Thursday, March 28, 2024

ಪಾಕಿಸ್ತಾನದಲ್ಲಿ ಪತ್ತೆಯಾಯಿತು ಬೌದ್ಧ ದೇವಾಲಯ

ಬೌದ್ಧ ಮತ ಭಾರತದ ಅತಿ ಪುರಾತನ ಮತಗಳಲ್ಲಿ ಒಂದು, ಬುದ್ಧನ ಕಾಲದಲ್ಲಿ ಇದು ಮತವಾಗದೆ ಇದ್ದರೂ ಬುದ್ಧನ ಕಾಲಾನಂತರ ಬುದ್ಧನ ಶೀಷ್ಯ ವರ್ಗ ಬೌದ್ಧ ಮತವನ್ನ ಸ್ಥಾಪಸಿತ್ತು, ಇದಕ್ಕೆ ರಾಜ ಮಹಾರಾಜರು ಕೂಡ ಬೆಂಬಲವನ್ನ ನೀಡಿದರು, ಈ ಮತದ ಪ್ರಚಾರಕ್ಕಾಗಿ ಬುದ್ಧನ ಶಿಷ್ಯರು ಏಷ್ಯಾ ಸೇರಿದ ಹಾಗೆ ಹಲವು ದೇಶಗಳಲ್ಲಿ ಬೌಧ ಮತದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದರು ಅದಕ್ಕೆ ಪೂರಕ ಅನ್ನೋ ಹಾಗೆ ಹಲವು ದೇಶದ ಪ್ರಮುಖ ಸಾಮ್ರಾಜ್ಯಗಳು ಬೌಧ ಮತಕ್ಕೆ ರತಾಜಶ್ರಯವನ್ನ ಕೂಡ ನೀಡಿದ್ದವು. ಆದರೆ ಇಲ್ಲಿ ನಿಗೂಢ ಅನ್ನೀಸೋದು ಬುದ್ಧನ ಶಿಷ್ಯ ವರ್ಗ. ಬೌಧ ಮತದ ಪ್ರಚಾರದಲ್ಲಿ ಮಹತ್ತರವಾದ ಹೆಜ್ಜೆಯನ್ನ ಇಟ್ಟಿದ್ದು ಬುದ್ಧನ ಶಿಷ್ಯ ವರ್ಗ, ಈ ಶಿಷ್ಯ ವರ್ಗ ಸಾಕಷ್ಟು ನಿಗೂಢ ವಿದ್ಯಗಳನ್ನ ಕಲಿತದ್ದು ಮಾತ್ರವಲ್ಲದೆ. ಕೆಲ ಶಿಷ್ಯರು ಗುಹೆಗಳನ್ನೇ ತಮ್ಮ ಅವಾಸ ಸ್ಥಾನವಾಗಿ ಮಾಡಿಕೊಂಡರು.

ಇಲ್ಲಿ ತುಂಬಾ ಅಚ್ಚರಿಗೆ ಕಾರಣವಾಗೋದು ಅಂದರೆ. ಅದು ಈ ಬೌಧ ಸನ್ಯಾಸಿಗಳು ನಿರ್ಮಿಸುತ್ತಿದ್ದ ದೇವಾಲಯ ಹಾಗು ಗುಹೆಗಳು. ಇವತ್ತಿಗೂ ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲ ದೇಶಗಳಲ್ಲಿ ಹಲವು ಬೌದ್ಧ ದೇವಾಲಯಗಳು ಪತ್ತೆಯಾಗಿದೆ. ಈ ದೇವಾಲಯಗಳಿಗೆ ಸಾವಿರಾರು ವರ್ಷಗಳಷ್ಟು ಇತಿಹಾಸವನ್ನು ಹೊಂದಿದ್ದು, ಇಂದಿಗೂ ಕೂಡ ಈ ದೇವಾಲಯಗಳ ನಿರ್ಮಾಣ ಶೈಲಿ ಹಾಗು ಅಲ್ಲಿನ ವಿಗ್ರಹಗಳು ಹಲವು ಅಚ್ಚರಿಗೆ ಕಾರಣವಾಗಿದೆ. ಹೊರ ದೇಶಗಳು ಯಾಕೆ ನಮ್ಮ ದೇಶದ ಅಜಂತಾ-ಎಲ್ಲೋರ ಗುಹೆಗಳಲ್ಲಿನ ಬೌದ್ಧ ದೇವಾಲಯ ಕೂಡ ಸಾಕಷ್ಟು ಅಚ್ಚರಿಯನ್ನ ಮೂಡಿಸಿದೆ. ಈ ದೇವಾಲಯಗಳಲ್ಲಿನ ವಿಗ್ರಹಗಳು ಹಾಗು ಈ ಗುಹೆಗಳನ್ನ ಕೆತ್ತಲಾಗಿರುವ ಶೈಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾಕಂದರೆ ಈ ದೇವಾಲಯಗಳಲ್ಲಿ ವಿಗ್ರಹವನ್ನ ಗಮನಿಸಿದರೆ ಅವುಗಳನ್ನ ಸಾಮಾನ್ಯ ಮನುಷ್ಯರು ನಿರ್ಮಿಸಿದ ಹಾಗೆ ಕಾಣಿಸುತ್ತಿಲ್ಲ. ಅದರಲ್ಲೂ ಇವತ್ತಿನ ಅತ್ಯಾಧುನಿಕ ಯಂತ್ರವನ್ನ ಬಳಸಿದರು ಕೂಡ ಈ ರೀತಿ ನುಣುಪಾಗಿ ಹಾಗು ಒಂದು ಚೂರು ಲೋಪವಾಗದ ಹಾಗೆ ವಿಗ್ರಗಳನ್ನ ಕೆತ್ತೋದಕ್ಕೆ ಸಾಧ್ಯವಿಲ್ಲ ಅಂತ ಸಂಶೋಧಕರು ಹೇಳ್ತಾ ಇದ್ದಾರೆ. ಈಗ ಪಕ್ಕದ ಪಾಕಿಸ್ತಾನದಲ್ಲಿ ಸಿಕ್ಕಿರುವ ಬುದ್ಧನ ದೇವಾಲಯ ಕೂಡ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಪಾಕಿಸ್ತಾನದಲ್ಲಿ ಸುಮಾರು 2300 ವರ್ಷಗಳಷ್ಟು ಹಳೆಯದಾದ ಬುದ್ಧನ ದೇವಾಲಯ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಉಂಗುರ ಹಾಗು ನಾಣ್ಯದ ನಿಧಿ ಬೆಳಕಿಗೆ ಬಂದಿದೆ. ಇದು ಸ್ಥಳೀಯ ಜನರು ಹಾಗು ಸಂಶೋಧಕರ ಅಚ್ಚರಿಗೆ ಕಾರಣವಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ, ಸ್ವಾತ್ ಜಿಲ್ಲೆಯ ಬರಿಕೋಟೆ ತಹಸಿಲ್​ನ ಬಾಜಿರಾ ಪಟ್ಟಣದಲ್ಲಿ ಈ ಬುದ್ಧ ದೇವಾಲಯ ಕಂಡುಬಂದಿದೆ. ಈ ಪ್ರಾಂತ್ಯದಲ್ಲಿ ಈ ಹಿಂದಿನಿಂದಲೂ ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ಶಾಸ್ತ್ರಜ್ಞರು ಸಂಶೊಧನೆ ನಡೆಸುತ್ತಾ ಇದ್ದಾರೆ. ವಾಯುವ್ಯ ಪಾಕಿಸ್ತಾನದ ಐತಿಹಾಸಿಕ ಸ್ಥಳದಲ್ಲಿ ಜಂಟಿ ಉತ್ಖನನದ ಸಮಯದಲ್ಲಿ ಈ ದೇವಾಲಯ ಪತ್ತೆಯಾಗಿದ್ದು, ಇದು ಸುಮಾರು 2300 ವರ್ಷಗಳಷ್ಟು ಹಳೆಯ ದೇವಾಲಯವಾಗಿದೆ. ಈ ದೇವಾಲಯದಲ್ಲಿನ ಶಿಲ್ಪಕಲೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ, ಈ ಬಗ್ಗೆ ಇನ್ನಷ್ಟು ಅಧ್ಯಯನದ ನಂತರ ಮಾಹಿತಿ ದೊರೆಯಲಿದೆ ಅಂತ ಸಂಶೋಧಕರು ಹೇಳಿದ್ದಾರೆ.

ದೇವಾಲಯದ ಹೊರತಾಗಿ, ಪುರಾತತ್ವಜ್ಞರು ಹಲವು ಕಲಾಕೃತಿಗಳನ್ನ ಕೂಡ ಕಂಡು ಹಿಡಿದಿದ್ದಾರೆ. ಇವುಗಳಲ್ಲಿ ಸುಮಾರು 2,700 ಬೌದ್ಧ ಕಲಾಕೃತಿಗಳು, ನಾಣ್ಯಗಳು, ಉಂಗುರಗಳು, ಪಾತ್ರೆಗಳು ಪತ್ತೆಯಾಗಿದೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶ ಅಂದರೆ ಅದು ಗ್ರೀಸ್​ನ ರಾಜ ಮಿನಾಂದಾರ್ನ ಕಾಲದ ಖರೋಷ್ಠಿ ಭಾಷೆಯಲ್ಲಿ ಬರೆಯಲಾದ ವಸ್ತುಗಳು ಪತ್ತೆಯಾಗಿರೋದು. ಗ್ರೀಸ್​ನ ರಾಜ ಮಿನಾಂದರ್​ ಕಾಲಕ್ಕೆ ಸಂಬಂಧ ಪಟ್ಟ ಪತ್ರ ಪತ್ತೆಯಾಗಿರೋದು, ಬೌದ್ಧ ಮತ ಗ್ರೀಸ್​ನಲ್ಲೂ ಪಸರಿಸಿತ್ತಾ ಅನ್ನೋ ಅನುಮಾನವನ್ನ ಕೂಡ ಹುಟ್ಟು ಹಾಕಿದೆ. ಸದ್ಯಕ್ಕೆ ಈ ಬಗ್ಗೆ ಸಂಶೋಧಕರು ಅಧ್ಯಯನವನ್ನ ನಡೆಸುತ್ತಾ ಇದ್ದು, ಅಧ್ಯಯನದ ನಂತರವಷ್ಟೆ ಉಳಿದ ಮಾಹಿತಿ ಬರಬೇಕಾಗಿದೆ ಅಂತ ಹೇಳಲಾಗ್ತಾ ಇದೆ.

ಪಾಕಿಸ್ತಾನದಲ್ಲಿ ಈ ರೀತಿ ದೇವಾಲಯ ಪತ್ತೆಯಾಗ್ತಾ ಇರೋದು ಇದೇ ಮೊದಲಲ್ಲ. ಈ ಹಿಂದೆ 2020 ರಲ್ಲಿ ಇಲ್ಲಿ ವಿಷ್ಣು ದೇವಾಲಯದ ಅವಶೇಷಗಳು ಕಂಡುಬಂದಿತ್ತು. ಸ್ವಾತ್ ಜಿಲ್ಲೆಯಲ್ಲಿ ನಡೆದ ಉತ್ಖನನದ ಸಮಯದಲ್ಲಿ, ಪುರಾತತ್ವಜ್ಞರು ವಿಷ್ಣು ದೇವಾಲಯದ ಅವಶೇಷಗಳನ್ನು ಕಂಡುಹಿಡಿದ್ದದ್ದು. ಸಾಕಷ್ಟು ಸದ್ದು ಕೂಡ ಮಾಡಿತ್ತು ಈ ದೇವಾಲಯದ ಅವಶೇಷಗಳು ಕನಿಷ್ಠ 1,000 ವರ್ಷಗಳಷ್ಟು ಹಳೆಯದು ಅಂತ ಸಂಶೋಧಕರು ಅಭಿಪ್ರಾಯ ಪಟ್ಟಿದ್ದರು. ಇನ್ನು ಈ ದೇವಾಲಯದ ಅವಶೇಷಗಳನ್ನ ಬಾರಿಕೋಟ್ ಘುಂಡೈ ಬೆಟ್ಟಗಳ ನಡುವೆ ಉತ್ಖನನ ಮಾಡಲಾಗಿತ್ತು. ಈ ವಲಯದಲ್ಲಿ ಮತ್ತಷ್ಟು ದೇವಾಲಯಗಳು ಪತ್ತೆಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗ್ತಾ ಇದೆ.

ಒಟ್ಟಾರೆಯಾಗಿ ಈಗ ಪತ್ತೆಯಾಗಿರುವ ಈ ಬೌದ್ಧ ದೇವಾಲಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಇಲ್ಲಿ ಇನ್ನಷ್ಟು ಉತ್ಖನನ ನಡೆದರೆ, ಇನ್ನಷ್ಟು ಮಾಹಿತಿಗಳು ಲಭ್ಯವಾಗುವ ಸಾಧ್ಯತೆ ಇದೆ ಅಂತ ವಿಜ್ಞಾನಿಗಳು ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಾ ಇದ್ದಾರೆ.

RELATED ARTICLES

Related Articles

TRENDING ARTICLES