Monday, December 23, 2024

ಹಿಮಾಲಯದಿಂದ ಸೈಕಲ್​ನಲ್ಲಿ ಬಂದು ಪುನೀತ್ ಸಮಾಧಿಯ ದರ್ಶನ

ಬೆಂಗಳೂರು : ಕರುನಾಡ ರಾಜರತ್ನ ಪುನೀತ್ ರಾಜ್ ಕುಮಾರ್​​ ಅಗಲಿ ಇಷ್ಟು ದಿನಗಳಾದ್ರೂ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಪ್ರತಿ ದಿನವೂ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಬರುತ್ತಲೇ ಇದ್ದಾರೆ . ಹೀಗೆ ಇಲ್ಲೊಬ್ಬ ಅಭಿಮಾನಿಯು ಅವರ ಸಮಾಧಿಯ ದರ್ಶನ ಪಡೆಯಲು ಹಿಮಾಲಯದಿಂದ ಬಂದಿದ್ದಾನೆ.

ಗುರು ಪ್ರಕಾಶ್ ಇವರು ಅಪ್ಪು ಅವರ  ಕಟ್ಟಾ ಅಭಿಮಾನಿಯಾಗಿದ್ದು ಅಪ್ಪು ನಿಧನದ ವಿಷಯ ತಿಳಿದು ಬಹಳ ನೋವಿನಲ್ಲಿದ್ದರು. ಆದ್ದರಿಂದ ಅವರ ಸಮಾಧಿಯ ದರ್ಶನ ಪಡೆಯಬೇಕೆಂಬ ಬಯಕೆಯಿಂದ ಹಿಮಾಲಯದಿಂದ ಸೈಕಲ್​​​ನಲ್ಲಿ ಬಂದು ಪುನೀತ್ ಸಮಾಧಿಯ ದರ್ಶನ ಪಡೆದಿದ್ದಾರೆ.

ಸುಮಾರು 45 ದಿನಗಳ ಕಾಲ ಕಷ್ಟಪಟ್ಟು ಸೈಕಲ್​​​ನಲ್ಲಿ ಪ್ರಯಾಣ ಮಾಡಿ, ಇಂದು ಪುನೀತ್ ರಾಜ್ ಕುಮಾರ್​​ಅವ್ರ ಸಮಾಧಿಯ ಬಳಿ ಬಂದು ಸಮಾಧಿಗೆ ನಮಸ್ಕರಿಸಿ, ಪುನೀತ್ ರಾಜ್ ಕುಮಾರ್​​ ಅವರನ್ನು ಸ್ಮರಿಸಿದರು. ಗುರು ಪ್ರಕಾಶ್ ಹೀಗೆ ಬಹಳ ದೂರದಿಂದ ಸೈಕಲ್​​​ನಲ್ಲಿ ಸವಾರಿ ಮಾಡಿ ಬರುವ ಮೂಲಕ ಅಪ್ಪು ಅವರ ಬಗ್ಗೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES