Sunday, January 19, 2025

ತಮ್ಮ ಮನೆ ಮಾರಾಟಕ್ಕೆ ಮುಂದಾದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರಿಗೆ ಸೇರಿರುವ ಬಂಗಲೆಯೊಂದು ಮಾರಾಟಕ್ಕಿರುವ ಸುದ್ದಿ ಹೊರಬಿದ್ದಿದ್ದು, ಸದಾಶಿವನಗರದಲ್ಲಿರುವ ಲಕ್ಷ್ಮೀ ನಿವಾಸ ಎಂಬ ಬಂಗಲೆಯನ್ನು ಸೇಲ್​ ಮಾಡಲು ಮುಂದಾಗಿದ್ದಾರೆ.

ಈ ಬಂಗಲೆ ಮೌಲ್ಯ 40 ಕೋಟಿಯಾಗಿದ್ದು, ಉದ್ಯಮಿ ಟೈಕೂನ್​ ರವಿ ಎಂಬುವವರು ಈ ಮೊದಲು ವಾಸವಾಗಿದ್ದರು. ಅವರಿಂದಲೇ ಜಾರಕಿಹೊಳಿಯವರು ಕಳೆದ ವರ್ಷ ಈ ಮನೆಯನ್ನು ಖರೀದಿಸಿದ್ದರು.
ಸದ್ಯ ಬೆಳಗಾವಿ ಸಾಹುಕಾರ್​ ರಮೇಶ್​​ ಜಾರಕಿಹೊಳಿ ಅವರು ಈ ಬಂಗಲೆ ಖರೀದಿಸಿ ಬಂದ ಮೇಲೆ ಪದೇಪದೇ ಸಂಕಷ್ಟಕ್ಕೊಳಗಾಗಿದ್ದರು. ಬಂಗಲೆಗೆ ನಂತರವೇ ಅವರು ತಮ್ಮ ಮಂತ್ರಿಗಿರಿ ಕಳೆದುಕೊಂಡರು.
ಈ ಮನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮೇಲಿನ ಪೈಪೋಟಿಗೆ ಬಿದ್ದು ಜಾರಕಿಹೊಳಿ ಅವರು ಸದಾಶಿವನಗರದಲ್ಲಿ ಬಂಗಲೆ ಖರೀದಿಸಿದ್ದರು. ಈ ಬಡಾವಣೆಯಲ್ಲಿಯೇ ನಾನು ಕೂಡ ವಾಸಿಸುತ್ತೇನೆ ಎಂದಿದ್ದರು.

RELATED ARTICLES

Related Articles

TRENDING ARTICLES