Wednesday, January 22, 2025

ಸಂಯಮ,ಶಾಂತಿ ಸೌಹಾರ್ಧತೆ ಕಾಪಾಡಿ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬೆಳಗಾವಿಯಲ್ಲಿ MES ಪುಂಡರ ಪುಂಡಾಟಕ್ಕೆ ಸಿದ್ದರಾಮಯ್ಯ ಟ್ಚಿಟರ್​ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದು, ಸರ್ಕಾರವು ಈ ವಿರುದ್ಧ ತಕ್ಷಣ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯವಾಗಿದೆ. ಹಾಗೂ ತಕ್ಷಣವೇ ಆ ಗೂಂಡಾಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತು ಮುಖ್ಯಮಂತ್ರಿಯವರೇ, ಕ್ರಿಯೆಗೆ ಪ್ರತಿಕ್ರಿಯೆ ಎಂಬ  ಮೊಂಡುವಾದವನ್ನು ಮಂಡಿಸದೆ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ.

ಅಲ್ಲದೇ ಸಿಎಂ ತಕ್ಷಣವೇ ಪೊಲೀಸರಿಗೆ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲು ಆದೇಶ ನೀಡಬೇಕು. ಕಾನೂನಿನ ಮೂಲಕ ಪುಂಡರಿಗೆ ಕಠಿಣ ಸಂದೇಶ ಹೋಗುವಂತಾಗಬೇಕು. ಇನ್ನು ಕನ್ನಡದ ಬಂಧುಗಳು,  ಅಭಿಮಾನಿಗಳು ಆವೇಶಕ್ಕೆ ಒಳಗಾಗದೇ ಸಂಯಮ,ಶಾಂತಿ ಸೌಹಾರ್ಧತೆ ಕಾಪಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಹಾಗೂ MES ಪುಂಡರ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES