Wednesday, January 22, 2025

ಗುಜರಾತ್​ಗೆ ಗುಮ್ಮಿದ ‘ಬುಲ್ಸ್​​’

ಬೆಂಗಳೂರು : 8ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್​ ಗೆಲುವಿನ ಅಭಿಯಾನ ಮುಂದುವರೆದಿದ್ದು, ನಿನ್ನೆಯ ಪಂದ್ಯದಲ್ಲಿ ಗುಜರಾತ್​ ವಿರುದ್ಧ 46-37 ಪಾಯಿಂಟ್​ಗಳ ಅಂತರದಿಂದ ಗೆಲುವು ದಾಖಲಿಸಿತು. ​

ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿರುವ ಗ್ರ್ಯಾಂಡ್​ ಶೆರಟಾನ್​ ಹೋಟೆಲ್​​ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುಜರಾತ್​ ವಿರುದ್ಧ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ತದನಂತರ ಭರ್ಜರಿ ದಾಳಿ ನಡೆಸಿ ಮೇಲಿಂದ ಮೇಲೆ ಅಂಕ ಗಳಿಕೆ ಮಾಡಿತು. ಈ ಮೂಲಕ ಬೆಂಗಳೂರು ತಂಡ ರೋಚಕ ಗೆಲುವು ದಕ್ಕಿಸಿಕೊಂಡಿತು. ತಂಡ ಇಲ್ಲಿಯವರೆಗೆ ಆಡಿರುವ 10 ಪಂದ್ಯಗಳಿಂದ 38 ಅಂಕಗಳಿಕೆ ಮಾಡಿ ಮೊದಲ ಸ್ಥಾನದಲ್ಲಿದೆ.

RELATED ARTICLES

Related Articles

TRENDING ARTICLES