ಹುಟ್ಟುಹಬ್ಬ ಅನ್ನೋದು ಮಾನವ ಸಮೂದಾಯ ತನ್ನ ಉಗಮದ ಬಗ್ಗೆ ನೆನಪಿಸಿಕೊಳ್ಳುವ ಸಂಭ್ರದ ದಿನ, ಹಾಗೆಯೇ ಜನ್ಮದಿನ ಅನ್ನೋದು ಜೀವಿಯೊಂದರ ವಯಸ್ಸು ಹೆಚ್ಚಾಗುತ್ತಿದೆ ಅನ್ನೋದನ್ನ ಸೂಚಿಸುತ್ತದೆ ಹಾಗಾಗಿ ಮಾನವ ಸಮೂದಾಯದ ಬಹುತೇಕರು ತಮ್ಮ ಹುಟ್ಟು ಹಬ್ಬವನ್ನ ಸಂಭ್ರಮದಿಂದ ಆಚರಿಸೋದಕ್ಕೆ ನಿರ್ಧಾರ ಮಾಡ್ತಾರೆ. ಅದೇ ರೀತಿ ತಾವು ಸಾಕಿದ ಪ್ರಾಣಿಗಳ ಹುಟ್ಟು ಹಬ್ಬವನ್ನ ಕೂಡ ಸಾಕಷ್ಟು ಜನ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ. ಆ ಮೂಲಕ ತಮ್ಮ ಸಾಕು ಪ್ರಾಣಿಗಳನ್ನ ಕೂಡ ಸಂತಸದಲ್ಲಿ ಇಡೋದಕ್ಕೆ ಸಾಕಷ್ಟು ಜನ ಪ್ರಯತ್ನ ಪಡ್ತಾರೆ.
ಹೀಗೆ ತಮ್ಮ ಸಾಕು ಪ್ರಾಣಿಗಳ ಹುಟ್ಟುಹಬ್ಬವನ್ನ ಆಚರಿಸ ಬೇಕಾದ್ರೆ ಸಾಕಷ್ಟು ಜನ ತಮ್ಮ ಬಂಧು ಬಾಂಧವರನ್ನ ಮನೆಗೆ ಕರೆದು ಅವರ ಆತಿಥ್ಯವನ್ನ ವಹಿಸಿಕೊಳ್ಳುತ್ತಾರೆ. ತಮ್ಮ ಮನೆಗೆ ಭಿನ್ನ-ವಿಭಿನ್ನವಾದ ಅಲಂಕಾರವನ್ನ ಮಾಡಿ ಒಂದು ಹಬ್ಬದ ರೀತಿಯಲ್ಲಿ ತಮ್ಮ ಸಾಕು ಪ್ರಾಣಿಯ ಹುಟ್ಟು ಹಬ್ಬವನ್ನ ಆಚರಣೆ ಮಾಡುತ್ತಾರೆ. ಈ ಆಚರಣೆ ಮಾಡೋದಕ್ಕೆ ಪ್ರಮುಖವಾದ ಕಾರಣ ಅಂದ್ರೆ ಆ ಪ್ರಾಣಿ ಹಾಗು ಅದರ ಮಾಲೀಕನಿಗಿರುವ ಅವಿನಾಭಾವ ಸಂಬಂಧ, ಹಾಗು ಕೆಲವರು ತಮ್ಮ ಸಾಕು ಪ್ರಾಣಿಗಳನ್ನ ಮಕ್ಕಳಂತೆ ನೋಡಿಕೊಳ್ಳುವ ಮನೋಭಾವ ಹೀಗಾಗಿ ಅವುಗಳ ಹುಟ್ಟುಹಬ್ಬಕ್ಕಾಗಿ ಸಾಕಷ್ಟು ಜನ ಸಾವಿರಾರು ರೂಪಾಯಿಗಳನ್ನ ಖರ್ಚು ಮಾಡಿ ತಮ್ಮ ಸಂತಸವನ್ನ ವ್ಯಕ್ತ ಪಡಿಸುತ್ತಾರೆ. ಆದ್ರೆ ಇದು ಸರ್ವೇ ಸಾಮಾನ್ಯವಾದ ವಿಚಾರವಾದ್ದರಿಂದ ಅಷ್ಟರ ಮಟ್ಟಿಗೆ ಸುದ್ಧಿ ಮಾಡೋದಿಲ್ಲ. ಆದ್ರೆ ಇತ್ತೀಚೆಗೆ ಚೀನಾದ ಮಹಿಳೆಯೊಬ್ಬರು ತನ್ನ ಮುದ್ಧಿನ ಶ್ವಾನದ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದು ಇದೀಗ ಈ ವಿಚಾರ ವಿಶ್ವದಾದ್ಯಂತ ಬಾರಿ ಸದ್ದು ಮಾಡ್ತಾ ಇದೆ. ಅದಕ್ಕೆ ಕಾರಣ ಆಕೆ ಖರ್ಚು ಮಾಡಿದ ಹಣ.
ಚೀನಾದ ಮಹಿಳೆ ತನ್ನ ಶ್ವಾನದ 10ನೇ ಹುಟ್ಟುಹಬ್ಬದಂದು ಸುಮಾರು 100,000 ಯುವಾನ್ ಅಂದ್ರೆ 11 ಲಕ್ಷ ರುಪಾಯಿಯನ್ನ ಖರ್ಚು ಮಾಡಿದ್ದಾಳೆ. ಇದು ವಿಶ್ವದಾದ್ಯಂತ ಸಾಕಷ್ಟು ಸುದ್ಧಿ ಮಾಡಿದ್ದು, ಒಂದು ನಾಯಿಯ ಹುಟ್ಟು ಹಬ್ಬಕ್ಕೆ ಇಷ್ಟೊಂದು ಹಣ ಖರ್ಚು ಮಾಡುವ ಅವಶ್ಯಕತೆ ಇತ್ತಾ ಅನ್ನೋ ಪ್ರಶ್ನೆ ಹಲವರನ್ನ ಕಾಡೋದಕ್ಕೆ ಶುರುವಾಗಿದೆ. ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಚಾಂಗ್ಶಾದ ಮೇಲಿರುವ ಜಿಯಾಂಗ್ಜಿಯಾಂಗ್ ನದಿ ದಂಡೆಯಲ್ಲಿ ಈ ಸಂಭ್ರಮ ನಡೆದಿದ್ದು, ಡೌಡೌ ಅನ್ನೋ ಶ್ವಾನದ ಒಡತಿ ಅದ್ಧೂರಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇಲ್ಲಿ ವಿಚಿತ್ರ ಏನು ಅಂದ್ರೆ ಆಕೆ ಈ ಪ್ರದೇಶದಲ್ಲಿ ಶ್ವಾನದ ಹುಟ್ಟುಹಬ್ಬವನ್ನ ಆಚರಿಸೋದಕ್ಕೆ ಅನುಮತಿ ಪಡೆದಿದ್ದ ಆಕೆ ಚೀನಾದ ಕೆಲ ನಿಯಮಗಳನ್ನ ಕೂಡ ಮುರಿದಿದ್ದಾಳಂತೆ ಇದೀಗ, ಎಲ್ಲೇಡೆ ಸಾಕಷ್ಟು ಸುದ್ಧಿ ಮಾಡ್ತಾ ಇದ್ದು, ಈ ಬಗ್ಗೆ ಅಲ್ಲಿನ ಸ್ಥಳೀಯರು ಕೂಡ ಆಕ್ರೋಶವನ್ನ ವ್ಯಕ್ತ ಪಡಿಸುತ್ತಿದ್ದಾರೆ.
ಅದ್ದೂರಿಯಾಗಿ ಈಕೆ ತನ್ನ ಶ್ವಾನದ ಹುಟ್ಟು ಹಬ್ಬವನ್ನ ಆಚರಿಸಿರುವ ಈಕೆ ಸುಮಾರು 520 ಡ್ರೋನ್ಗಳನ್ನ ಬಾಡಿಗೆಗೆ ಪಡೆದಿದ್ದಳು, ಆದ್ರೆ ಇದಕ್ಕೆ ಅಲ್ಲಿನ ಸ್ಥಳೀಯ ಪೊಲೀಸರು ಅನುಮತಿ ನೀಡದ ಕಾರಣ ಕಾನೂನು ಬಾಹಿರವಾಗಿ ಡ್ರೋನ್ಗಳನ್ನ ಬಾಡಿಗೆಗೆ ಪಡೆದುಕೊಂಡಿದ್ದಾಳೆ, ಬಳಿಕ ನಾಗರಿಕ ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ಡ್ರೋನ್ ಗಳನ್ನು ಹಾರಿಸಿದ್ದಾಳೆ, ತನ್ನ ನಾಯಿಗಾಗಿ ಬೆಳಕಿನ ಪ್ರದರ್ಶನವನ್ನ ಕೂಡ ಈಕೆ ನೀಡಿದ್ದಾಳೆ. ಆದರೆ ಇದೀಗ ಈಕೆ ಈ ಸಂಭ್ರಕ್ಕೆ ಸರಿಯಾಗಿ ಬಿಸಿ ಮುಟ್ಟಿಸಿರುವ ಅಲ್ಲಿನ ಪೊಲೀಸರು ಭದ್ರತಾ ಲೋಪವನ್ನ ಎಸಗಿದ್ದಕ್ಕಾಗಿ ಆಕೆಯನ್ನ ಬಂಧಿಸಲು ಅಲ್ಲಿನ ಪೊಲೀಸರು ಮುಂದಾಗಿದ್ದಾರೆ.
ಒಟ್ಟಾರೆಯಾಗಿ ಶ್ವಾನದ ಹುಟ್ಟುಹಬ್ಬಕ್ಕಾಗಿ 11 ಲಕ್ಷ ಖರ್ಷು ಮಾಡಿದವಳು ಇದೀಗ ಜೈಲು ಸೇರಲು ಹೊರಟಿದ್ದಾಳೆ. ಸದ್ಯಕ್ಕೆ ಈ ಪ್ರಕರಣ ಚೀನಾದಾದ್ಯಂತ ಸಾಕಷ್ಟು ಸುದ್ಧಿ ಮಾಡ್ತಾ ಇದ್ದು, ಈ ಬಗ್ಗೆ ಅಲ್ಲಿನ ನ್ಯಾಯಾಲಯ ಯಾವ ರೀತಿಯಾದ ತೀರ್ಮಾನವನ್ನ ತೆಗೆದುಕೊಳ್ಳಲಿದೆ ಅಂತ ಕಾದು ನೋಡಬೇಕಾಗಿದೆ.
ಲಿಖಿತ್ ರೈ , ಪವರ್ ಟಿವಿ