Sunday, January 19, 2025

ಡಿಕೆಶಿ ಜೊತೆ ಕುಸ್ತಿ ಮಾಡಲ್ಲ: ಸಚಿವ ಆರಗ ಜ್ಞಾನೇಂದ್ರ

ರಾಜ್ಯ : ಪಾದಯಾತ್ರೆ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಸವಾಲ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ  ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಬೀದಿಯಲ್ಲಿ ಹೋಗಿ ಅವರ ಜತೆ ಕುಸ್ತಿ ಮಾಡಲು ಆಗಲ್ಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಅವರು ವಯಸ್ಸಲ್ಲಿ ನನಗಿಂತ ಕಿರಿಯ. ಅವರಿಂದ ಅಂತಹ ಮಾತು ನಿರೀಕ್ಷಿಸಿರಲಿಲ್ಲ. ಶಿವಕುಮಾರ್ ಬಹಳ ಲಘುವಾಗಿ ಮಾತನಾಡುತ್ತಾರೆ. ಯಾರನ್ನೋ ನಿಲ್ಲಿಸಬೇಕು, ತಡೆಗಟ್ಟಬೇಕೆಂಬ ಉದ್ದೇಶ ನಮಗಿಲ್ಲ. ಸರ್ಕಾರ ನಡೆಸಿದ ಅನುಭವಸ್ಥರು ಈಗ ಪಾದಯಾತ್ರೆ ಕೈಬಿಡಲಿ.

ಕಾಂಗ್ರೆಸ್​​ನವರು ಬೇಜವಾಬ್ದಾರಿಯ ವರ್ತನೆ ಮಾಡಬಾರದು ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು. ಇನ್ನು ರಾಜ್ಯದಲ್ಲಿ ಕೊರೊನಾ ಎಫೆಕ್ಟ್ ಏನಾಗುತ್ತಿದೆ ಅಂತಾ ತಾಳ್ಮೆಯಿಂದ ಯೋಚನೆ ಮಾಡಲಿ. ಹಿಂದೆ ಕೃಷ್ಣೆಯ ಕಡೆಗೆ ನಡಿಗೆ ಅಂತಾ ಹೇಳಿ ಅಲ್ಲಿನ ಜನರಿಗೆ ವಂಚನೆ ಮಾಡಿದರು. ಇದು ರಾಜಕೀಯ ನಡಿಗೆ. ಕಾನೂನು, ಕಾಯ್ದೆಗಳು ಅದರ ದಾರಿ ಹಿಡಿಯುತ್ತವೆ ಅಷ್ಟೇ ಎಂದರು.

RELATED ARTICLES

Related Articles

TRENDING ARTICLES