Wednesday, January 22, 2025

ವಿಚ್ಛೇದನ ಪತ್ರದಲ್ಲಿ ಧನುಷ್ ದಂಪತಿ ಹೇಳಿರೋದೇನು..?

ಇತ್ತೀಚೆಗೆ ಟಾಲಿವುಡ್​ನ ಸ್ಟಾರ್​ ಜೋಡಿ ಸಮಂತಾ-ನಾಗ ಚೈತನ್ಯ ಸ್ಟಾರ್ ಜೋಡಿ ಪರಸ್ಪರ ವಿಚ್ಛೇದನ ತೆಗೆದುಕೊಳ್ತಿರೋದಾಗಿ ಘೋಷಿಸಿ ತಮ್ಮದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ರು. ಅದರ ಬೆನ್ನಲ್ಲೇ ಇದೀಗ ಸೌತ್ ಸಿನಿ ಲೋಕದ ಮತ್ತೊಂದು ಸ್ಟಾರ್ ಸೆಲೆಬ್ರಿಟಿ ಪೇರ್ ಐಶ್ವರ್ಯ ಹಾಗೂ ಧನುಷ್ ಡಿವೋರ್ಸ್​ ಪಡೆದಿದ್ದು, ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅಷ್ಟಕ್ಕೂ ಧನುಷ್ ದಂಪತಿ ದಿಢೀರ್ ಆಗಿ ಡಿವೋರ್ಸ್​ ಅನೌನ್ಸ್​ ಮಾಡಿರೋದಕ್ಕೆ ಕಾರಣ ಏನು..?

ಕಾಲಿವುಡ್​ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳು ಹೇಗೆ ಸೌಂಡ್ ಮಾಡುತ್ವೋ ಹಾಗೇ, ರಜನಿ ಕುಟುಂಬದ ವಿಚಾರಗಳೂ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ವೆ. ಸದ್ಯ ಅಂತಹದ್ದೊಂದು ಬಿಗ್ ಟಾಕ್ ಕ್ರಿಯೇಟ್ ಮಾಡಿರೋದು ರಜನಿಕಾಂತ್ ಅವ್ರ ಹಿರಿಯ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧ ನುಷ್ ಇಬ್ಬರ ವಿಚ್ಛೇದನದ ವಿಚಾರ.

ಸೌತ್ ಸಿನಿ ಲೋಕದ ಸ್ಟಾರ್ ಜೋಡಿ ಐಶ್ವರ್ಯ ರಜನಿಕಾಂತ್ ಹಾಗೂ ಧನುಷ್ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್​ ನೀಡ್ತಿರೋದಾಗಿ ಘೋಷಿಸಿದ್ದಾರೆ. ಕಳೆದ ವರ್ಷವಷ್ಟೇ ಟಾಲಿವುಡ್ ತಾರಾ ಜೋಡಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆಯುತ್ತಿರೋದಾಗಿ ಹೇಳಿಕೊಂಡಿತ್ತು. ಆ ಜೋಡಿ ಡಿವೋರ್ಸ್​​ ವಿಷ್ಯದ ಬಗ್ಗೆ ಇನ್ನೂ ಚರ್ಚೆಯಾಗ್ತಿರೋವಾಗ್ಲೇ ಸದ್ಯ ದಕ್ಷಿಣ ಭಾರತೀಯ ಚಿತ್ರರಂಗ ಮತ್ತೊಂದು ಸ್ಟಾರ್ ಪೇರ್ ದೂರವಾಗ್ತಿರೋ ಸಂಗತಿ ಹೊರ ಬಿದ್ದಿದೆ.

ಐಶ್ವರ್ಯ ರಜನಿಕಾಂತ್ ಹಾಗೂ ಧನುಷ್ ಇಬ್ಬರೂ ತಾವು ವಿಚ್ಛೇದನ ನೀಡ್ತಿರೋ ವಿಚಾರದ ಬಗ್ಗೆ ದಿಢೀರನೇ ಟ್ವೀಟ್ ಮಾಡಿದ್ದು, ಕಾಲಿವುಡ್​ ಚಿತ್ರರಂಗ ಹಾಗೂ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಸೌತ್ ಸಿನಿ ದುನಿಯಾದ ಚಂದದ ಜೋಡಿಗಳಲ್ಲಿ ಐಶ್ವರ್ಯ ಹಾಗೂ ಧನುಷ್ ಜೋಡಿ ಕೂಡ ಒಂದು. ಆದ್ರೆ ಇದೀಗ ಇಬ್ಬರೂ ಬಾಳ ಬಂಧನಕ್ಕೆ ವಿದಾಯ ಹೇಳಿದ್ದು, ಈ ಸಂಗತಿ ಸದ್ಯ ಅವರ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ.

ಐಶ್ವರ್ಯ ಹಾಗೂ ಧನುಷ್ ಇಬ್ಬರದ್ದೂ ಪ್ರೇಮ ವಿವಾಹ.2004ರ ನವೆಂಬರ್ 18ರಂದು ಸಂಪ್ರದಾಯಬದ್ಧವಾಗಿ ಇಬ್ಬರೂ ವಿವಾಹವಾಗಿದ್ರು. 18 ವರ್ಷಗಳ ಈ ಸುಧೀರ್ಘ ಪಯಣಕ್ಕೆ ಸದ್ಯ ಇಬ್ಬರೂ ಅಂತ್ಯ ಹಾಡಿದ್ದಾರೆ. ಪ್ರೀತಿಸಿ ಮದುವೆಯಾಗಿ ಅಷ್ಟು ಅನ್ಯೋನ್ಯವಾಗಿದ್ದ ಜೋಡಿ ಇದೀಗ ವಿಚ್ಛೇದನದ ಅಪಸ್ವರ ಹಾಡ್ತಿರೋದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ.

ಈ ಹಿಂದೆ ನಟ ರಜನಿಕಾಂತ್ ಅವ್ರ ಕಿರಿಯ ಪುತ್ರಿ ಸೌಂದರ್ಯ ರಜನಿಕಾಂತ್ ಕೂಡ ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿದ್ರು. 2010ರಲ್ಲಿ ಅಶ್ವಿನ್ ರಾಮ್​ಕುಮಾರ್​ ಅವ್ರ ಜೊತೆ ಸಪ್ತಪದಿ ತುಳಿದಿದ್ದ ಸೌಂದರ್ಯ ದಾಂಪತ್ಯ ಬದುಕಿನಲ್ಲಿ ಬಿರುಕು ಮೂಡಿ, 2017ರಲ್ಲಿ ಡಿವೋರ್ಸ್​​ ಪಡೆದುಕೊಂಡಿದ್ರು. ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ವಿಚ್ಛೇದನ ಪಡೆದ ಕೇವಲ ಒಂದೇ ವರ್ಷದ ಅಂತರದಲ್ಲೇ ಅಂದ್ರೆ 2019ರಲ್ಲಿ ಸೌಂದರ್ಯ, ನಟ ಹಾಗೂ ಬ್ಯುಸಿನೆಸ್​​ ಮ್ಯಾನ್​ ವಿಶಾಗನ್ ವನಂಗಮುಡಿ ಅವ್ರ ಜೊತೆ ಅದ್ಧೂರಿಯಾಗಿ ಎರಡನೇ ವಿವಾಹವಾಗಿದರು.

ಇದೀಗ ರಜನಿಕಾಂತ್ ಅವ್ರ ಹಿರಿಯ ಪುತ್ರಿ ಐಶ್ವರ್ಯ ಕೂಡ ಡಿವೋರ್ಸ್​ ಪಡೆಯುತ್ತಿದ್ದು, ತಮ್ಮ ಸಹೋದರಿಯ ಹಾದಿಯಲ್ಲೇ ಹೆಜ್ಜೆ ಇಟ್ಟಿದ್ದಾರೆ. ಅಂದಹಾಗೆ ಐಶ್ವರ್ಯ ಹಾಗೂ ಧನುಷ್ ತಾವು ವಿಚ್ಛೇದನ ಪಡೆಯುತ್ತಿರೋದ್ರ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

18 ವರ್ಷ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಹಾಗೂ ಹಿತೈಷಿಯಾಗಿ ಜೊತೆಗಿದ್ದೆವು. ಬೆಳವಣಿಗೆ, ಪರಸ್ಪರ ಅರಿತುಕೊಳ್ಳುವಿಕೆ, ಹೊಂದಾಣಿಕೆ ಹಾಗೂ ಒಪ್ಪಿಕೊಳ್ಳುವ ಜರ್ನಿ ಮಧುರವಾಗಿತ್ತು. ಇವತ್ತು ನಾವು ನಮ್ಮ ಬೇರೆ ದಾರಿಗಳನ್ನು ಹುಡುಕಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೇವೆ. ಐಶ್ವರ್ಯ ಹಾಗೂ ನಾನು ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದು, ಒಬ್ಬರನ್ನೊಬ್ಬರು ಸ್ವತಂತ್ರ ವ್ಯಕ್ತಿಯಾಗಿ ಅರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ನಿರ್ಧಾರಗಳಿಗೆ ಗೌರವ ನೀಡಿ ಮತ್ತು ಇದನ್ನು ನಿಭಾಯಿಸಲು ಬಿಡಿ ಎಂದು ಧನುಷ್ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಸೂಪರ್ ಸ್ಟಾರ್ ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯ ಕೂಡ ಇದೇ ಪತ್ರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚ್ಛೇದನದ ಪತ್ರಕ್ಕೆ ಒಂದೇ ಸಾಲಿನಲ್ಲಿ ಬರೆದು ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ಯಾವುದೇ ಅಡಿ ಬರಹ ಬೇಡ. ನೀವು ಅರ್ಥ ಮಾಡಿಕೊಳ್ಳುವುದು ಹಾಗೂ ನಿಮ್ಮ ಪ್ರೀತಿ ಅತೀ ಮುಖ್ಯವಾಗಿ ಬೇಕಿದೆ ಎಂದು ಐಶ್ವರ್ಯ ಬರೆದು ಪೋಸ್ಟ್​ ಮಾಡಿದ್ದಾರೆ.

ಐಶ್ವರ್ಯ ರಜನಿಕಾಂತ್ ತಂದೆಯಂತೆಯೇ ಬಣ್ಣದ ಲೋಕದಲ್ಲಿ ನಿರ್ದೇಶಕಿಯಾಗಿ ತಮ್ಮನ್ನು ಗುರುತಿಸಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸೊಗಸಾದ ಕಂಠಸಿರಿ ಹೊಂದಿರೋ ಅವರು ಪ್ಲೇ ಬ್ಯಾಕ್ ಸಿಂಗರ್ ಹಾಗೂ ಡಬ್ಬಿಂಗ್ ಆರ್ಟಸ್ಟ್ ಕೂಡ ಹೌದು. ಧನುಷ್ ಕೂಡ ನಟನಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಕಾಲಿವುಡ್​ನ ಸ್ಟಾರ್​ ನಟರಾಗಿ ಮಿಂಚ್ತಿದ್ದಾರೆ. ಧನುಷ್ ನಟನೆ ಜೊತೆಗೆ ಹಲವಾರು ಚಿತ್ರಗಳ ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಅಲ್ಲದೇ ತಾವೇ ಕೆಲ ಹಾಡುಗಳನ್ನೂ ಹಾಡಿದ್ದಾರೆ.

ಸಿನಿಮಾ ಸಂಬಂಧಿತ ಹಲವು ವಿಶೇಷ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಐಶ್ವರ್ಯ ಹಾಗೂ ಧನುಷ್ ಜೊತೆಯಾಗಿ ಹಾಡಿದ್ರು. ಹೀಗೆ ಬಹುಮುಖ ಪ್ರತಿಭೆಗಳಾದ ಐಶ್ವರ್ಯ ಹಾಗೂ ಧನುಷ್ ಸದ್ಯ ತಮ್ಮ 18 ವರ್ಷಗಳ ಸಾಂಸಾರಿಕ ಜೀವನಕ್ಕೆ ವಿದಾಯ ಹೇಳಿರೋದು ಮಾತ್ರ ಇಬ್ಬರ ಅಭಿಮಾನಿಗಳಲ್ಲಿ ಹೆಚ್ಚು ನಿರಾಸೆ ಹಾಗೂ ಬೇಸರ ತಂದಿದೆ. ಅಂದಹಾಗೆ ಐಶ್ವರ್ಯ ಹಾಗೂ ಧನುಷ್ ಲವ್ ಸ್ಟೋರಿಯೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

RELATED ARTICLES

Related Articles

TRENDING ARTICLES