ಹಾವೇರಿ : ೧ ವರ್ಷ ಗಳ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಗೊಂಡಿದ್ದ ಯುವಕನ ಸಾವಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಬನ್ನಿಹಟ್ಟಿ ತಾಂಡ ಗ್ರಾಮದಲ್ಲಿ ನಡೆದಿದೆ.
ಪ್ರಸನ್ನ ಲಮಾಣಿ ( ೨೦ ) ವಿಷ ಸೇವಿಸಿ ಸಾವನ್ನಪ್ಪಿದ ಯುವಕ. ಈತ ಕಳೆ ಒಂದು ವರ್ಷದ ಹಿಂದೆ ಕಾವ್ಯ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ ಆದರೆ, ಕಾವ್ಯ ಮೈನರ್ ಇದ್ದ ಕಾರಣ ಪೋಕ್ಸೋ ಪ್ರಕರಣದಡಿ ಪ್ರಸನ್ನನ ಮೇಲೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಾದ ಬಳಿಕ ಜೈಲು ಸೇರಿ ಬಿಡುಗಡೆಯಾಗಿದ್ದ ಪ್ರಸನ್ನ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದ ಪ್ರಸನ್ನನಿಗೆ ಕಾವ್ಯಳ ಮನೆಯವರ ಕಿರುಕುಳ ತಳಲಾರದೆ ಮನನೊಂದು ಯುವಕ ವಿಷ ಸೇವಿಸಿ ಸಾವು ನನ್ನ ಸಾವಿಗೆ ಕಾವ್ಯ ಕಾರಣ ಅಂತ ಸ್ಟೇಟ್ಸ್ ಹಾಕಿ ಮನೆಯಲ್ಲಿಯೇ ಪ್ರಸನ್ನ ಸಾವಿಗೆ ಶರಣಾಗಿದ್ದಾನೆ. ಇತ್ತ ಯುವಕನ ಪೋಷಕರು ಕಾವ್ಯ ಮನೆಯವರ ಮೇಲೆ ಆರೋಪ ಮಾಡಿದ್ದಾರೆ. ಸಧ್ಯ, ಮಾಸೂರು ಪ್ರಾಥಮಿಕ ಆಸ್ಪತ್ರೆಯಲ್ಲಿ ಮೃತ ಯುವಕ ಪ್ರಸನ್ನನ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ ಹಾಗೂ ಹಿರೆಕೇರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.