Monday, December 23, 2024

ಡಿಸಿ ಆದೇಶ ಉಲ್ಲಂಘಿಸಿ ರಥೋತ್ಸವ ಆಚರಣೆ

ಚಿಕ್ಕಮಗಳೂರು:ಜಿಲ್ಲಾಧಿಕಾರಿ ಆದೇಶ ಆದೇಶ ಉಲ್ಲಂಘಿಸಿ ಕಡೂರು ತಾಲೂಕಿನ ಸಖರಾಯಪಟ್ಟಣದ ರಂಗನಾಥ ಸ್ವಾಮಿ ಜಾತ್ರೆ- ರಥೋತ್ಸವ ನಡೆಸಿದ ಹಿನ್ನೆಲೆಯಲ್ಲಿ ದೇಗುಲದ ಅರ್ಚಕರು ಸೇರಿ 9 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಕೊರೊನಾ ಸೋಂಕು ಕಾರಣ ಸಖರಾಯಪಟ್ಟಣದ ರಂಗನಾಥ ಸ್ವಾಮಿ ಜಾತ್ರೆ ಹಾಗೂ ರಥೋತ್ಸವ ನಡೆಸದಂತೆ ಆದೇಶಿಸಿದ್ದ ಡಿಸಿ ಕೆ.ಎನ್ ರಮೇಶ್ ದೇಶ ಹೊರಡಿಸಿದ್ದರು. ಆದರೆ ಈ ಆದೇಶ ಲೆಕ್ಕಿಸದೇ ಸಾವಿರಾರು ಜನರ ಮಧ್ಯೆ ರಥೋತ್ಸವ ಆಚರಣೆ ಮಾಡಲಾಗಿತ್ತು. ಈ ಕುರಿತು ಕಂದಾಯ ನಿರೀಕ್ಷಕ ಜಿತೇಂದ್ರ ಅವರು ದೂರು ಸಲ್ಲಿಸಿದ್ದರು.ದೇಗುಲದ ಅರ್ಚಕ ಕೃಷ್ಣಭಟ್, ನವೀನ್, ವರುಣ್, ರೀತು, ಸಂದೀಪ್, ಸಚಿನ್, ಗಣೇಶ್, ಉಲ್ಲಾಸ್, ನಿತಿನ್ ವಿರುದ್ಧ ಕೇಸ್ ದಾಖಲಾಗಿದೆ.ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES