Friday, March 29, 2024

2021 – 2022 ನೇ ಸಾಲಿನ ಎಸ್​ಎಸ್​ಎಲ್​ಸಿ ವೇಳಾಪಟ್ಟಿ ಪ್ರಕಟ

ಬೆಂಗಳೂರು : 2021-2022 ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರ ಪ್ರಕಟಿಸಿದೆ.

ಜನವರಿ 14ರೊಳಗೆ ಪೋಷಕರಿಗೆ ಅಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಮಾರ್ಚ್​ 28ರಂದು ಪ್ರಥಮ ಭಾಷೆ, ಮಾರ್ಚ್​ 30ರಂದು ದ್ವಿತೀಯ ಭಾಷೆ, ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್ , ಏಪ್ರಿಲ್ 4 ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 6 ತೃತೀಯ ಭಾಷೆ , ಏಪ್ರಿಲ್ 11 ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ಹಿಂದೂಸ್ತಾನಿ ಸಂಗೀತದ ಪರೀಕ್ಷೆಗಳು ನಡೆಯಲಿವೆ.

ಬೆಳ್ಳಿಗ್ಗೆ 10:30ರಿಂದ ಮಧ್ಯಾಹ್ನ 1:45ರವರೆಗೆ ಪರೀಕ್ಷೆಗಳು ನಡೆಯಲಿವೆ.ಪ್ರತೀ ವಿಷಯಗಳಿಗೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗುವುದು ಎಂದು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

RELATED ARTICLES

Related Articles

TRENDING ARTICLES