Thursday, April 18, 2024

ಒಮಿಕ್ರಾನ್​​ಗಿಂತ ಹೆಚ್ಚು ಅಪಾಯಕಾರಿ ಈ ವೈರಸ್

ನವದೆಹಲಿ : ಒಮೈಕ್ರಾನ್ ರೂಪಾಂತರವು ಜಗತ್ತಿನಲ್ಲಿ ಮತ್ತೆ ಕೊರೊನಾ ಆತಂಕಕ್ಕೆ ಕಾರಣವಾಗಿದ್ದು, ಭಾರತದ ಅನೇಕ ರಾಜ್ಯಗಳಲ್ಲಿಯೂ ಒಮೈಕ್ರಾನ್​​ನಿಂದಾಗಿ, ಪ್ರಕರಣಗಳಲು ಬಹಳ ಹೆಚ್ಚಳವಾಗಿದೆ.

ಇದರ ನಡುವೆ, ಕೊರೊನಾ ಹೊಸ IHU ರೂಪಾಂತರವು ಫ್ರಾನ್ಸ್‌ನಲ್ಲಿ ಕಂಡುಬಂದಿದೆ. ಒಮೈಕ್ರಾನ್​​ಗಿಂತ ಹೆಚ್ಚು ರೂಪಾಂತರವಾಗಿದೆ ಈ ವೈರಸ್​​ . ಫ್ರಾನ್ಸ್‌ನಲ್ಲಿ 12 ಜನರು IHU ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆಂದು ಮಾಹಿತಿ ತಿಳಿದು ಬಂದಿದೆ.

ಫ್ರೆಂಚ್ ನಗರವಾದ ಮಾರ್ಸಿಲ್ಲೆಯಲ್ಲಿ ಕಂಡುಬಂದಿರುವ IHU ರೂಪಾಂತರದಿಂದ ಸೋಂಕಿಗೆ ಒಳಗಾದ 12 ಜನರು ನವೆಂಬರ್ ಮಧ್ಯದಲ್ಲಿ ಆಫ್ರಿಕನ್ ದೇಶವಾದ ಕ್ಯಾಮರೂನ್‌ನಿಂದ ವಾಪಸ್​ ಆಗಿದ್ದರು. ನಂತರ ವಿಮಾನ ನಿಲ್ದಾಣದಲ್ಲಿ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು, ಆಗ ಅವರ ರಿಪೋರ್ಟ್​ ಪಾಸಿಟಿವ್ ಎಂದು ಬಂದಿತು.

ಪರೀಕ್ಷೆಯಲ್ಲಿ ಧನಾತ್ಮಕ ಮತ್ತು ಆಫ್ರಿಕನ್ ದೇಶದಿಂದ ಹಿಂತಿರುಗಿದ ಕಾರಣ ಈ ಜನರನ್ನು ಮೊದಲು ಒಮೈಕ್ರಾನ್ ಶಂಕಿತರೆಂದು ಪರಿಗಣಿಸಲಾಗಿತ್ತು. ಈ ಎಲ್ಲಾ 12 ಜನರ ಮಾದರಿಗಳ ಜೀನೋಮ್ ಅನುಕ್ರಮವನ್ನು ಪರೀಕ್ಷೆ ಮಾಡಲಾಯಿತು.

RELATED ARTICLES

Related Articles

TRENDING ARTICLES