Thursday, January 9, 2025

ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಧಮ್ಕಿ

ಬೆಳಗಾವಿ: ಮಾಜಿ ಸಂಸದ ಪ್ರಕಾಶ ಹುಕ್ಕೇರಿಚುನಾವಣಾ ಕಣದಲ್ಲಿರುವ ತಮ್ಮ ವಿರೋಧಿ ಅಭ್ಯರ್ಥಿಗೆ ಧಮ್ಕಿ ಹಾಕಿರುವ ಪ್ರಕರಣ ಬಯಲಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಯಕ್ಸಂಬಾ ಪಟ್ಟಣದಲ್ಲಿ ನಡೆಯುತ್ತಿರುವ ಪಟ್ಟಣ ಪಂಚಾಯಿತಿ ಚುನಾವಣಾ ಅಭ್ಯರ್ಥಿಗೆ ಪ್ರಕಾಶ ಹುಕ್ಕೇರಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ಶಾಸಕ ಗಣೇಶ ಹುಕ್ಕೇರಿ ತಂದೆಯಾದ ಪ್ರಕಾಶ ಹುಕ್ಕೇರಿ, ಮಾಜಿ ಸಂಸದ, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕರೂ ಸಹ ಆಗಿದ್ದಾರೆ.  ಪ್ರಕಾಶ ಹುಕ್ಕೇರಿ ತಮ್ಮ ಧಮ್ಕಿಯಲ್ಲಿ ಚುನಾವಣೆಯಿಂದ ಹಿಂದೆ ಸರಿಯದಿದ್ದರೆ ನಿನ್ನ ಕಬ್ಬು ಯಾವುದೇ ಕಾರ್ಖಾನೆಗೆ ಹೋಗದೆ ಹಾಗೆ ನೋಡಿಕೊಳ್ಳುತ್ತೇನೆ , ನಿನ್ನ ಜಮೀನಿನ‌ ನೊಂದನಿ ನನ್ನ ಹತ್ರ ಇದೆ, ಯಾವ ಕಾರ್ಖಾನೆಗೂ ನಿನ್ನ‌ ಕಬ್ಬು ಕಳಿಸಲು ಬಿಡುವುದಿಲ್ಲ, ಪ್ರಭಾಕರ ಕೋರೆಗೂ ಕರೆ ಮಾಡಿ ಹೇಳುತ್ತೇನೆ ನಿನ್ನ ಕಬ್ಬ ತೊಗೊಬೇಡ ಅಂತ, ನಿನ್ನ ಖಾಸಗಿ ಕಂಪನಿ‌ ಬಂದ ಮಾಡಿಸುತ್ತೇನೆ’ ಎಂದೆಲ್ಲ ಹೇಳಿರುವ ಆಡಿಯೋ ಇದೀಗ ಆ ಭಾಗದಲ್ಲಿ ಫುಲ್ ವೈರಲ್ ಆಗಿದೆ. ಇವರು ಈ ರೀತಿಯಾಗಿ ತಮ್ಮ ವಿರೋಧಿ ಚುನಾವಣಾ ಅಭ್ಯರ್ಥಿಗೆ ಧಮ್ಕಿ ಹಾಕಿರುವುದಕ್ಕೆ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES