Sunday, January 19, 2025

ಬ್ರೋ ವಾಟ್ ಅಬೌಟ್​ ವೀಕೆಂಡ್​ ಪ್ಲ್ಯಾನ್ಸ್..?

ರಾಜ್ಯಕ್ಕೆ ಮೂರನೇ ಅಲೆ ಅಪ್ಪಳಿಸ್ತಿದ್ದಂತೆ ಸರ್ಕಾರ ಮತ್ತಷ್ಟು ಕಠಿಣಾತಿ ಕಠಿಣ ರೂಲ್ಸ್​ ಜಾರಿಗೆ ತರ್ತಿದೆ. ಹೆಮ್ಮಾರಿಯ ಆರ್ಭಟಕ್ಕೆ ಬ್ರೇಕ್​ ಹಾಕಲು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಹೀಗಾಗಿ ಈ ಬಾರಿ ಯಾರೂ ಬ್ರೋ ವಾಟ್ ಅಬೌಟ್​ ವೀಕೆಂಡ್​ ಪ್ಲ್ಯಾನ್ಸ್​ ಅನ್ನೋ ಹಾಗೇ ಇಲ್ಲ.. ಅಲ್ಲಿಗೆ ​ ಹೋಗ್ಬೇಕು ಇಲ್ಲಿಗೆ​ ಹೋಗ್ಬೇಕಂತ ಪ್ಲ್ಯಾನ್ ಮಾಡಿದವ್ರಿಗೆ ಶಾಕ್ ಎದುರಾಗಲಿದೆ

ಎರಡನೇ ಅಲೆಯಲ್ಲಿ ಜಾರಿಯಾಗಿದ್ದ ವೀಕೆಂಡ್ ಕರ್ಫ್ಯೂ ಮತ್ತೆ ಅನುಷ್ಠಾನಕ್ಕೆ ಬರ್ತಿದೆ. ರಾಜ್ಯದಲ್ಲಿ ಮೂರನೇ ಅಲೆ ಓಟಕ್ಕಿಳಿದಿರೋ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ವೀಕೆಂಡ್ ಕರ್ಫ್ಯೂ ಅಸ್ತ್ರ್ರ ಪ್ರಯೋಗಿಸಿದೆ. ಆದ್ರೆ, ಈ ಬಾರಿಯ ವೀಕೆಂಡ್ ಕರ್ಫ್ಯೂನಲ್ಲಿ ಜನಸಾಮಾನ್ಯರ ಓಡಾಟಕ್ಕೆ ಕಂಪ್ಲೀಟ್ ಬ್ರೇಕ್ ಹಾಕೋಕೆ ಸರ್ಕಾರ ನಿರ್ಧರಿಸಿದ್ರೂ ಅನಿವಾರ್ಯ ಸ್ಥಿತಿಯಲ್ಲಿ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ವೀಕೆಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಸಂಚಾರ ಸ್ಥಗಿತಗೊಳಿಸಲು ನಿಗಮ ತೀರ್ಮಾನಿಸಿದೆ. ಹೀಗಾಗಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ನಗರದಲ್ಲಿ ಬಿಎಂಟಿಸಿ ಸಂಚಾರ ಸ್ತಬ್ಧವಾಗಲಿದೆ.

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ವೇಳೆಯೂ ಮೆಟ್ರೋ ಸಂಚಾರ ನಡೆಯುತ್ತಿದೆ. ಹೀಗಾಗಿ ಬೆಂಗಳೂರಲ್ಲೂ ದೆಹಲಿ ಮಾದರಿಯನ್ನೇ ಅನುಸರಿಸಲು ತೀರ್ಮಾನಿಸಲಾಗಿದೆ.ದಿನನಿತ್ಯದ ಅಗತ್ಯ ಸೇವೆಗಳನ್ನು ಒದಗಿಸುವವರ ಸಂಚಾರ ಸುಗಮಗೊಳಿಸಲು ಸಿಲಿಕಾನ್​ ಸಿಟಿಯಲ್ಲಿ ಮೆಟ್ರೋ ಸೇವೆ ಇರಲಿದೆ. ಆದ್ರೆ ಶನಿವಾರ ಹಾಗೂ ಭಾನುವಾರ ನಗರದಲ್ಲಿ ಮೆಟ್ರೋ ಓಡಾಟದ ಅಂತರ ಹೆಚ್ಚಿಸಲಾಗಿದೆ. ಪ್ರತಿ ಅರ್ಧ ಗಂಟೆಗೆ ಒಂದರಂತೆ ಮೆಟ್ರೋ ಸಂಚರಿಸಲಿದೆ ಅನ್ನೋದನ್ನೂ BMRCL ಸ್ಪಷ್ಟಪಡಿಸಿದೆ.

ಇತ್ತ KSRTCಯೂ ವೀಕೆಂಡ್ ಕರ್ಫ್ಯೂ ವೇಳೆ ಸಂಚಾರ ನಡೆಸಲು ತೀರ್ಮಾನಿಸಿದೆ.ರಾಜಧಾನಿ ಬೆಂಗಳೂರು ಸೇರಿ ರಾಜ್ಯ ಹಾಗೂ ಅಂತಾರಾಜ್ಯ ಬಸ್ ಸೇವೆ ಎಂದಿನಂತೆ ಇರಲಿದೆ.ಪ್ರಯಾಣಿಕರಿಗೆ ತಕ್ಕಂತೆ ಸೇವೆ ಒದಗಿಸೋದಾಗಿ ಕೆಎಸ್​ಆರ್​​ಟಿಸಿ ಘೋಷಿಸಿದೆ.ಕೊವಿಡ್ ರೂಲ್ಸ್ ಫಾಲೋ ಮಾಡಿ ಕೆಎಸ್ಆರ್ಟಿಸಿ ಬಸ್ ಸಂಚಾರ ಇರಲಿದೆ.ಹೊರ ರಾಜ್ಯದ ಪ್ರಯಾಣಿಕರ ಮೇಲೆ ವಿಶೇಷ ನಿಗಾ ವಹಿಸೋದಾಗಿ ಕೆಎಸ್​ಆರ್​​ಟಿಸಿ ಸ್ಪಷ್ಟಪಡಿಸಿದೆ.

ಸದ್ಯ ವೀಕೆಂಡ್ ಕರ್ಫ್ಯೂ ವೇಳೆಯೂ ಮೆಟ್ರೋ ಕೆಎಸ್​ಆರ್​​ಟಿಸಿ ಸಂಚರಿಸಲಿದೆ.ಆದ್ರೆ,ಆಟೋ,ಕ್ಯಾಬ್ ಸಂಚಾರಕ್ಕೆ ಅವಕಾಶ ಇಲ್ಲ.ಹೀಗಾಗಿ ಜನರು KSRTC ಬಸ್​ನಲ್ಲಿ ಬಂದಿಳಿದ್ರೂ, ಮುಂದೆ ಹೋಗೋಕೆ ಬಿಎಂಟಿಸಿ ಬಸ್ಸೂ ಇಲ್ಲ.ಆಟೋ ಕ್ಯಾಬೂ ಸಿಗೋದಿಲ್ಲ.. ಹೀಗಾಗಿ ಜನ್ರು ತಮ್ಮ ಕೆಲ್ಸ ಎಷ್ಟು ಅನಿವಾರ್ಯ ಅನ್ನೋದನ್ನ ಅರಿತು ವೀಕೆಂಡ್ ಕರ್ಫ್ಯೂ ವೇಳೆ ಮನೆಯಿಂದ ಹೊರ ಬರುವುದು ಉತ್ತಮ.

RELATED ARTICLES

Related Articles

TRENDING ARTICLES