂಘಿಸಿದ್ರೆ ಅವರಿಗೆ ಅತ್ಯಂತ ಕಠೀಣ ಶಿಕ್ಷೆಯನ್ನ ವಿಧಿಸುತ್ತಾನೆ. ಆ ಮೂಲಕ ಅಲ್ಲಿ ತನ್ನ ಸರ್ವಾಧಿಕಾರ ಹಾದಿ ತಪ್ಪದಂತೆ ನೋಡಿಕೊಳ್ಳುತ್ತಾನೆ.

ಇದರ ಜೊತೆಗೆ ವಿದೇಶಿ ನೀತಿಗಳಲ್ಲೂ ವಿಚಿತ್ರವಾದ ಮಾರ್ಗ ಅನುಸರಿಸುವ ಕಿಮ್, ತನ್ನ ಕೆಲವು ವಿಚಿತ್ರವಾದ ಹಾಗು ಆಕ್ರಮಣಶೀಲ ನಿರ್ಧಾರದಿಂದ ವಿಶ್ವಸಂಸ್ಥೆಯಿಂದ ನಿರ್ಬಂಧಕ್ಕೆ ಕೂಡ ಒಳಪಟ್ಟಿದ್ದಾನೆ. ಇದರ ಪರಿಣಾಮವಾಗಿ ಉತ್ತರ ಕೊರಿಯಾದಲ್ಲಿ ವಿದೇಶಿ ವಿನಿಮಯ ಸಂಪೂರ್ಣವಾಗಿ  ಹಳ್ಳ ಹಿಡಿದಿದೆ. ಅಲ್ಲಿನ ಜನ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಇದೆಲ್ಲದರ ಮಧ್ಯೆ ಅಲ್ಲಿನ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಇಷ್ಟೆಲ್ಲ ಸಮಸ್ಯೆ ತನ್ನ ದೇಶದ ಒಳಗಡೆ ರೌದ್ರ ನರ್ತನವಾಡ್ತಾ ಇದ್ರು, ಈ ಕಿಮ್​ ಅನ್ನೋ ಕಮಂಗಿ ಅಧ್ಯಕ್ಷನಿಗೆ ಇನ್ನೂ ಕೂಡ ಬುದ್ಧಿ ಬಂದಿಲ್ಲ. ತನ್ನ ದೇಶದಲ್ಲಿ ಇರೋ ಹಣವನ್ನ ಬಳಸಿಕೊಂಡು ದೇಶದ ಆರ್ಥಿಕ ಪರಿಸ್ಥಿತಿಯನ್ನ ಸರಿದೂಗಿಸುವ ಬದಲು ಅದನ್ನೇ ರಕ್ಷಣಾ ವಲಯಕ್ಕೆ ವಿನಿಯೋಗಿಸ್ತಾ ಇದ್ದಾನೆ.

ತನ್ನ ಬಳಿ ಇರುವ ಹಣದಿಂದ ದೇಶದ ಆರ್ಥಿಕತೆಯನ್ನ ಸರಿದೂಗಿಸೋದಕ್ಕೆ ಪ್ರಯತ್ನ ಪಡದೆ, ಅಲ್ಲಿನ ಜನರ ಹಸಿವಿನ ಸಮಸ್ಯೆಯನ್ನ ಸರಿಪಡಿಸದೆ, ಕೇವಲ ಸೇನಾ ಸಲಕರಣೆಗಳ ಅಭಿವೃದ್ಧಿಗೆ ಮಾತ್ರ  ಹೆಚ್ಚಿನ ಹಣವನ್ನ ವಿನಿಯೋಗಿಸುತ್ತಿದ್ದಾನೆ. ಇದಕ್ಕೆ ಪೂರಕ ಅನ್ನೋ ಹಾಗೆ ಮತ್ತೆ ಎರಡು ಕ್ಷಿಪಣಿಗಳನ್ನ ಉಡಾವಣೆ ಮಾಡಿರುವ ಕಿಮ್​, ಈ ತಿಂಗಳಿನಲ್ಲಿ 4ನೇ ಮಿಸೈಲ್​ ಉಡಾವಣೆ ಮಾಡುವ ಮೂಲಕ ದಕ್ಷಿಣ ಕೊರಿಯಾ, ಜಪಾನ್​ ಹಾಗು ಅಮೆರಿಕದ ನಿದ್ದೆ ಗೆಡಿಸಿದ್ದಾನೆ. ಸದ್ಯಕ್ಕೆ ಈಗಾಗ್ಲೆ ಉತ್ತರ ಕೊರಿಯಾ ಹಲವು ಬಲಿಷ್ಟ ಮಿಸೈಲ್​ಗಳನ್ನ ಹೊಂದಿದ್ದು, ಇದೀಗ ಬ್ಯಾಲೆಸ್ಟಿಕ್​ ಮಿಸೈಲ್​ ಅನ್ನ ಪರೀಕ್ಷೆ ನಡೆಸುವ ಮೂಲಕ ಮತ್ತೆ ವಿಶ್ವದ ಕೆಂಗಣ್ಣಿಗೆ ಕಿಮ್​ ಗುರಿಯಾಗಿದ್ದಾನೆ.

ಉತ್ತರ ಕೊರಿಯಾ ಗುರುವಾರ ಮತ್ತೆ 2 ಖಂಡಾಂತರ ಕ್ಷಿಪಣಿಯನ್ನ ಪರೀಕ್ಷೆಯನ್ನ ನಡೆಸಿದ್ದು, ಕಳೆದ 2 ವಾರದಲ್ಲಿ ಇದು 3ನೇ ಖಂಡಾಂತರ ಕ್ಷಿಪಣಿ ಪರೀಕ್ಷೆಯಾಗಿದೆ. ಇದೀಗ ಈ ಖಂಡಾಂತರ ಕ್ಷಿಪಣಿಯ ಪರೀಕ್ಷೆಯ ಬಗ್ಗೆ ಖಂಡನೆಯನ್ನ ವ್ಯಕ್ತ ಪಡಿಸಿರುವ ಅಮೆರಿಕ ಉತ್ತರಕೊರಿಯಾದ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನ ರವಾನಿಸಿದೆ. ಉತ್ತರಕೊರಿಯಾದ ಪಶ್ಚಿಮ ಕರಾವಳಿಯ ನಾರ್ಥ್ ಪಾಂಗ್ಯಾಂಗ್ ಪ್ರಾಂತದಿಂದ 2 ಕಡಿಮೆ ದೂರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ್ದು. ಈ ಬಗ್ಗೆ ಜಪಾನ್ ಅಧಿಕೃತ ಮಾಹಿತಿಯನ್ನ ಬಿಡುಗಡೆ ಮಾಡಿದೆ. ಈ ಕ್ಷಿಪಣಿಗಳು ಗರಿಷ್ಟ 36 ಕಿ.ಮೀ ಎತ್ತರದಲ್ಲಿ ಸುಮಾರು 430 ಕಿ.ಮೀ ದೂರದವರೆಗೆ ಚಲಿಸಿವೆ ಎಂದು ದಕ್ಷಿಣ ಕೊರಿಯಾ ರಕ್ಷಣಾ ಪಡೆಯ ಜಂಟಿ ಮುಖ್ಯಸ್ಥರು ಮಾಹಿತಿಯನ್ನ ನೀಡಿದ್ದಾರೆ.

ಸದ್ಯಕ್ಕೆ ಈ ಬಗ್ಗೆ ಉತ್ತರಕೊರಿಯಾ ಯಾವುದೇ ಮಾಹಿತಿ ನೀಡದೆ ಇದ್ರು,  ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿರುವುದನ್ನು ಜಪಾನ್‌ನ ಕರಾವಳಿ ಭದ್ರತಾ ಪಡೆ ಕೂಡಾ ದೃಢಪಡಿಸಿದೆ. ನಿರಂತರ ಖಂಡಾಂತರ ಕ್ಷಿಪಣಿ ಪರೀಕ್ಷೆ ಸಹಿತ ಉತ್ತರಕೊರಿಯಾ ನಡೆಸುತ್ತಿರುವ ಸೇನಾ ಚಟುವಟಿಕೆಗಳು ಜಪಾನ್ ಮತ್ತು ಈ ವಲಯದ ಭದ್ರತೆಗೆ ಎದುರಾಗಿರುವ ದೊಡ್ಡ ಬೆದರಿಕೆಯಾಗಿದೆ ಅಂತ ಅಂತ ರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ಎಚ್ಚರಿಕೆಯನ್ನ ನೀಡುತ್ತಿದ್ದಾರೆ.  ಈ ಬಗ್ಗೆ  ಸೌತ್​ ಚೀನಾ ಪೋಸ್ಟ್​ ಕೂಡ ವರದಿ ಮಾಡಿದ್ದು, ಉತ್ತರ ಕೊರಿಯಾ ಸೇನೆಯು ಚಳಿಗಾಲದ ಕವಾಯತಿನ ಭಾಗವಾಗಿ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿರಬಹುದು. ಜತೆಗೆ, ಅಮೆರಿಕಕ್ಕೆ ಸ್ಪಷ್ಟ ಸಂದೇಶ ರವಾನಿಸುವ ಉದ್ದೇಶವೂ ಇದರ ಹಿಂದೆ ಇರಬಹುದು ಅಂತ ತಿಳಿಸಿದೆ. ಸದ್ಯದ ಮಾಹಿತಿಯ ಪ್ರಕಾರ ಜನವರಿ 5 ಮತ್ತು 11ರಂದು ಉತ್ತರ ಕೊರಿಯಾದ 2 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಇವು ಹೈಪರ್‌ಸಾನಿಕ್ ಕ್ಷಿಪಣಿಗಳು ಅನ್ನೋ ಮಾಹಿತಿ ಲಭ್ಯವಾಗಿದೆ. ಹೈಪರ್‌ಸಾನಿಕ್ ಕ್ಷಿಪಣಿಗಳು ಸಾಮಾನ್ಯ ಕ್ಷಿಪಣಿಗಳಿಗಿಂತ ಅತ್ಯಧಿಕ ವೇಗದಲ್ಲಿ ಚಲಿಸಲಿದೆ ಹಾಗು ಹೆಚ್ಚು ನಿಖರತೆಯಿಂದ ಗುರಿಯೆಡೆಗೆ ಸಾಗುತ್ತವೆ. ಹೀಗಾಗಿ ಇದು ಸಹಜವಾಗಿಯೇ ಅಮೆರಿಕದ ಎದೆ ನಡುಗಿಸಿದೆ

ಒಟ್ಟಾರೆಯಾಗಿ ಕಿಮ್ ಜಾಂಗ್ ಉನ್​ನ ಈ ಹುಚ್ಚಾಟಕ್ಕೆ ಅಮೆರಿಕ ಸೇರಿದಂತೆ ಹಲವು ದೇಶಗಳು ಆಕ್ರೋಶವನ್ನ ವ್ಯಕ್ತ ಪಡಿಸುತ್ತಿದ್ದಾವೆ.  ಆದರೆ ಈ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಕಿಮ್​ ಆನೆ ನಡೆದಿದ್ದೆ ದಾರಿ ಅನ್ನೋ ಹಾಗೆ ಯತಾವತ್​ ಆಗಿ ಮತ್ತೆ ಮತ್ತೆ ಕ್ಷಿಪಣಿಗಳನ್ನ ಪರೀಕ್ಷೆ ನಡೆಸುತ್ತಿದ್ದಾನೆ. ಆ ಮೂಲಕ ಮತ್ತೊಮ್ಮೆ ಜಗತ್ತಿಗೆ ಕಂಟಕ ಪ್ರಾಯವಾಗುವ ನಿಲುವುಗಳನ್ನ ತೆಗೆದುಕೊಳ್ಳುತ್ತಿದ್ದಾನೆ. ಹೀಗಾಗಿ ಈ ಬಗ್ಗೆ ವಿಶ್ವ ಸಮುದಾಯ ಯಾವ ರೀತಿಯಾಗಿ ಉತ್ತರ ಕೊರಿಯಾವನ್ನ ಎದುರಿಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ಲಿಖಿತ್​​ ರೈ, ಪವರ್​​ ಟಿವಿ

RELATED ARTICLES

Related Articles

TRENDING ARTICLES