Monday, December 23, 2024

ಸುರಿಯುವ ಹಿಮದಲ್ಲೂ ‘ಅಪ್ಪು’ ನೆನಪು

ಜಮ್ಮು & ಕಾಶ್ಮೀರ : ಚಿತ್ರ ನಟ ಪುನೀತ್‌ ರಾಜಕುಮಾರ್‌ ನಮ್ಮನ್ನು ಅಗಲಿ ಎರಡು ತಿಂಗಳು ಕಳೆದರೂ ಅವರ ನೆನಪು ಮಾತ್ರ ಮಾಸಿಲ್ಲ. ಪುಲ್ವಾಮಾದಲ್ಲಿ ಕೊರೆಯುವ ಚಳಿಯ ನಡುವೆ ಅಪ್ಪು ಫೋಟೋದೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಅಪ್ಪು ಅಮರ ಎಂದು ಹೇಳುತ್ತಿದ್ದಾರೆ.

ಪುಲ್ವಾಮಾ ಜಿಲ್ಲೆಯ ಯೂಸು ಮಾರ್ಗದಲ್ಲಿ ರಾಷ್ಟ್ರೀಯ ರೈಫಲ್‌ ಪಡೆಯ ಬಟಾಲಿಯನ್​​ನಲ್ಲಿರುವ ಬಹುತೇಕರು ಕನ್ನಡಿಗರಿದ್ದು, ಅದರಲ್ಲೂ ಅಪ್ಪು ಅಭಿಮಾನಿಗಳೇ ಹೆಚ್ಚು.ಇದರಲ್ಲಿ ಕೊಪ್ಪಳ ತಾಲೂಕಿನ ಡಂಬರಳ್ಳಿಯ ವಾಸನಗೌಡ, ರಾಮನಗೌಡ ಸಹ ಇದ್ದು ಅಪ್ಪು ಅಭಿಮಾನಿಯಾಗಿದ್ದಾರೆ. ಇಲ್ಲಿರುವ ಬಹುತೇಕರು ಕರ್ತವ್ಯದ ಮಧ್ಯೆಯೂ ಹಿಮದ ರಾಶಿಯಲ್ಲಿ ಅಪ್ಪುವಿನ ಫೋಟೋ ಇಟ್ಟುಕೊಂಡು ನಿತ್ಯವೂ ನೆನೆಯುತ್ತಿದ್ದಾರೆ.ಪುಲ್ವಾಮದ ಯೂಸು ಮಾರ್ಗದ ಬಟಾಲಿಯನ್‌ನಲ್ಲಿ ಕನ್ನಡಿಗರೇ ಅಧಿಕವಾಗಿದ್ದೇವೆ. ಹಿಮದ ಮಧ್ಯೆಯೇ ಕರ್ತವ್ಯ ನಿರ್ವಹಿಸುತ್ತಿದ್ದು, ಅಪ್ಪು ಅಭಿಮಾನಿಗಳೇ ಹೆಚ್ಚಿರುವುದರಿಂದ ಅವರ ಫೋಟೋ ಇಟ್ಟುಕೊಂಡಿದ್ದೇವೆ ಅಂತ ಯೋಧ ವಾಸನಗೌಡ ರಾಮನಗೌಡ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES