Wednesday, January 22, 2025

‘ಬೈರಾಗಿ’ ಸ್ಟೈಲಿಶ್ ಲುಕ್​ಗೆ ದಂಗಾದ ಫ್ಯಾನ್ಸ್..!

ಬೆಂಗಳೂರು : ಟಗರು ಫ್ಲೇವರ್​ನಲ್ಲಿ ಶಿವಣ್ಣ- ಡಾಲಿ ಮತ್ತೊಂದು ಆ್ಯಕ್ಷನ್ ಪ್ಯಾಕ್ಡ್ ಮಾಸ್ ಮಸಾಲ ಎಂಟರ್​ಟೈನರ್​ನ ಉಣಬಡಿಸೋಕೆ ಸಜ್ಜಾಗಿದ್ದಾರೆ. ಸೈಲೆಂಟ್ ಆಗಿ ಶೂಟಿಂಗ್ ಶುರುವಿಟ್ಟ ಆ ಚಿತ್ರ, ಸದ್ಯ ಪ್ಯಾಕಪ್ ಮಾಡೋ ಹಂತ ತಲುಪಿದೆ. ಈ ನಡುವೆ ಶಿವಣ್ಣನ ಸ್ಟೈಲಿಶ್ ಲುಕ್ ರಿವೀಲ್ ಆಗಿದ್ದು, ಟಾಕ್ ಆಫ್ ದ ಟೌನ್ ಆಗಿದೆ.

ಭಜರಂಗಿ 2 ಚಿತ್ರ ಥಿಯೇಟರ್ ಹಾಗೂ ಒಟಿಟಿಯಲ್ಲಿ ಧೂಳೆಬ್ಬಿಸಿದ ಬಳಿಕ ಶಿವಣ್ಣ ಬಣ್ಣ ಹಚ್ಚಿದ ಸಿನಿಮಾ ಬೈರಾಗಿ. ಟಗರು ಫೇಮ್ ಶಿವಣ್ಣ- ಡಾಲಿ ಜೋಡಿ ಮಗದೊಮ್ಮೆ ಹಲ್​ಚಲ್ ಎಬ್ಬಿಸಲಿರೋ ಬೈರಾಗಿ, ಟೈಟಲ್​ನಷ್ಟೇ ಪವರ್​ಫುಲ್ ಮಾಸ್ ಕಂಟೆಂಟ್​ನಿಂದ ನಿರೀಕ್ಷೆಯ ಬೆಟ್ಟ ಹೊರಿಸಿದೆ.

ಖ್ಯಾತ ತಮಿಳು ಸಿನಿಮಾಟೋಗ್ರಫರ್ ವಿಜಯ್ ಮಿಲ್ಟನ್ ಡೈರೆಕ್ಷನ್​ನಲ್ಲಿ ತಯಾರಾಗ್ತಿರೋ ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹಾಕಿದ್ದಾರೆ. ಶಿವಣ್ಣ ಮತ್ತು ಧನಂಜಯ್ ಟೀಸರ್​ಗಳು ಈಗಾಗ್ಲೇ ಹುಬ್ಬೇರಿಸ್ತಿದ್ದು, ಆ ಪಾತ್ರಗಳ ಗತ್ತು, ಗಮ್ಮತ್ತು ನೋಡುಗರಿಗೆ ಸಖತ್ ಥ್ರಿಲ್ ನೀಡಿವೆ. ಅಂದಹಾಗೆ ಈ ವಾರಾಂತ್ಯಕ್ಕೆ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಲಿದೆಯಂತೆ.

ಶಿವಣ್ಣ- ಡಾಲಿ ಜೊತೆ ದಿಯಾ ಫೇಮ್ ಪೃಥ್ವಿ ಅಂಬರ್, ಅಂಜಲಿ ಸೇರಿದಂತೆ ಸಾಕಷ್ಟು ದೊಡ್ಡ ತಾರಾಗಣವಿದೆ. ಅನೂಪ್ ಸೀಳಿನ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ವಿಜಯ್​ಗೆ ಇದು ಚೊಚ್ಚಲ ಕನ್ನಡ ಡೈರೆಕ್ಷನ್ ಸಿನಿಮಾ. ಈ ಹಿಂದೆ ಅಟ್ಟಹಾಸ ಹಾಗೂ ಪೊಗರು ಚಿತ್ರಗಳಿಗೆ ಸಿನಿಮಾಟೋಗ್ರಫಿ ಮಾಡಿದರು.ಲ
ಶಿವಣ್ಣನ ಸ್ಟೈಲಿಶ್ ಬೈರಾಗಿ ಲುಕ್ ರಿವೀಲ್ ಆಗಿದ್ದು, ಕ್ಯಾರವಾನ್​ನಲ್ಲಿ ಕ್ಯಾಮೆರಾಗೆ ಪೋಸ್ ನೀಡ್ತಿರೋ ಒಂದು ಸ್ಟಿಲ್ ಫೋಟೋ ಬೇಜಾನ್ ಸದ್ದು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಲುಕ್ ಬಗ್ಗೆ ಚರ್ಚೆ ಆಗ್ತಿದೆ. ಅದ್ರಲ್ಲೂ ಶಿವಣ್ಣ ಫ್ಯಾನ್ಸ್​ಗೆ ಈ ಸ್ಟೈಲಿಶ್ ಲುಕ್ ಇಂಪ್ರೆಸ್ಸೀವ್ ಅನಿಸಿದ್ದು, ಎಲ್ಲಾ ಫ್ಯಾನ್ಸ್ ಪೇಜ್​ಗಳಲ್ಲಿ ರಾರಾಜಿಸ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES