Wednesday, April 24, 2024

2022ರಲ್ಲೂ ಕೊರೋನಾ ಆತಂಕ

ಬೆಂಗಳೂರು : ದೇಶ ಹಾಗೂ ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕು ಭಾರಿ ಏರಿಕೆಯಾಗಿದ್ದು, ಮತ್ತೆ ಕೋವಿಡ್ ಅಬ್ಬರ ಹೆಚ್ಚಾಗುತ್ತಿದೆ. 2020, 2021,ಬಳಿಕ 2022 ಕ್ಕೂ ಕೊರೋನಾ ಆತಂಕ ತಟ್ಟಿದ್ದು, ರಾಜ್ಯದಲ್ಲಿ ನಿನ್ನೆ ಒಂದೇ ದಿನದಲ್ಲಿ 23 ಒಮೈಕ್ರಾನ್ ಕೇಸ್ ಪತ್ತೆಯಾಗಿದೆ.

ಇದರಿಂದ  ರಾಜ್ಯದಲ್ಲಿ ಒಟ್ಟು ಒಮೈಕ್ರಾನ್ ಕೇಸ್ 66 ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಶುಕ್ರವಾರ ಬರೋಬ್ಬರಿ 16,724 ಪಾಸಿಟಿವ್ ಕೇಸ್ ಪತ್ತೆಯಾಗಿತ್ತು. ಅಲ್ಲದೆ, ನಾಲ್ಕು ದಿನಗಳ ಹಿಂದೆ 200ರಷ್ಟಿದ್ದ ಸೋಂಕಿನ ಪ್ರಕರಣಗಳು ನಿನ್ನೆ 800ರ ಗಡಿ ದಾಟಿವೆ. ಒಟ್ಟು 832 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

64 ದಿನಗಳ ಬಳಿಕ ದಾಖಲಾದ ಗರಿಷ್ಠ ಸೋಂಕಿನ ಸಂಖ್ಯೆಯಾಗಿದೆ. ಕಳೆದೆರಡು ವರ್ಷ ಕೊರೋನಾದ ನಡುವೆಯೇ ಎಲ್ಲರ ಜೀವನ ಕಳೆದು ಹೋಗಿತ್ತು. ಇತ್ತ ಹೊಸ ವರ್ಷಕ್ಕೆ ಕೊರೋನಾ ಜತೆ ಒಮೈಕ್ರಾನ್ ಕೇಸ್​​​ಗಳ ಸಂಖ್ಯೆ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆಗೆ ಇದರಿಂದ  ಆತಂಕ ಹೆಚ್ಚಾಗಿದೆ.

RELATED ARTICLES

Related Articles

TRENDING ARTICLES