Wednesday, January 22, 2025

ವ್ಯಾಲಂಟೈನ್ಸ್ ಡೇಗೆ ಸೆಟ್ಟೇರ್ತಿದೆ ಪ್ರೇಮಂ ಪೂಜ್ಯಂ 2

ಪ್ರೇಮ್ ಕರಿಯರ್​ನ ದಿ ಬೆಸ್ಟ್ ಸಿನಿಮಾ ಅಂದರೆ ಪ್ರೇಮಂ ಪೂಜ್ಯಂ. ಹತ್ತು ಹಲವು ವಿಶೇಷತೆಗಳಿಂದ ಮಾಸ್ಟರ್​ಪೀಸ್ ಸಿನಿಮಾ ಆಗಿ ಇತಿಹಾಸದ ಪುಟಗಳು ಸೇರಿತು ಈ ಪ್ರೇಮದೃಶ್ಯಕಾವ್ಯ. ಇದೀಗ ಅದರ ಸೀಕ್ವೆಲ್ ಸೆಟ್ಟೇರೋ ಟೈಮ್ ಬಂದಾಗಿದೆ. ವ್ಯಾಲಂಟೈನ್ಸ್ ಡೇಗೆ ಬಿಗ್ ನ್ಯೂಸ್ ಕೊಡೋ ಧಾವಂತದಲ್ಲಿದೆ ಡಾಕ್ಟರ್ ಗೆಳೆಯರ ಬಳಗ.

ಮಾಡೋ ಕೆಲಸದ ಮೇಲೆ ಶ್ರದ್ಧೆ ಹಾಗೂ ನಿಷ್ಠೆ ಇದ್ದು, ಇಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಇಟ್ಟರೆ ಇತಿಹಾಸವೇ ಸೃಷ್ಟಿಸಬಹುದು ಅನ್ನೋದಕ್ಕೆ ಪ್ರೇಮಂ ಪೂಜ್ಯಂ ಟೀಂ ಉದಾಹರಣೆಗೆ ಸೆಟ್ ಮಾಡಿತು. ಸಿನಿಮಾದ ಗಾಳಿ ಗಂಧ ಗೊತ್ತಿಲ್ಲದ ವೈದ್ಯರ ತಂಡವೊಂದು, ದಶಕಗಳಿಂದ ಹಗಲಿರುಳು ಸಿನಿಮಾ ಪೂಜಿಸೋ ಅಂತಹ ಸಿನಿಮೋತ್ಸಾಹಿಗಳೇ ದಂಗಾಗೋ ರೇಂಜ್​ಗೆ ಸಿನಿಮಾ ಮಾಡಿ ಗೆದ್ದರು.

ಹೌದು, ಲವ್ಲಿಸ್ಟಾರ್ ಪ್ರೇಮ್​ರ 25ನೇ ಚಿತ್ರವನ್ನ ಬಹಳ ವಿಭಿನ್ನ ಹಾಗೂ ವಿಶೇಷವಾಗಿ ಮಾಡೋ ಮೂಲಕ ಪ್ರೇಮಂ ಪೂಜ್ಯಂ ದಾಖಲೆ ಬರೆಯುವಂತಾಯ್ತು. ಕಥೆ, ಚಿತ್ರಕಥೆ, ಪಾತ್ರಗಳ ಡಿಸೈನ್, ಮೇಕಿಂಗ್, ಸಂಗೀತ, ಲೊಕೇಷನ್ಸ್ ಹೀಗೆ ಎಲ್ಲವೂ ಕನ್ನಡ ಫಿಲ್ಮ್ ಮೇಕರ್ಸ್​ನ ಬಡಿದೆಬ್ಬಿಸುವಂತಿತ್ತು ಪ್ರೇಮಂ ಪೂಜ್ಯಂ.

ಕೆದಂಬಾಡಿ ಕ್ರಿಯೇಷನ್ಸ್ ಬ್ಯಾನರ್​ನಡಿ ಡಾ. ಬಿಎಸ್ ರಾಘವೇಂದ್ರ ಅನ್ನೋ ವೈದ್ಯರು ತಮ್ಮ ಇತರೇ ಡಾಕ್ಟರ್ ಸ್ನೇಹಿತರೊಂದಿಗೆ ಪ್ರೇಮದೃಶ್ಯಕಾವ್ಯ ಕಟ್ಟಿಕೊಟ್ಟರು. ಮಾಸ್ಟರ್ ಆನಂದ್​ಗೆ ಇದೊಂಥರಾ ಕಂಬ್ಯಾಕ್ ಚಿತ್ರವಾಯಿತು. ಬೃಂದಾ ಆಚಾರ್ಯ ಅನ್ನೋ ಅಪ್ಪಟ ಕನ್ನಡತಿ ಸ್ಯಾಂಡಲ್​ವುಡ್ ಏಂಜಲ್ ಆಗಿ ಇಂಡಿಸ್ಟ್ರಿಗೆ ಕಾಲಿರಿಸಿದರು. ಯಶಸ್ವೀ ಶತದಿನೋತ್ಸವದತ್ತ ಗೆಲುವಿನ ಓಟ ಮುಂದುವರೆಸಿರೋ ಈ ಚಿತ್ರ ಎಲ್ಲರ ಹಾರ್ಟ್​ಗೆ ಬಾಣ ಬಿಟ್ಟಿದೆ.

ಸದ್ಯ ಪ್ರೇಮಂ ಪೂಜ್ಯಂ 2 ಟಾಕ್ ಆಫ್ ದ ಟೌನ್ ಆಗಿದ್ದು, ಈ ಬಾರಿ ಹಿಟ್ ಚಿತ್ರದ ಸೀಕ್ವೆಲ್ ಕಂಪ್ಲೀಟ್ ಕಾಂಟ್ರಾಸ್ಟ್​ನಿಂದ ಕೂಡಿರಲಿದೆಯಂತೆ. ಫಸ್ಟ್ ಲುಕ್ ಕೂಡ ರಿವೀಲ್ ಆಗಿದ್ದು, ಪ್ರೇಮ್ ಮಾಸ್ ಖದರ್ ಇಮೇಜ್ ಕ್ರಿಯೇಟ್ ಮಾಡಿದೆ. ಮೂಲಗಳ ಪ್ರಕಾರ ಸಿನಿಮಾ ಇದೇ ಫೆಬ್ರವರಿ 14ರಂದು ವ್ಯಾಲಂಟೈನ್ಸ್ ಡೇ ಗೆ ಸೆಟ್ಟೇರಲಿದೆ.

ಥಿಯೇಟ್ರಿಕಲ್ ಡಿಸ್ಟ್ರಿಬ್ಯೂಷನ್ ರೈಟ್ಸ್, ಒಟಿಟಿ, ಟಿವಿ ರೈಟ್ಸ್, ಡಬ್ಬಿಂಗ್ ಹೀಗೆ ಎಲ್ಲಾ ಕಡೆಯಿಂದ ದಾಖಲೆ 25 ಕೋಟಿ ಬ್ಯುಸಿನೆಸ್ ಮಾಡಿದೆ ಪ್ರೇಮಂ ಪೂಜ್ಯಂ ಟೀಂ. ಇದೇ ಜನವರಿ 26ಕ್ಕೆ ಯಶಸ್ವೀ 75 ದಿನ ಪೂರೈಸಲಿದೆ ಪ್ರೇಮಂ ಪೂಜ್ಯಂ. ಆ ಸ್ಪೆಷಲ್ ಡೇ ಸೀಕ್ವೆಲ್ ಸಿನಿಮಾದ ಅನೌನ್ಸ್​ಮೆಂಟ್ ಜೊತೆ ಕಲೆಕ್ಷನ್ ರಿಪೋರ್ಟ್​ ನೀಡಲಿದೆಯಂತೆ ಟೀಂ.

ನವೀನ್ ಸಿನಿಮಾಟೋಗ್ರಫಿ, ಪ್ರೇಮ್​ರ ಲವ್ಲಿ ಹಾಗೂ ಲೈವ್ಲಿ ಪರ್ಫಾಮೆನ್ಸ್ ಜೊತೆ ಲುಕ್ಸ್ ಎಲ್ಲರ ಕಣ್ಮನ ತಣಿಸಿತ್ತು. ಇದೀಗ ಈ ತಂಡದಿಂದ ಮತ್ತೊಂದು ಪ್ರೇಮದೃಶ್ಯಕಾವ್ಯ ತಯಾರಾಗಲಿದೆ ಅನ್ನೋದು ನಿಜಕ್ಕೂ ಬಿಗ್ ನ್ಯೂಸ್. ಇದೆಲ್ಲವನ್ನ ಚಿತ್ರತಂಡ ಹಾಗೂ ಎಕ್ಸುಗ್ಯೂಟೀವ್ ಪ್ರೊಡ್ಯೂಸರ್ ಮಾಧವ್, ಅಫಿಶಿಯಲಿ ಅನೌನ್ಸ್ ಮಾಡೋವರೆಗೂ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES