Wednesday, January 22, 2025

ಹಣ್ಣಿನಲ್ಲಿ ಪತ್ತೆಯಾಯ್ತಾ ಕೊರೋನಾ ಕುರುಹು!?

ಡ್ರ್ಯಾಗನ್​ ಹಣ್ಣು.. ಈ ಹಣ್ಣು ಹೆಚ್ಚಿನ ಭಾರತೀಯರಿಗೆ ಪರಿಚಯವಿಲ್ಲದಿದ್ದರು, ದಕ್ಷಿಣ ಅಮೆರಿಕ, ಥಾಯಿಲ್ಯಾಂಡ್​, ವಿಯೇಟ್ನಂ, ಚೀನಿಯರಿಗೆ ಅಚ್ಚುಮೆಚ್ಚಿನ ಹಣ್ಣಾಗಿ ಗುರುತಿಸಿಕೊಂಡಿದೆ. ಸಾಧಾರಣವಾಗಿ ಈ ಹಣ್ಣನ್ನ ಬೆಳೆದರೆ ಹೆಚ್ಚು ನಷ್ಟವಾಗೋದಿಲ್ಲ ಆದರೆ ಇದರ ಆರೈಕೆಯಲ್ಲಿ ಹೆಚ್ಚ ಗಮನ ಕೊಡದೇ ಹೊದರೆ ಇದು ಬಹು ದೊಡ್ಡ ನಷ್ಟವನ್ನಂತು ಕಟ್ಟಿ ಕೊಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟದ್ರೂ ಈ ಹಣ್ಣನ್ನ ಬೆಳೆಯುವವರ ಸಂಖ್ಯೆ ಏನು ಕಡಿಮೆ ಇಲ್ಲ. ಇದು ಸ್ವಾದದಲ್ಲಿ ಎಷ್ಟು ಉತ್ತಮವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ಆರೋಗ್ಯಕ್ಕೆ ಕೂಡ ಉತ್ತಮವಾದ ಹಣ್ಣು ಅಂತ ಗುರುತಿಸಿಕೊಂಡಿದೆ. ಹಾಗಾಗಿ ಇದನ್ನ ಚೀನಾದಲ್ಲಿ ಸಾಕಷ್ಟು ಜನ ರೋಗಿಗಳಿಗೆ ಕೂಡ ನೀಡಲಾಗ್ತಾ ಇತ್ತು, ಆದ್ರೆ ಇದೀಗ ಇದೇ ಡ್ರ್ಯಾಗನ್​ ಫ್ರೂಟ್​ ಕೊರೋನಾ ರೋಗವನ್ನ ತಂದೊಡ್ಡಲಿದೆ ಅಂತ ಹಲವರು ಆತಂಕಕ್ಕೆ ಕೂಡ ಒಳಗಾಗಿದ್ದಾರೆ.

ಈ ಡ್ರ್ಯಾಗನ್ ಫ್ರೂಟ್​ಗಳನ್ನ ಚೀನಾ, ಥಾಯಿಲ್ಯಾಂಡ್ ಸೇರಿದ ಹಾಗೆ ವಿಯೆಟ್ನಾಂನಲ್ಲಿ ಹೆಚ್ಚು ಬೆಳೆಯಲಾಗುತ್ತದೆ ಹಾಗು ಇದೇ ದೇಶಗಳಲ್ಲಿ ಹೆಚ್ಚು ಜನರು ಈ ಹಣ್ಣನ್ನ ಸೇವಿಸುತ್ತಾರೆ. ಇನ್ನು ಈ ಡ್ರ್ಯಾಗನ್ ಹಣ್ಣುಗಳು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಮತ್ತು ಇ ಅಂಶಗಳಿದ್ದು. ಕಬ್ಬಿಣ ಹಾಗು ಮೆಗ್ನೀಸಿಯಮ್ ಕೂಡ ಅಧಿಕವಾಗಿದೆ. ಆದ್ದರಿಂದ ಈ ಹಣ್ಣುಗಳನ್ನು ಎಷ್ಟು ಹೆಚ್ಚು ತಿನ್ನುತ್ತಾರೋ ಅವರು ಅಷ್ಟು ಕ್ರಿಯಾಶೀಲರಾಗುತ್ತಾರೆ ಅಂತ ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಹಣ್ಣಿನಲ್ಲಿ ಪ್ರೋಬಯಾಟಿಕ್ ಅಂಶಗಳು ಇದ್ದು, ಇದರ ಸೇವನೆಯಿಂದ ಹೊಟ್ಟೆ, ಕರುಳು ಮತ್ತು ಅನ್ನನಾಳದ ಸಮಸ್ಯೆ ಹೋಗಲಾಡಿಸೋದ್ರ ಜೊತೆಗೆ. ಸ್ವಚ್ಛ ಮಾಡಿ ತಿನ್ನುವುದರಿಂದ ಕ್ಯಾನ್ಸರ್ ರೋಗವನ್ನು ಹೋಗಲಾಡಿಸುವ ಶಕ್ತಿ ಈ ಹಣ್ಣಿನಲ್ಲಿ ಇರುವ ಸಾಧ್ಯತೆ ಇದೆ ಅಂತ ಚೀನಿಯರು ನಂಬುತ್ತಾರೆ. ಇಷ್ಟೆಲ್ಲ ಆರೋಗ್ಯಕ್ಕೆ ಉತ್ತಮವಾಗಿರುವ ಈ ಡ್ರ್ಯಾಗನ್​ ಫ್ರೂಟ್,​ ಇದೀಗ ಕೊರೋನಾ ವೈರಸ್​​ ಅನ್ನ ಹೊತ್ತು ತರುತ್ತೆ ಅನ್ನೊ ಆಘಾತಕಾರಿ ಸುದ್ಧಿಯೊಂದು ಹೊರಬಿದ್ದಿದೆ.

ಕಳೆದ ವಾರವಷ್ಟೆ ಚೀನಾದಲ್ಲಿ ವಿಯೆಟ್ನಾಂನಿಂದ ತರಿಸಿಕೊಂಡಿದ್ದ ಡ್ರ್ಯಾಗನ್​ ಫ್ರೂಟ್​ಗಳಲ್ಲಿ ಕೊರೋನಾ ಕುರುಹು ಇರುವ ಬಗ್ಗೆ ಸುದ್ದಿಯಾಗಿತ್ತು, ಆದ್ರೆ ಅದನ್ನ ಬಹುತೇಕ ತಜ್ಙರು ತಳ್ಳಿ ಹಾಕಿದ್ರು, ಆದ್ರೆ ಇದೀಗ ಈ ಸುದ್ಧಿ ನಿಜವೇನೊ ಅನ್ನೋ ಹಾಗೆ ಚೀನಾದ ಅಧಿಕಾರಿಗಳು ಹಲವಾರು ಸೂಪರ್ ಮಾರ್ಕೆಟ್​​ಗಳನ್ನು ಲಾಕ್ ಮಾಡಿದ್ದಾರೆ. ಝೆಜಿಯಾಂಗ್ ಮತ್ತು ಜಿಯಾಂಗ್​ಕ್ಸಿ ಪ್ರಾಂತ್ಯಗಳು ಸೇರಿದ ಹಾಗೆ ಸುಮಾರು ಒಂಬತ್ತು ನಗರಗಳಲ್ಲಿ ಡ್ರ್ಯಾಗನ್​ ಹಣ್ಣುಗಳನ್ನ ಸೇವಿಸದಂತೆ ಆದೇಶವನ್ನ ಹೊರಡಿಸಲಾಗಿದೆ, ಇದೀಗ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನಲ್ಲಿ ಕೊರೊನಾ ವೈರಸ್ ಮಾದರಿಗಳನ್ನು ಕಂಡುಕೊಂಡಿರೋದು ಅಧಿಕೃತವಾಗಿದೆ.

ಸದ್ಯಕ್ಕೆ ಇದುವರೆಗೂ ಯಾವುದೇ ಆಹಾರದಿಂದ ಕೊರೊನಾ ವೈರಸ್ ಹರಡಿರುವ ಬಗ್ಗೆ ವರದಿಯಾಗಿಲ್ಲ. ಆದ್ರೆ ಚೀನಾ ಇದೀಗ ಕೇವಲ ಡ್ರ್ಯಾಗನ್​ ಫ್ರೂಟ್​ ಮೇಲೆ ನಿಷೇಧ ಹೇರುತ್ತಿರೋದು ಹಲವು ಅನುಮಾನಗಳಿಗೆ ಎಡ ಮಾಡಿಕೊಟ್ಟಿರೋದಂತು ಸುಳ್ಳಲ್ಲ, ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಡಿಸೆಂಬರ್ ಕೊನೆಯ ವಾರದಲ್ಲಿ ಡ್ರ್ಯಾಗನ್​ ಫ್ರೂಟ್​ನಲ್ಲಿ ಕೋವಿಡ್-19 ಕುರುಹುಗಳು ಪತ್ತೆಯಾಗಿದೆ ಅಂತ ವರದಿಯಾಗಿತ್ತು, ಆಗ ಚೀನಾ ಏಕಾಏಕಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರ್ಯಾಗನ್ ಹಣ್ಣಿನ ಮೇಲೆ ಜನವರಿ 26 ರವರೆಗೆ ನಿಷೇಧ ಹೇರಿತ್ತು. ಆಗ ಇದು ಚೀನಾ ವಿಯೇಟ್ನಾ ಮೇಲೆ ನಡೆಸುತ್ತಿರುವ ಆರ್ಥಿಕ ಯುದ್ಧವಾಗಿರ ಬಹುದು ಅಂತ ಭಾವಿಸಲಾಗಿತ್ತು.
ಆದ್ರೆ ಹೀಗೆ ಹೇಳ್ತಾ ಇದ್ದ ಹಾಗೆ ಚೀನಾದ ಹಲವು ವೈದ್ಯರು ಕೂಡ ಡ್ರ್ಯಾಗನ್​ ಫ್ರೂಟ್​ ಸೇವಿಸೋದು ಅದ್ಯಕ್ಕೆ ಒಳ್ಳೆಯದಲ್ಲ ಅನ್ನೋ ಹೇಳಿಕೆಯನ್ನ ನೀಡಿದ್ರು, ಹೀಗಾಗಿ ಚೀನಾಕ್ಕೆ ಡ್ರ್ಯಾಗನ್ ಹಣ್ಣುಗಳನ್ನು ಕಳುಹಿಸುವ ಮಾರ್ಗವಾದ, ಲ್ಯಾಂಗ್ ಸನ್ ಪ್ರಾಂತ್ಯದ ಹುಯು ನ್ಘಿ ಬಾರ್ಡರ್ ಗೇಟ್ ಮೇಲೆ ನಿಷೇಧವನ್ನ ಹೇರಲಾಯಿತು.

ಕಂಟೇನರ್ ಟ್ರಕ್ ಗಳನ್ನು ಮರಳಿ ಕಳುಹಿಸಿದ್ದರಿಂದ ಅಧಿಕಾರಿಗಳು ತಾನ್ ಥಾನ್ ಎಂಬ ಮತ್ತೊಂದು ಗಡಿ ಗೇಟ್ ನಿಂದ ಡ್ರ್ಯಾಗನ್ ಹಣ್ಣನ್ನು ಆಮದು ಮಾಡುವುದನ್ನ ನಿಷೇಧಿಸಿದ್ರು, ಜೊತೆಗೆ ಚೀನಾದ ಮಾರುಟ್ಟೆಯಲ್ಲಿರುವ ಡ್ರ್ಯಾಗನ್​ ಫ್ರೂಟ್​ ತನ್ನೋದನ್ನಚೀನಾ ಸ್ಥಳೀಯ ಆಡಳಿತಗಳು ತಡೆ ಹಿಡಿದ್ವು, ಹೀಗಾಗಿ ಚೀನಾ ಸರ್ಕಾರದ ಈ ನಿರ್ಧಾರ ಡ್ರ್ಯಾಗನ್ ಫ್ರೂಟ್​ ಸೇವಿಸುತ್ತಿದ್ದವರ ಆತಂಕವನ್ನ ಹೆಚ್ಚು ಮಾಡಿತ್ತು, ಆದ್ರೆ ಚೀನಾ ಈ ಬಗ್ಗೆ ಬಾಯಿ ಬಿಚ್ಚದೇ ಇದ್ರು ಕೆಲ ಆಹಾರ ತಜ್ಞರು ಮಾಹಿತಿ ನೀಡಿದ್ದು, ಅವರ ಪ್ರಕಾರ ಈ ಹಣ್ಣಗಳ ಸಾಗಿಸುವ ವೇಳೆ ಯಾರದರು ಸೀನಿದ್ದರೆ, ಕೆಮ್ಮಿದ್ದರೆ, ಸೋಂಕಿತ ವ್ಯಕ್ತಿ ಈ ಹಣ್ಣುಗಳ ಸಾಗಣೆಯಲ್ಲಿ ಭಾಗಿಯಾಗಿದ್ದರೆ ಕೊರೋನಾದ ಕುರುಹುಗಳು ಪತ್ತೆಯಾಗಿರುತ್ತವೆ ಹೊರತು ಈ ಹಣ್ಣುಗಳಲ್ಲಿ ಸೋಂಕು ಉತ್ಪತ್ತಿಯಾಗಿಲ್ಲ ಮತ್ತು ಇವುಗಳಿಗೆ ಸೋಂಕು ತಗುಲೋದಕ್ಕೆ ಸಾಧ್ಯವಿಲ್ಲ ಅನ್ನೋ ಹೇಳಿಕೆಯನ್ನ ನೀಡಿದ್ದಾರೆ.

ಸದ್ಯಕ್ಕೆ ಆಹಾರ ತಜ್ಞರು ನೀಡಿರುವ ಈ ಹೇಳಿಕೆ ಇದೀಗ ಡ್ರ್ಯಾಗನ್​ ಫ್ರೂಟ್​ ಸೇವಿಸುತ್ತಿದ್ದವರಿಗೆ ಕೊಂಚ ನಿರಾಳತೆಯನ್ನ ನೀಡಿದೆ, ಆದ್ರೆ ಆಹಾರದಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಇನ್ನಷ್ಟೆ ವಿಜ್ಞಾನಿಗಳು ಪತ್ತೆ ಹಚ್ಚ ಬೇಕಾಗಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತೆ ಅನ್ನೋದನ್ನ ಕಾದು ನೋಡ ಬೇಕಿದೆ.

ಲಿಖಿತ್​ ರೈ, ಪವರ್​​ ಟಿವಿ

RELATED ARTICLES

Related Articles

TRENDING ARTICLES