Wednesday, January 22, 2025

ಮಗ ಪ್ರೀತಿಸಿದ್ದಕ್ಕೆ ತಂದೆಗೆ ಉಗುರು ಕಿತ್ತು ಚಿತ್ರಹಿಂಸೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಅಪರಾಧ ಪ್ರಕರಣವೊಂದರಲ್ಲಿ ದರುಳರು ಮಗನ ಪ್ರೀತಿಗೆ ಅಪ್ಪನಿಗೆ ಶಿಕ್ಷೆ ಕೊಟ್ಟಿದ್ದಾರೆ. ಅದೂ ಅಂತಿಂಥ ಶಿಕ್ಷೆಯಲ್ಲ. ಅಪ್ಪನ ಉಗುರುಗಳನ್ನು ಕಿತ್ತಿ ವಿಕೃತಿಯನ್ನು  ಮೆರೆದಿದ್ದಾರೆ. ಹುಬ್ಬಳ್ಳಿಯ ನವನಗರದ ನಂದೀಶ್ವರ ನಿವಾಸಿ 53 ವರ್ಷದ ನೂರ್ ಅಹ್ಮದ್ ಬ್ಯಾಹಟ್ಟಿಯ ಮೇಲೆ ಈ ಅಮಾನುಷ ಹಲ್ಲೆಯನ್ನು ನಡೆಸಲಾಗಿದೆ.

ನೂರ್ ಅಹ್ಮದ್ ಪುತ್ರ ಸುಬಾನಿ ಬ್ಯಾಹಟ್ಟಿ ಮತ್ತು ಆತಿಯಾ ಕಿತ್ತೂರು ನಡುವೆ ಪ್ರೇಮಾಂಕುರವಾಗಿತ್ತು. ಕಲೆದ 5 ವರ್ಷಗಳಿಂದ ಸುಬಾನಿ ಮತ್ತು ಆತಿಯಾ ಪ್ರೀತಿಸುತ್ತಿದ್ದರು. ಕಳೆದ ಡಿಸೆಂಬರ್ 29ರಂದು ಮನೆ ಬಿಟ್ಟು ಈ ಜೋಡಿ ಪರಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಯುವತಿಯರ ಮನೆಯವರಿಂದ ಯುವಕನ ತಂದೆಯನ್ನು ದುರುಳರು ಕಿಡ್ನ್ಯಾಪ್ ಮಾಡಿ ಈ ನೀಚ ಕೃತ್ಯವನ್ನು ಎಸಗಿದ್ದಾರೆ ಎಂದು ವರದಿಯಾಗಿದೆ.

ಟಾಟಾಸುಮೋದಲ್ಲಿ ಅಪಹರಿಸಿ ಹುಬ್ಬಳ್ಳಿಯ ಹೊರವಲಯದ ಪ್ರದೇಶಕ್ಕೆ ಕರೆದೊಯ್ದು ಕಾಲಿನ ಉಗುರು ಕಿತ್ತು ಚಿತ್ರಹಿಂಸೆ ಮಾಡಲಾಗಿದೆ.  ಈ ಕುರಿತು ನವನಗರದ ಪೊಲೀಸ್ ಸ್ಟೇಷನ್ನಿನಲ್ಲಿ ದೂರು ದಾಖಲಾಗಿದೆ. ಪೊಲೀಸರು ಚಿತ್ರಹಿಂಸೆ ನೀಡಿದ್ದ 5ಜನರನ್ನು ಬಂಧಿಸಿದ್ದಾರೆ. ಇಬ್ರಾಹಿಂ ಖಾನ್ ಕಿತ್ತೂರ, ಇಲಿಯಾಸ್ ಕಿತ್ತೂರ, ಶಬ್ಬೀರ್ ಬೆಟಗೇರಿ, ಸಲ್ಮಾ ಕಿತ್ತೂರ ಮತ್ತು ಹೀನಾ ಕಿತ್ತೂರ ಬಂಧಿತ ಆರೋಪಿಗಳು.

RELATED ARTICLES

Related Articles

TRENDING ARTICLES