Thursday, April 18, 2024

ಲೇಖಕರಿಗೆ ಜವಾಬ್ದಾರಿ ಅಗತ್ಯ: ವೆಂಕಯ್ಯನಾಯ್ಡು

ನವದೆಹಲಿ: ಇತರರ ನಂಬಿಕೆ ಅಥವಾ ಭಾವನೆಗಳಿಗೆ ಧಕ್ಕೆಯಾಗದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.  ನವದೆಹಲಿಯ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಇತರರ ನಂಬಿಕೆ ಅಥವಾ ಭಾವನೆಗಳಿಗೆ ಧಕ್ಕೆಯಾಗದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಲೇಖಕರು & ಚಿಂತಕರು ಬೌದ್ಧಿಕತೆಯನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಸಮಾಜದಲ್ಲಿ ಚರ್ಚೆ, ವಿವಾದಗಳನ್ನು ಪ್ರಚೋದಿಸುವುದಿಲ್ಲ ಎಂದರು.

ಖ್ಯಾತ ಹಿಂದಿ ಲೇಖಕ ವಿಶ್ವನಾಥ್ ಪ್ರಸಾದ್ ತಿವಾರಿಗೆ ಈ ವರ್ಷದ ಮೂರ್ತಿದೇವಿ ಪ್ರಶಸ್ತಿಯನ್ನ ಅವರ ಅತ್ಯುತ್ತಮ ಕೃತಿ “ಅಸ್ತಿ ಔರ್ ಭವತಿ” ಗಾಗಿ ಪ್ರದಾನ ಮಾಡಲಾಯಿತು. ‘ಪದ’ ಮತ್ತು ‘ಭಾಷೆ’ ಮಾನವ ಇತಿಹಾಸದ ಪ್ರಮುಖ ಆವಿಷ್ಕಾರಗಳು ಎಂದು ಬಣ್ಣಿಸಿದ ಅವರು, ಸಾಹಿತ್ಯವು ಸಮಾಜದ ಚಿಂತನೆ-ಸಂಪ್ರದಾಯಗಳ ಜೀವಂತ ವಾಹಕವಾಗಿದೆ ಎಂದರು.

RELATED ARTICLES

Related Articles

TRENDING ARTICLES