Friday, December 27, 2024

ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರೈತರ ವಿರೋಧ

ತುಮಕೂರು : ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರು ಗ್ರಾಮದ ಜನರು ಪಂಚಾಯಿತಿ ಎದುರು ರೈತರು ಪ್ರತಿಭಟನೆ ನಡೆಸಿದ್ದಾರೆ.

ಘಟತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಹೇಮಾವತಿ ನಾಲೆ, ಶಾಲೆ, ಹಾಸ್ಟೆಲ್ ಇದೆ ಹೀಗಾಗಿ ಈ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಬೇಡವೇ ಬೇಡ ಎಂದು ಮಧುರೆ ಗ್ರಾಮದ ರೈತರು ವಿರೋಧ ವ್ಯಕ್ತಪಡಿಸಿದ್ದು ನೂರಾರು ಜನ ರೈತರು ಮತ್ತು ಮಹಿಳೆಯರು ಪಂಚಾಯಿತಿ ಮುಂದೆ ಆಗಮಿಸಿ ಪ್ರತಿಭಟನೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಘಟಕ ಮಂಜೂರಾತಿಯಲ್ಲಿ ಪಿಡಿಓ ಕೈವಾಡವಿದೆ ಎಂದ ಗ್ರಾಮಸ್ಥರು ಆರೋಪಿಸಿದ್ದು ಈ ವೇಳೆ ಪಿಡಿಓ, ಗ್ರಾಮಸ್ಥರು, ಪೊಲೀಸರ ನಡುವೆ ಕೆಲ ಕಾಲ ವಾಗ್ಸಮರ ನಡೆದಿದ.

RELATED ARTICLES

Related Articles

TRENDING ARTICLES