Monday, December 23, 2024

777 ಚಾರ್ಲಿಯಲ್ಲಿ ರಕ್ಷಿತ್ ಶೆಟ್ಟಿ ಎಂಟ್ರಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ 777 ಚಾರ್ಲಿ ಸಿನಿಮಾ ಮೂಲಕ ಎಂಟ್ರಿ ಕೊಡ್ತಿರೋ ವಿಷ್ಯ ನಿಮಗೆಲ್ಲಾ ಗೊತ್ತೇ ಇದ್ಯಲ್ಲಾ. ಚಾರ್ಲಿಯ ಟಾರ್ಚರ್ ಸಾಂಗ್​ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ್ದ ಚಿತ್ರತಂಡ ಇದೀಗ ಮತ್ತೊಂದು ಸ್ಪೆಷಲ್ ಸಾಂಗ್​ನ ರಿವೀಲ್ ಮಾಡಿದೆ. ಆ ಸಾಂಗ್ ಸಖತ್ ವಿಭಿನ್ನವಾಗಿದೆ ಅನ್ನೋದು ಚಿತ್ರತಂಡದ ಅಂಬೋಣ.

ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ನಟ ರಕ್ಷಿತ್ ಶೆಟ್ಟಿ ಇದುವರೆಗೂ ಮತ್ತಿನ್ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಆ ಸಿನಿಮಾ ನಂತ್ರ ರಕ್ಷಿತ್ ನಟನೆಯಲ್ಲಿ ಮೂಡಿಬರ್ತಿರೋ ಸಿನಿಮಾ 777 ಚಾರ್ಲಿ. ಹೀಗಾಗಿ ಈ ಚಿತ್ರಕ್ಕಾಗಿ ಅವ್ರ ಫ್ಯಾನ್ಸ್ ಎಲ್ರೂ ಬಹಳ ಕಾತರದಿಂದ ಎದುರು ನೋಡ್ತಿದ್ದಾರೆ.

ಟೈಟಲ್ ಹಾಗೂ ಪೋಸ್ಟರ್ಸ್ ಮೂಲಕವೇ ಪ್ರೇಕ್ಷಕರ ಹುಬ್ಬೇರಿಸಿದ್ದ ಚಿತ್ರತಂಡ, ಆ ಬಳಿಕ ಟೀಸರ್ ರಿವೀಲ್ ಮಾಡೋ ಮೂಲಕ ಲೈಟಾಗಿ ಧರ್ಮನ ಲೈಫ್ ಸ್ಟೈಲ್ ಪರಿಚಯಿಸಿತ್ತು. ನಂತ್ರ ಬಂದ ಟಾರ್ಚರ್ ಸಾಂಗ್ ಚಾರ್ಲಿಯಿಂದಾಗಿ ಧರ್ಮ ಪಡುವ ಪರಿಪಾಟಲನ್ನು ತೋರಿಸಿತ್ತು. ಸದ್ಯ ಚಿತ್ರದ ಇನ್ನೊಂದು ವಿಭಿನ್ನ ಹಾಡು ರಿವೀಲ್ ಆಗಿದೆ.

ಇದು 777 ಚಾರ್ಲಿ ಸಿನಿಮಾದ ಮತ್ತೊಂದು ಹಾಡು. ವಿಶೇಷ ಅಂದ್ರೆ ಈ ಹಾಡು ಸಂಪೂರ್ಣವಾಗಿ ಕೊಂಕಣಿ ಭಾಷೆಯಲ್ಲೇ ಮೂಡಿಬಂದಿದೆ. ಸಿನಿಮಾದಲ್ಲಿ ನಾಯಕ ಧರ್ಮ ಹಾಗೂ ಆತನ ಜೊತೆಗಿರುವ ಚಾರ್ಲಿ ಅನ್ನೋ ಶ್ವಾನದ ನಡುವೆ ಒಂದು ಅವಿನಾಭಾವ ಬಾಂಧವ್ಯವಿದೆ. ಮೂಕ ಪ್ರಾಣಿಯೇ ಆದ್ರೂ ಚಾರ್ಲಿ, ನಾಯಕ ಧರ್ಮನ ಜೀವನದ ಒಂದು ಭಾಗವೇ ಆಗಿರುತ್ತೆ. ಈ ಅಂಶಗಳನ್ನೇ ಈ ಹಾಡಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ.

ಕೊಂಕಣಿ ಲಿರಿಸಿಸ್ಟ್​ ಸಯ್ಯೇಶ್ ಪೋಯ್ ಪನಂಡಿಕರ್​ ಈ ಹಾಡಿಗೆ ಅರ್ಥಪೂರ್ಣವಾಗಿ ಸಾಹಿತ್ಯ ಬರೆದಿದ್ರೆ, ನೊಬಿನ್ ಪೌಲ್ ಸೊಗಸಾಗಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಧಿತಿ ಎಸ್ ಲೊಟ್ಲಿಕರ್ ಕೊಂಕಣಿ ಭಾಷೆಯಲ್ಲಿ ಅದ್ಭುತವಾಗಿ ಹಾಡಿದ್ದಾರೆ. 777 ಚಾರ್ಲಿ ಚಿತ್ರದ ಈ ಸಾಂಗ್​ ಸದ್ಯ ಯೂಟ್ಯೂಬ್​ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡ್ಕೊಂಡಿದೆ.

ಚಿತ್ರಕ್ಕೆ ನಟ ರಕ್ಷಿತ್ ಶೆಟ್ಟಿ ಹಾಗೂ ಜಿ.ಎಸ್​ ಗುಪ್ತಾ ಬಂಡವಾಳ ಹೂಡಿದ್ದು, ಪರಮ್​ವಾ ಸ್ಟುಡಿಯೋಸ್​ ಬ್ಯಾನರ್​ನಲ್ಲಿ 777 ಚಾರ್ಲಿ ಸಿನಿಮಾ ನಿರ್ಮಾಣವಾಗಿದೆ. ಕಿರಣ್ ರಾಜ್ ಡೈರೆಕ್ಟ್ ಮಾಡಿರೋ ಈ ಚಿತ್ರ ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಪ್ಯಾನ್ ಇಂಡಿಯಾ ಚಿತ್ರವಾಗಿ ಸದ್ಯದಲ್ಲೇ ತೆರೆಗೆ ಬರಲಿದೆ.

ಚಂದನ.ಎಸ್​, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES