Monday, December 23, 2024

ಗಣಿ ಸಚಿವರ ಅಚ್ಚರಿ ಹೇಳಿಕೆ

ಕೊಪ್ಪಳ: ಕಡೆಗೂ ಕಲಿಯುಗದಲ್ಲಿ ಪವಾಡ ನಡೆದಿದೆ. ವಿರೋಧ ಪಕ್ಷದವರು ಮಾಡಿರುವ ಯಾವುದೇ ಒಳ್ಳೆಯ ಕೆಲಸ ಅದು ಎಷ್ಟೇ ಒಳ್ಳೆಯದಿರಲಿ ಹೊಗಳಲೇಬಾರದು, ಹೊರಗಳುವುದು ಹಾಗಿರಲಿ, ಅದರ ಬಗ್ಗೆ ಚಕಾರ ಎತ್ತಬಾರದು ಎಂಬ ಅಲಿಖಿತ ನಿಯಮದ ಮಧ್ಯೆ ಬಿಜೆಪಿ ಸಚಿವರೊಬ್ಬರು ವಿರೋಧ ಪಕ್ಷದ ನಾಯಕರನ್ನು ಹಾಡಿ ಹೊಗಳಿದ ಅದ್ಭುತ ಸಿಹಿ ಸುದ್ದಿ ಹೊರಬಿದ್ದಿದೆ.

ಬಿಜೆಪಿಯ ಗಣಿ ಸಚಿವ ಹಾಲಪ್ಪ ಆಚಾರ್​ರವರೆ ಈ ನಂಬಲಸಾಧ್ಯವಾದ ಕೆಲಸ ಮಾಡಿರುವುದು. ಹಾಲಪ್ಪ ಆಚಾರ್ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಆಡೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುವಾಗ ಹಿಂದೆ ವಿರೋಧ ಪಕ್ಷದ ಮುಖಂಡರು ಮಾಡಿದ ಸಹಾಯವನ್ನು ನೆನೆಸಿಕೊಂಡಿದ್ದಾರೆ.

ಕೆ.ಪಿ.ಸಿ.ಸಿ.ಅಧ್ಯಕ್ಷ ಡಿಕೆಶಿ  ಹಾಗೂ ಕುಮಾರಸ್ವಾಮಿಯನ್ನ ಹಾಡಿ ಹೊಗಳಿದ ಗಣಿ ಸಚಿವ ಹಾಲಪ್ಪ ಆಚಾರ್ ಅವರು ಸಮ್ಮಿಶ್ರ ಸರ್ಕಾರ ಇದ್ದಾಗ ಏತ ನೀರಾವರಿಗೆ ಕುಮಾರಸ್ವಾಮಿ ಹಾಗೂ ಡಿಕೆಶಿ ಹಣ ಕೊಟ್ಟಿದ್ದಾರೆ. ಸಹಾಯ ಮಾಡಿದವರನ್ನು ನಾವು ನೆನೆಸಬೇಕು, ಸಹಾಯ ಮಾಡಿದವರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ ಎಂದು ಹೇಳಿರುವುದು ನಿಜಕ್ಕೂ ಇಂದಿನ ದಿನಗಳಲ್ಲಿ ನಾವು ತೀರ ದುರ್ಲಭವಾಗಿ ಕಾಣುವ ಸುಂದರ ವ್ಯಕ್ತಿತ್ವವೆಂದೇ ಹೇಳಬಹುದು.

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES

Related Articles

TRENDING ARTICLES