Monday, December 23, 2024

ನಟಿ ಹಿತಾ ಚಂದ್ರಶೇಖರ್​ಗೆ ಕೊರೋನಾ

ಕನ್ನಡ ಸಿನಿಮಾ ನಟಿ ಹಿತಾ ಚಂದ್ರಶೇಖರ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ‘ನನಗೆ ಕೊರೋನಾ ಪಾಸಿಟಿವ್, ಸಣ್ಣ ಪುಟ್ಟ ಲಕ್ಷಣಗಳು ಕಾಣಿಸಿಕೊಂಡಿವೆ. ವ್ಯಾಕ್ಸಿನ್ ತೆಗೆದುಕೊಂಡಿರುವುದಕ್ಕೆ ಸಹಾಯವಾಯಿತು, ವ್ಯಾಕ್ಸಿನ್‌ಗೆ ಧನ್ಯವಾದಗಳು.

ನಾನು ಮೂರು ದಿನಗಳಿಂದ ಐಸೋಲೇಟ್‌ ಆಗಿದ್ದೀನಿ. ಕೊರೋನಾ ಟೆಸ್ಟ್‌ ರಿಸಲ್ಟ್‌ ಬಂದು ಮೂರು ದಿನಗಳಾಗಿತ್ತು. ದೇವರ ದಯೆ ನಾನು ಹೆಚ್ಚಿನ ಜನರನ್ನು ಭೇಟಿ ಮಾಡಿಲ್ಲ, ನನ್ನಿಂದ ಬೇರೆ ಅವರಿಗೆ ತಗಲುವ ಹಾಗೆ ನಾನು ಮಾಡಿಲ್ಲ. ದಯವಿಟ್ಟು ಮಾಸ್ಕ್‌ ಧರಿಸಿ, ವ್ಯಾಕ್ಸಿನ್ ಹಾಕಿಸಿಕೊಳ್ಳಿ ಹಾಗೂ ಎಲ್ಲಾ ರೀತಿಯ ಕೋವಿಡ್ ರೂಲ್ಸ್ ಫಾಲೋ ಮಾಡಿ, ಮುನ್ನೆಚ್ಚರಿಕೆ ವಹಿಸಿ,’ ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES