Saturday, September 21, 2024

ಭಾರತದಲ್ಲಿ ಹೆಚ್ಚಿದ ನಿರುದ್ಯೋಗ ಪ್ರಮಾಣ-SMEC

ನವದೆಹಲಿ: ಭಾರತದಲ್ಲಿ ಕಳೆದ ನಾಲ್ಕು ತಿಂಗಳಿಂದ ನಿರುದ್ಯೋಗ ಪ್ರಮಾಣ ಅತಿ ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.  ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆ (SMEC) ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ ಕಳೆದ ಡೆಸೆಂಬರ್​ನಲ್ಲಿ ನಿರುದ್ಯೋಗದ ದರ ಶೇಕಡ 7.9ಕ್ಕೆ ತಲುಪಿದೆ.

ಭಾರತದಲ್ಲಿ ನವೆಂಬರ್​ನಲ್ಲಿ ಶೇ. 7.0 ಇದ್ದ ನಿರುದ್ಯೋಗ ಪ್ರಮಾಣ ಒಂದೇ ತಿಂಗಳಲ್ಲಿ 7.9 ಕ್ಕೆ ಜಿಗಿತ ಕಂಡಿದೆ. ಮುಂಬೈ ಮೂಲದ ಈ ಸಂಸ್ಥೆ ದೇಶದ ಉದ್ಯೋಗಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ನಿಯಮಿತವಾಗಿ ಬಿಡುಗಡೆ ಮಾಡುತ್ತ ಬಂದಿದೆ. ಇದು ಆರ್ಥಿಕ ತಜ್ಷರಿಗೆ ನಿರುದ್ಯೋಗದ ಅಂಕಿ ಅಂಶಗಳನ್ನು ವಿಶ್ಲೇಷಿಸಲು ಸಹಾಯ ಮಾಡುತ್ತಿದೆ.

RELATED ARTICLES

Related Articles

TRENDING ARTICLES