Saturday, June 10, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಕ್ರೈಂಹಿಟ್ ಅಂಡ್ ರನ್ ಮಾಡಿದ ಪೊಲೀಸ್

ಹಿಟ್ ಅಂಡ್ ರನ್ ಮಾಡಿದ ಪೊಲೀಸ್

ತ್ರಿಷೂರ್ (ಕೇರಳ): ಕೇರಳದ ತ್ರಿಷೂರ್​ನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಮಧ್ಯ ಸೇವಿಸಿ ಕಾರು ಓಡಿಸಿದ್ದಲ್ಲದೆ ಬೈಕ್​ಗೆ ಗುದ್ದಿ ಅಪಘಾತವನ್ನೂ ಸಹ ಮಾಡಿರುವ ಘಟನೆ ನಡೆದಿದೆ. ಸೋಮವಾರ ಮಧ್ಯರಾತ್ರಿಯವರೆಗೂ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಎಎಸ್​ಐ ಪ್ರಶಾಂತ್ ಸಖತ್ ಮಧ್ಯ ಸೇವಿಸಿ, ಕಾರಿನಲ್ಲಿ ಮರಳುತ್ತಿರುವಾಗ ಬೈಕ್​ಗೆ ಗುದ್ದಿ ಅಪಘಾತ ಮಾಡಿದ್ದಾರೆ.

ಕಾರ್ ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದ ಇಬ್ಬರಿಗೂ ಗಂಭೀರವಾದ ಗಾಯಗಳಾಗಿವೆ. ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತ ಭೀಕರವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದ ಎಎಸ್​ಐ ಅಪಘಾತವಾದರೂ ಕಾರು ನಿಲ್ಲಿಸಿಲ್ಲ. ಸುಮಾರು ಒಂದು ಕಿಲೋಮಿಟರ್ ನಂತರ ಚಾಲಕನ ನಿಯಂತ್ರಣ ಕಳೆದುಕೊಂಡ ನಂತರ ಕಾರು ನಿಂತಿದೆ. ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ನಂತರ ಪೊಲೀಸರು ಎಎಸ್​ಐ ಪ್ರಶಾಂತ್​ನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

Most Popular

Recent Comments