Monday, December 23, 2024

ವಿಜಯ್ ದೇವರಕೊಂಡ ಮುಂದಿನ ಚಿತ್ರದ ಸುಳಿವು ನೀಡಿದ ಸುಕುಮಾರ್

ಪುಷ್ಪ ಬಾಕ್ಸ್ ಆಫೀಸ್ ಕಲೆಕ್ಷನ್​ನಿಂದ ಬಾಲಿವುಡ್ ಮಂದಿಯ ಹುಬ್ಬೇರಿಸಿರೋ ಸುಕುಮಾರ್, ಅದ್ರ ಸೀಕ್ವೆಲ್ ಸಿನಿಮಾ ತೆರೆಗೆ ತರೋಕೆ ಮೊದಲೇ ಹೊಚ್ಚ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ. ಹೈ ಕ್ಲಾಸ್ ಸಿನಿಮಾ ಮಾಡೋಕೆ ವಿಜಯ್ ದೇವರಕೊಂಡ ಜೊತೆ ಕೈ ಜೋಡಿಸಿರೋ ಸುಕ್ಕು, ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ.

ತಾನು ಮಾಡೋ ಸಿನಿಮಾಗಳ ಸಂಖ್ಯೆಗಿಂತ ಮಾಡಿರೋ ಸಿನಿಮಾಗಳ ಕ್ವಾಲಿಟಿ ಜನ ಮೆಚ್ಚುವಂತಿರಬೇಕು ಅನ್ನೋದು ಡೈರೆಕ್ಟರ್ ಸುಕುಮಾರ್​ರ ಮನದ ಮಾತು. ಅದ್ರಂತೆ ಆರ್ಯ, ಆರ್ಯ 2, ಹಂಡ್ರೆಡ್ ಪರ್ಸೆಂಟ್ ಲವ್, ನಾನ್ನಕು ಪ್ರೇಮತೋ, ರಂಗಸ್ಥಳಂ ಹೀಗೆ ಮಾಡಿದ ಬಹುತೇಕ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ಸ್.

ಅದ್ರಲ್ಲೂ ಇತ್ತೀಚೆಗೆ ರಿಲೀಸ್ ಆದ ಪುಷ್ಪ ಚಿತ್ರ ಸುಕುಮಾರ್ ಕರಿಯರ್​ನ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್. ಹೌದು.. ಪುಷ್ಪ ದಿ ರೈಸ್ ಚಿತ್ರ ಬರೋಬ್ಬರಿ 300ಕೋಟಿಗೂ ಅಧಿಕ ಮೊತ್ತದ ಹಣ ಗಳಿಸೋದ್ರ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಬಾಷ್ಯೆ ಬರೆಯಿತು. ಬಾಲಿವುಡ್ ಮಂದಿ ಕೂಡ ಇದನ್ನ ಕಂಡು ಬೆಚ್ಚಿ ಬೀಳುವಂತಾಯ್ತು.

ಅಂದಹಾಗೆ ಮೊದಲೇ ಹೇಳಿದಂತೆ ಸುಕುಮಾರ್ ತಮ್ಮ ಡ್ರೀಮ್ ಪ್ರಾಜೆಕ್ಟ್ ಪುಷ್ಪ ಚಿತ್ರವನ್ನ ಎರಡು ಭಾಗಗಳಲ್ಲಿ ತಯಾರಿಸ್ತಿದ್ದು, ಪುಷ್ಪ ದಿ ರೂಲ್ ಸದ್ಯದಲ್ಲೇ ಶೂಟಿಂಗ್ ಮುಗಿಸಲಿದೆ. ಆದ್ರೆ ಆ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗೂಕೂ ಮೊದಲೇ ಸುಕ್ಕು, ತಮ್ಮ ನೆಕ್ಸ್ಟ್ ಮೂವಿ ಅನೌನ್ಸ್ ಮಾಡಿರೋದು ಇಂಪ್ರೆಸ್ಸೀವ್.

ವಿಜಯ್ ದೇವರಕೊಂಡ ಜೊತೆ 2023ರಲ್ಲಿ ಹೊಸ ಸಿನಿಮಾ ಮಾಡೋದಾಗಿ ಸುಕುಮಾರ್ ಕನ್ಫರ್ಮ್​ ಮಾಡಿದ್ದಾರೆ. ಅದಕ್ಕಾಗಿ ದಿ ಱಂಪೇಜ್ ಅನ್ನೋ ಟೈಟಲ್ ಕೂಡ ಇಟ್ಟಿದ್ದಾರೆ. ರೌಡಿ ವಿಜಯ್ ದೇವರಕೊಂಡ ಸಹ ಬಹುಬೇಗ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದು, ಸದ್ಯ ಅವ್ರ ಲೈಗರ್ ಪ್ಯಾನ್ ಇಂಡಿಯಾ ಸಿನಿರಸಿಕರಿಗೆ ಕಿಕ್ ಕೊಡಲು ಸಜ್ಜಾಗಿದೆ.

ಅರ್ಜುನ್ ರೆಡ್ಡಿ ಚಿತ್ರದಿಂದ ಪ್ರೇಕ್ಷಕರಲ್ಲಿ ಕ್ರೇಜ್ ಹುಟ್ಟಿಸಿದ ದೇವರಕೊಂಡ, ಯುನಿಕ್ ಸ್ಟೈಲು ಹಾಗೂ ಮ್ಯಾನರಿಸಂನಿಂದ ಸೆನ್ಸೇಷನಲ್ ಸ್ಟಾರ್ ಆಗಿ ಕಮಾಲ್ ಮಾಡ್ತಿದ್ದಾರೆ. ಅದ್ರ್ಲಲೂ ರೌಡಿ ಅನ್ನೋ ಬ್ರ್ಯಾಂಡ್ ಹುಟ್ಟಿ ಹಾಕಿದ ವಿಜಯ್​ಗೆ ವಿಜಯವೇ ಅವ್ರ ಹಿಂದೆ ಬಿದ್ದಿದೆ. ಇದೀಗ ಸುಕುಮಾರ್ ಡೈರೆಕ್ಟ್ ಮಾಡಲಿರೋ ದಿ ಱಂಪೇಜ್ ಸಿನಿಮಾನ ಅಲ್ಲು ಅರ್ಜುನ್ ನಿರ್ಮಿಸಲಿದ್ದಾರೆ ಅನ್ನೋದು ಸದ್ಯದ ಟಾಕ್.

ಹೈ ಕ್ಲಾಸ್ ಫ್ಯಾಮಿಲಿ ಎಂಟರ್​ಟೈನರ್ ಕಥಾನಕ ಇದಾಗಲಿದ್ದು, ಈ ಹಿಂದೆ ನಾನ್ನಕು ಪ್ರೇಮತೋ ಆನ್ನೋ ಕ್ಲಾಸ್ ಕಂಟೆಂಟ್​ನ ಪ್ರೆಸೆಂಟ್ ಮಾಡಿದ್ದ ಸುಕುಮಾರ್​ಗೆ ಅದೇ ಬಗೆಯ ಸ್ಪೆಷಲ್ ಕಥೆಯನ್ನ ನೋಡುಗರಿಗೆ ನೀಡೋ ಧಾವಂತದಲ್ಲಿದ್ದಾರೆ. ಅದೇನೇ ಇರಲಿ, ಇದೇ ಮೊದಲ ಬಾರಿ ಇವರಿಬ್ಬರ ಕಾಂಬೋ ಒಟ್ಟಿಗೆ ಸಿನಿಮಾ ಮಾಡಲಿದ್ದು, ಸಹಜವಾಗಿಯೇ ನಿರೀಕ್ಷೆಗಳು ದುಪ್ಪಟ್ಟಾಗಲಿದೆ.

RELATED ARTICLES

Related Articles

TRENDING ARTICLES