Wednesday, January 22, 2025

ಶಾಸಕ ರೇಣುಕಾಚಾರ್ಯ ಸವಾಲು

ಬೆಳಗಾವಿ: ತಾಕತ್ ಇದ್ರೆ ಮತಾಂತರ ನಿಷೇಧ ವಿಧೇಯಕ ತಡೆಯಿರಿ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತಾಂತರ ನಿಷೇಧ ವಿಧೇಯಕ ಹರಿದು ಹಾಕಿದ್ದಾರೆ,  ಕದ್ದು ಮುಚ್ಚಿ ಮಸೂದೆ ತಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ನಾವು ಕದ್ದುಮುಚ್ಚಿ ಮಸೂದೆ ಮಂಡಿಸಿಲ್ಲ. ಮತಾಂತರ ನಿಷೇಧ ಕಾಯ್ದೆ ತರಬೇಕು ಅಂತ ರಾಜಾರೋಷವಾಗಿ ಮಂಡಿಸಿದ್ದೇವೆ.

ಒಬ್ಬ ಕೆ.ಜೆ. ಜಾರ್ಜ್‌ಗೋಸ್ಕರ, ಒಬ್ಬ ಸೋನಿಯಾ ಗಾಂಧಿಗೋಸ್ಕರ ಇವರೆಲ್ಲ ಬಿಲ್ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮೊದಲೇ ಇವರು ಹಿಂದು ವಿರೋಧಿಗಳು. ಕ್ರೈಸ್ತ, ಮುಸ್ಲಿಂ ಓಲೈಕೆಗೆ ಹೀಗೆ ಮಾಡ್ತಿದ್ದಾರೆ. ಲೋಕಸಭೆ, ವಿಧಾನಸಭೆಯಲ್ಲಿ ಜನ ನಿಮಗೆ ಬುದ್ದಿ ಕಲಿಸಿದ್ದಾರೆ. ಮತಾಂತರ ಕಾಯ್ದೆ ವಿರೋಧ ಮಾಡುವುದು ಮತಾಂತರಕ್ಕೆ ಪ್ರಚೋದನೆ ಕೊಟ್ಟಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES