Monday, December 23, 2024

ಪಂಚರಾಜ್ಯ ಚುನಾವಣೆ; ಸಂಪೂರ್ಣ ವಿವರ ನೀಡಿದ ಚುನಾವಣಾ ಆಯೋಗ

ನವದೆಹಲಿ: ಭಾರತೀಯ ಚುನಾವಣಾ ಆಯೋಗ ಪಂಚರಾಜ್ಯ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳ ವಿಧಾನಸಭೆ ಚುನಾಣೆಯ ದಿನಾಂಕ ಘೋಷಣೆ ಮಾಡಲಾಗಿದೆ. ಚುನಾವಣೆ ಕುರಿತು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಟಿ ನಡೆಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್​​​ ಚಂದ್ರ ಐದು ರಾಜ್ಯಗಳಲ್ಲಿ ನಡೆಯುವ ಚುನಾವಣೆ ದಿನಾಂಕವನ್ನ ಘೋಷಣೆ ಮಾಡಿದ್ದಾರೆ.

ಐದು ರಾಜ್ಯಗಳಿಂದ 690 ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, 18.34 ಕೋಟಿ ಮತದಾರರು ಐದು ರಾಜ್ಯಗಳಲ್ಲಿ ಮತದಾನ ಮಾಡಲಿದ್ದಾರೆ. ಅಲ್ಲದೆ ಈ ಬಾರಿ 29.4 ಲಕ್ಷ ಹೊಸ ಮತದಾರರಿಂದ ವೋಟಿಂಗ್​ ಮಾಡಲಿದ್ದಾರೆ. ಐದು ರಾಜ್ಯಗಳಲ್ಲಿ ಒಟ್ಟು 1,15,368 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ.

ಐದು ರಾಜ್ಯಗಳಲ್ಲಿ ಚುನಾವಣೆ ನಡೆಸಲು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಕೊರೋನಾ 3ನೇ ಅಲೆ ಭೀತಿ ಹೆಚ್ಚಾಗಿರೋದ್ರಿಂದ ಒಂದು ಕಡೆ ಭಯದ ವಾತಾವರಣ ನಿರ್ಮಾಣವಾಗಿತ್ತು ಈ ಚುನಾವಣೆ ನಡೆಸೋದು ಸವಾಲಿನ ಕೆಲಸವಾಗಿದೆ. ಆದರೆ ಚುನಾವಣೆ ನಡೆಸೋದು ನಮ್ಮ ಕರ್ತವ್ಯ ಕೂಡ ಆಗಿದೆ. ಆದ್ದರಿಂದ ಕೋವಿಡ್​ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಚುನಾವಣೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಎಲ್ಲ ಮತಗಟ್ಟೆಗಳಲ್ಲಿ ಥರ್ಮಲ್​ ಸ್ಕ್ರೀನಿಂಗ್, ಮಾಸ್ಕ್​, ಸ್ಯಾನಿಟೈಸರ್​ಗಳ ಬಳಕೆ ಕಡ್ಡಾಯವಾಗಿ ಮಾಡಬೇಕು. ಎಲ್ಲ ರಾಜ್ಯಗಳಲ್ಲಿ ಕೊರೊನಾ ಸೋಂಕಿತರಿಗೆ ಪೋಸ್ಟಲ್​​ ವ್ಯವಸ್ಥೆ ಮಾಡಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ. ಜೊತೆಗೆ ಎಲ್ಲ ರಾಜ್ಯಗಳಲ್ಲಿ ಕೊರೊನಾ ಸೋಂಕಿತರಿಗೆ ಪೋಸ್ಟಲ್​​ ವ್ಯವಸ್ಥೆ ಮಾಡಲಾಗಿದೆ. ಮತದಾನದ ಅವಧಿ 1 ಗಂಟೆ ಏರಿಕೆ ಮಾಡಿದೆ ಕೇಂದ್ರ ಚುನಾವಣಾ. ಆಯೋಗ.

ಅಭ್ಯರ್ಥಿಗಳು ಆನ್​ಲೈನ್​ ಮೂಲಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಅಭ್ಯರ್ಥಿಗಳು ತಮ್ಮ ಕ್ರಿಮಿನಲ್​ ಮಾಹಿತಿಯನ್ನ ಕಡ್ಡಾಯವಾಗಿ ನೀಡಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸದಂತೆ ಸೂಚನೆ ನೀಡಿದೆ.

ಐದು ರಾಜ್ಯಗಳಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

3 ರಾಜ್ಯಗಳಲ್ಲಿ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಫೆ.14ಕ್ಕೆ ಪಂಜಾಬ್, ಗೋವಾ, ಉತ್ತರಾಖಂಡ್‌ನಲ್ಲಿ ಮತದಾನ ನಡೆಯಲಿದೆ. 3 ರಾಜ್ಯಗಳಲ್ಲಿ ಫೆ. 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆ.14ರಂದು ಪಂಜಾಬ್‌ನ 117 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಗೋವಾದ 40 ಕ್ಷೇತ್ರಗಳಿಗೆ ಮತದಾನ, ಉತ್ತರಾಖಂಡ್‌ನ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟಣೆಗೊಳ್ಳಲಿದೆ.

ಉತ್ತರ ಪ್ರದೇಶದ 403 ಕ್ಷೇತ್ರಗಳಿಗೆ 7ಹಂತದಲ್ಲಿ ಮತದಾನ ನಡೆಯಲಿದೆ.

ಫೆ.10ರಂದು ಮೊದಲ ಹಂತದ ಮತದಾನ

ಫೆ.14ರಂದು 2ನೇ ಹಂತದ ಮತದಾನ

ಫೆ.20ರಂದು 3ನೇ ಹಂತದ ಮತದಾನ

ಫೆ.23ರಂದು 4ನೇ ಹಂತದ ಮತದಾನ

ಫೆ.27ರಂದು 5ನೇ ಹಂತದ ಮತದಾನ

ಮಾರ್ಚ್ 3ರಂದು 6ನೇ ಹಂತದ ಮತದಾನ

ಮಾರ್ಚ್ 7ರಂದು 7ನೇ ಹಂತದ ಮತದಾನ

ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ.

ಮಣಿಪುರದ 60 ಕ್ಷೇತ್ರಗಳಿಗೆ 2 ಹಂತದಲ್ಲಿ ಮತದಾನ ನಡೆಯಲಿದೆ.

ಫೆ.27ರಂದು ಮೊದಲ ಹಂತದ ಮತದಾನ

ಮಾರ್ಚ್ 3ರಂದು 2ನೇ ಹಂತದ ಮತದಾನ

ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ.

ಎಲ್ಲ ಮತಕ್ಷೇತ್ರಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್​​ ಬಳಕೆ ಮಾಡಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.  ಈ ಬಾರಿ ಅತಿ ಹೆಚ್ಚಿನ ಸಿಬ್ಬಂದಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಚುನಾವಣಾ ಸಿಬ್ಬಂದಿಗೆ ಎರಡು ಡೋಸ್ ಕೋವಿಡ್ ಲಸಿಕೆ ಕಡ್ಡಾಯ, ಅಗತ್ಯವಿದ್ದಲ್ಲಿ ಬೂಸ್ಟರ್​ ವ್ಯಾಕ್ಸಿನ್​​ ನೀಡಬಹುದು ಎಂದು ಹೇಳಿದೆ. ಚುನಾವಣಾ ಸಿಬ್ಬಂದಿ ಕೋವಿಡ್​​ ಫ್ರಂಟ್​ಲೈನ್​ ವಾರಿಯರ್ಸ್​​ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಅಲ್ಲದೆ ಐಎಎಸ್, ಐಪಿಎಸ್​ ಹಾಗೂ ಐಎಫ್​ಎಸ್​ ಅಧಿಕಾರಿಗಳು ಚುನಾವಣಾ ಅಧಿಕಾರಿಗಳಾಗಿ ನಿಯೋಜನೆ ಮಾಡಲಾಗಿದೆ. ಚುನಾವಣೆ ಡ್ಯೂಟಿ ಮಾಡುವ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೋವಿಡ್​ನ ಎರಡು ಡೋಸ್​ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ವಿಶೇಷವಾಗಿ ಮಣಿಪುರದಲ್ಲಿ ಪ್ರತಿ ಅಭ್ಯರ್ಥಿ ಚುನಾವಣಾ ವೆಚ್ಚಕ್ಕಾಗಿ 28 ಲಕ್ಷ ರೂ. ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್​ನಲ್ಲಿ ₹40 ಲಕ್ಷಕ್ಕೆ ವೆಚ್ಚವನ್ನ ನಿಗದಿಗೊಳಿಸಲಾಗಿದೆ. ಅಲ್ಲದೆ ಈ ಬಾರಿ ಅಭ್ಯರ್ಥಿಗಳ ಎಲೆಕ್ಷನ್​ ಖರ್ಚಿನಲ್ಲಿ ಏರಿಕೆ ಮಾಡಲಾಗಿದೆ.

ಐದು ರಾಜ್ಯಗಳಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ರಾಜಕೀಯ ಪಕ್ಷಗಳು ವರ್ಚುವಲ್ ರ್ಯಾಲಿ ಮಾಡಲು ಆದ್ಯತೆ ನೀಡಿದೆ ಚುನಾವಣಾ ಆಯೋಗ ಹೇಳಿದೆ. ಯಾವುದೇ ರೀತಿಯ ಪಾದಯಾತ್ರೆ, ಚುನಾವಣಾ ಸಭೆ, ರೋಡ್​ ಶೋಗಳಿಗೆ ಅವಕಾಶವಿಲ್ಲ,ಸಾರ್ವಜನಿಕ ಸಭೆಗಳಿಗೆ ಜನವರಿ 15ರವರೆಗೆ ನಿರ್ಬಂಧ ಹೇರಲಾಗಿದೆ. ಅಭ್ಯರ್ಥಿ ಗೆದ್ದ ಬಳಿಕ ಸಾರ್ವಜನಿಕ ಸಂಭ್ರಮಾಚರಣೆ ಮಾಡುವಂತಿಲ್ಲ. ಮನೆ ಮನೆ ಪ್ರಚಾರಕ್ಕೆ ಐವರು ಮಾತ್ರ ತೆರಳಲು ಅವಕಾಶ ಕಲ್ಲಿಸಿಕೊಡಲಾಗಿದೆ. ರಾತ್ರಿ 8 ಗಂಟೆ ನಂತರ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಯಾವುದೇ ಕಾರಣಕ್ಕೂ ದ್ವೇಷದ ಭಾಷಣ ಮಾಡುವಂತಿಲ್ಲ ಎಂದು ಸೂಚಿಸಿದೆ.

R.ರಮ್ಯ, ಪವರ್ ಟಿವಿ

RELATED ARTICLES

Related Articles

TRENDING ARTICLES