Wednesday, April 24, 2024

ಹಿರಿಯ ಸಾಹಿತಿ ಚಂಪಾ ವಿಧಿವಶ

ಕನ್ನಡ ನಾಡಿನ ಕವಿ, ನಾಟಕಗಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹಿರಿಯ ಸಾಹಿತಿ (ಚಂಪಾ) ಚಂದ್ರಶೇಖರ ಪಾಟೀಲ ಇಂದು ವಿಧಿವಶರಾಗಿದ್ದಾರೆ.

18 ಜೂನ್ 1939 ರ ಕಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರಿನಲ್ಲಿ ಜನಿಸಿದರು. ಬಾಲ್ಯದಿಂದಲೇ ತುಂಬಾ ಚುರುಕಾಗಿದ್ದ ಇವರು ಶಿಕ್ಷಣದ ಪ್ರತಿ ಹಂತದಲ್ಲಿಯೂ ಅಗ್ರ ಶ್ರೇಯಾಂಕ ಗಳಿಸಿದ ಕೀರ್ತಿ ಇವರದಾಗಿತ್ತು. ಚಂದ್ರಶೇಖರ ಪಾಟೀಲರು ಕರ್ನಾಟಕದ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸದರು. ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ತಮ್ಮ ಕಾವ್ಯ ಮತ್ತು ನಾಟಕಗಳ ಮೂಲಕ ಪ್ರಸಿದ್ದರಾಗುತ್ತಾ ಬಂದರು. ಹೈಸ್ಕೂಲ್​ನಲ್ಲಿದ್ದಾಗ ಕವನ ಬರೆಯುವ ಬಗ್ಗೆ ಆಸಕ್ತಿ ಮೂಡಿಸಿಕೊಂಡರು. ಹೀಗಾಗಿ ಎಳೆ ವಯಸ್ಸಿನಲ್ಲಿ ಸಾಹಿತ್ಯದ ಪ್ರಭಾವ ಬೀರಿದರು. ಇವರ ಹಲವಾರು ಕವನಗಳು ಪ್ರಪಂಚ ಪತ್ರಿಕೆಯಲ್ಲಿ ಪ್ರಕಟಗೊಂಡವು. ಕಾವ್ಯದಲ್ಲಿ ಬೆಳೆದ ಆಸಕ್ತಿಯಿಂದ ಹಲವಾರು ಮಂದಿ ಉದಯೋನ್ಮಖರು ಸೇರಿ ಕಮಲ ಮಂಡಲ ಎಂಬ ಸಂಸ್ಧೆಯನ್ನು ಹುಟ್ಟುಹಾಕಿದರು.
1957ರಲ್ಲಿ ಚಂದ್ರಶೇಖರ ಪಾಟೀಲರು ಹೊಂಗನಸು ಹಡಗು ನಾಳಿಗಿದೋ ಸ್ವಾಗತ , ಚರಿಪನಾದವೊ ಹಾಡು ಹಕ್ಕಿಯೋ ಮುಂತಾದ ಕವನಗಳು ಪ್ರಕಟಗೊಂಡವು.

ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಚಂಪಾರವರು ಹಲವಾರು ಸಮಸ್ಯೆಗಳ ಮಿಡಿತಕ್ಕೆ ಒಳಗಾಗಿ ಕಾವ್ಯ ಮಾಧ್ಯಮದಿಂದ ನಾಟಕವನನ್ನೂ ಆಯ್ದುಕೊಂಡು ಹಲವಾರು ಸಮಸ್ಯೆಗಳ ಮಿಡಿತದಿಂದಾಗಿ ಇವರು ಹಲವಾರು ನಾಟಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕೊಡೆಗಳು, ಅಪ್ಪ, ಕುಂಟ ಕುರುವತ್ತಿ ಗುರ್ತಿನವರು,ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ,ಜಗದಂಬೆಯ ಬೀದಿನಾಟಕ , ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ಕನ್ನಡ ಹೋರಾಟಗಾರರಾದ ಇವರು ಕನ್ನಡ ನಾಡು ನುಡಿ ಸಂಸ್ಕೃತಿಯ ನಿರಂತರವಾಗಿ ಹೋರಾಡುತ್ತಾ ಬಂದಿರುವ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (1960,74,76) ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಸಂದೇಶ್ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಕೆ.ವಿ ಶಂಕರಗೌಡ ರಂಗಭೂಮಿ ಪ್ರಶಸ್ತಿ , 2017 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2018ರ ಸಾಲಿನಲ್ಲಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಚಂಪಾ ಅವರ ಅನೇಕ ಗೀತೆಗಳು ಕರ್ನಾಟಕದ ಪ್ರಸಿದ್ಧ ಗಾಯಕರ ಧ್ವನಿಯಲ್ಲಿ ವೈಭವಿಸಿದೆ. ಸಿ ಅಶ್ವತ್ಧರ ಧ್ವನಿಯಲ್ಲಿ ಮೂಡಿರುವ ಗುಪ್ತಗಾಮಿನಿ ನನ್ನ ಶಾಲ್ಮಲ ಅತ್ಯಂತ ಜನಪ್ರಿಯವಾಗಿದೆ.

RELATED ARTICLES

Related Articles

TRENDING ARTICLES